ಬಿಟ್ಟಿ ಭಾಗ್ಯಗಳಿಂದ ಈಗಾಗಲೇ ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬೆಲೆ ಏರಿಸಿ ಜನರ ನಂಬಿಕೆಗೆ ದ್ರೋಹ ಬಗೆಯುತ್ತಿದೆ –ಸಾಜ ರಾಧಕೃಷ್ಣ ಆಳ್ವ –ಕಹಳೆ ನ್ಯೂಸ್
ಪುತ್ತೂರು: ಕರ್ನಾಟಕ ಸರ್ಕಾರ ಪೆಟ್ರೋಲ್ಹಾ(Petrol)ಗೂ ಡೀಸೆಲ್ (Diesel) ದರ ಏರಿಕೆಗೊಳಿಸಿ ವಾಹನ ಸವಾರರಿಗೆ ಶಾಕ್ ನೀಡಿದ್ದಲ್ಲದೆ ಜನರ ಮೇಲೆ ದೊಡ್ಡ ಹೊರೆಯನ್ನು ಹೊರೆಸಿದೆ. ಇದೊಂದು ಜನವಿರೋಧಿ ಸರ್ಕಾರ ಎಂದು ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ತಕ್ಷಣವೇ ಜಾರಿಗೆ ಬರುವ ಹಾಗೆ ಪೆಟ್ರೋಲ್, ಡಿಸೇಲ್ ಧರವನ್ನು ಏರಿಸಿ ಜನರಿಗೆ ಗಾಯದ ಮೇಲೆ ಬರೆಯನ್ನು ಎಳೆದಿದ್ದಾರೆ. ಲೋಕಸಭಾ ಚುನಾವಣಾ ಮುಗಿದ ಕೂಡಲೇ ರಾಜ್ಯ ಸರ್ಕಾರ ತನ್ನ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಪೆಟ್ರೋಲ್ ಹಾಗು ಡಿಸೇಲ್ ಬೆಲೆ ಏರಿಕೆಯಿಂದ ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆ ಆಗುವುದು. ಇದರಿಂದ ಜನಸಾಮಾನ್ಯರ ಜೀವನ ಅಸ್ತವ್ಯಸ್ತವಾಗುವುದು. ಈಗಾಗಲೇ ರಾಜ್ಯ ಸರ್ಕಾರ ಆಸ್ತಿ ತೆರಿಗೆ, ಸ್ಟಾಂಪ್ ಡ್ಯೂಟಿ ಹೆಚ್ಚಿಗೆ ಮಾಡಿ ಜನರಿಗೆ ಹೊರೆಯಾಗಿಸಿದೆ. ಬಿಟ್ಟಿ ಭಾಗ್ಯಗಳಿಂದ ಈಗಾಗಲೇ ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ರೀತಿ ಬೆಲೆ ಏರಿಸಿ ಜನರ ನಂಬಿಕೆಗೆ ದ್ರೋಹ ಬಗೆಯುತ್ತಿದೆ ಎಂದು ಆರೋಪಿಸಿದ್ದಾರೆ. ಏರಿಸಿದ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕೂಡಲೇ ಹಿಂಪಡೆಯಬೇಕು ಇಲ್ಲವಾದಲ್ಲಿ ಜಿಜೆಪಿ ಜನರ ಪರವಾಗಿ ಪ್ರತಿಭಟನೆ ಮಾಡಲಿದೆ ಎಂಸವರು ಸರಕಾರವನ್ನು ಎಚ್ಚರಿಸಿದ್ದಾರೆ.