“ಎಲ್ ಇಡಿ ಎಕ್ಸ್ ಪೋ-2024 ಮುಂಬೈ”; ಲೈಟಿಂಗ್ ಕಾರ್ಯಾಗಾರದಲ್ಲಿ ಪಶುಪತಿ ಶರ್ಮರಿಗೆ ಪ್ರಶಸ್ತಿ –ಕಹಳೆ ನ್ಯೂಸ್
ಪುತ್ತೂರು: ಇತ್ತೀಚೆಗೆ ಮುಂಬಯಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ‘ಎಲ್ ಇಡಿ ಎಕ್ಸ್ ಪೊ-೨೦೨೪’ ನಲ್ಲಿ ಪುತ್ತೂರು ಮೂಲದ ಉದ್ಯಮಿ ಪಶುಪತಿ ಶರ್ಮರವರು ಭಾಗವಹಿಸಿ ‘ಅತ್ಯುತ್ತಮ ಭಾಗವಹಿಸುವಿಕೆದಾರ’ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ನ್ಯೂಯಾರ್ಕ್ ನ ಐಇ ಎಸ್ಸಂ (The Lighting Authority )ಸ್ಥೆ ಯ ತರಬೇತುದಾರರು ಈ ಕಾರ್ಯಾಗಾರದ ತರಬೇತುದಾರರಾಗಿದ್ದರು. ಎರಡು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಮನೆಯಲ್ಲಿ ಆರೋಗ್ಯಪೂರಿತ ಲೈಟ್ಸ್ ಗಳ ಅಳವಡಿಕೆ, ಲೈಟ್ಸ್ ಗಳ ಬಣ್ಣಗಳನ್ನು ಆಯ್ಕೆ ಮಾಡುವುದು, ಪ್ರಾಜೆಕ್ಟ್ ಗಳಿಗೆ ಸಂಬAಧಿಸಿದ ಲೈಟ್ಸ್ ಗಳು, ಲೈಟ್ಸ್ ಗಳ ಅಳವಡಿಸುವಿಕೆಯಲ್ಲಿ ಹೊಸತನ, ಹೊಳೆಯುವಿಕೆ ಎಷ್ಟಿರಬೇಕು ಎಂಬಿತ್ಯಾದಿಗಳ ಕುರಿತು ಚರ್ಚೆಗಳು ನಡೆದವು. ಪುತ್ತೂರು ಮತ್ತು ಮಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಹಲವು ಪ್ರಾಜೆಕ್ಟ್ ಗಳು, ಮನೆಗಳಲ್ಲಿ ವಿದ್ಯುತ್ ದೀಪಗಳ ಅಳವಡಿಕೆಯ ಯೋಜನೆಯೊಂದಿಗೆ ಜಿ.ಎಲ್.ಮಾಲ್,ಜಿ ಎಲ್ ಆಭರಣ ಮಳಿಗೆಗಳು, ಅರುಣ ಕಲಾಮಂದಿರ,ಪಾಪ್ಯುಲರ್ ಸೆಲೆಬ್ರೆಷನ್,ಮಹಾಲಿಂಗೇಶ್ವರ ಸಭಾಭವನ,ಮುಳಿಯ ಜ್ಯುವೆಲ್ಸ್, ಮಂಗಳೂರಿನ ಕಾಕುಂಜೆ ಸಿರಿ,ಪ್ರೆಸ್ಟಿಜ್,ನಿಷ್ಕ ಲೇ ಔಟ್ ಹೀಗೆ ಹಲವುಹಲವು ಪ್ರಾಜೆಕ್ಟ್ ಗಳನ್ನು ಮಾಡಿರುವ ಅನುಭವ ಹೊಂದಿರುವ ಪಶುಪತಿ ಶರ್ಮರವರು ಪ್ರತಿಷ್ಠಿತ ಆರ್ಕಿಟೆಕ್ಟ್ಸ್ ಮತ್ತು ಇಂಜಿನಿಯರ್ ಗಳ ಹಾಗೂ ಗ್ರಾಹಕರ ವಿಶ್ವಾಸದ ಪಶುಪತಿ ಲೈಟ್ಸ್, ಎಲೆಕ್ಟ್ರಿಕಲ್ ವ್ಯವಹಾರವನ್ನು ಪುತ್ತೂರಿನ ದರ್ಬೆಯಲ್ಲಿರುವ ಫಿಲೋಮಿನಾ ಕಾಲೇಜು ಮುಂಭಾಗದ ಮಳಿಗೆಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ.