Monday, March 31, 2025
ದಕ್ಷಿಣ ಕನ್ನಡಭಟ್ಕಳಸುದ್ದಿ

ಭಟ್ಕಳ: ಹಿಂಸಾತ್ಮಕವಾಗಿ ಎರಡು ಕೋಣಗಳ ಸಾಗಾಟ: ಇಬ್ಬರು ಆರೋಪಿಗಳ ಬಂಧನ-ಕಹಳೆ ನ್ಯೂಸ್

ಭಟ್ಕಳ: ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಮಾನವೀಯವಾಗಿ ಕಾಲುಗಳನ್ನು ಹಗ್ಗದಿಂದ ಕಟ್ಟಿಹಾಕಿ ಒಣಹುಲ್ಲುಗಳ ಅಡಿಯಲ್ಲಿ ಎರಡು ಕೋಣಗಳನ್ನು ಅಡಗಿಸಿಟ್ಟು ಸಾಗಾಟ ಮಾಡುತ್ತಿರುವಾಗ ಪೊಲೀಸರು ಪತ್ತೆ ಹಚ್ಚಿ ವಾಹನ ಸಮೇತ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಾದ ಹಡೀಲ ಜೋಳದಮೂಲೆ ನಿವಾಸಿ ರಾಮ ಬಡ್ಕಾ ನಾಯ್ಕ (43) ಹಾಗೂ ಬೆಳಕೆ ಕಾನಮಡ್ಲು ನಿವಾಸಿ ರಾಮಚಂದ್ರ ಸುಬ್ಬ ನಾಯ್ಕ (42) ಅವರನ್ನು ಕೂಡಾ ವಶಕ್ಕೆ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಗಳು, ಅಂದಾಜು 50 ಸಾವಿರ ಮೌಲ್ಯದ ಎರಡು ಕೋಣಗಳನ್ನು ಮಹೀಂದ್ರಾ ಬೊಲೆರೋ ವಾಹನದಲ್ಲಿ ಹಿಂಸಾತ್ಮಕವಾಗಿ ಬೈಂದೂರಿನಿAದ ಭಟ್ಕಳ ಕಡೆಗೆ ಸಾಗಾಟ ಮಾಡುವ ಉದ್ದೇಶದಿಂದ ಹೋಗುತ್ತಿರುವಾಗ, ಪುರವರ್ಗದ ರಾಷ್ಟ್ರೀಯ ಹೆದ್ದಾರಿಯ ಮೇಲಿರುವ ಪೊಲೀಸ್ ಚೆಕ್‌ಪೋಸ್ಟ್ ಬಳಿ ಪೊಲೀಸರು ಪತ್ತೆ ಹಚ್ಚಿ, ವಾಹನ ಹಾಗೂ ಕೋಣಗಳನ್ನು ವಶಕ್ಕೆ ಪಡೆದು, ಆರೋಪಿಗಳನ್ನು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಈ ಸಂಬAಧ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಶಿವಾನಂದ ನಾವದಗಿ ನೀಡಿದ ದೂರಿನ ಮೇರೆಗೆ, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ