Tuesday, January 21, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ಕೆನರಾ ನಂದಗೋಕುಲ್ ಸಂಸ್ಥೆಯ ಆಶ್ರಯದಲ್ಲಿ ತಂದೆಯAದಿರ ದಿನಾಚರಣೆಯನ್ನು ವಿಜೃಂಭಣೆಯಿAದ ಆಚರಿಸಲಾಯಿತು-ಕಹಳೆ ನ್ಯೂಸ್

ಮಂಗಳೂರು:ಕೆನರಾ ನಂದಗೋಕುಲ್ ಸಂಸ್ಥೆಯ ಆಶ್ರಯದಲ್ಲಿ ಜೂನ್ 16ರಂದು ತಂದೆಯAದಿರ ದಿನಾಚರಣೆಯನ್ನು ಶ್ರೀ ಭುವನೇಂದ್ರ ಸಭಾಂಗಣದಲ್ಲಿ ವಿಜೃಂಭಣೆಯಿAದ ಆಚರಿಸಲಾಯಿತು.
ಕೆನರಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀ ಸುರೇಶ್ ಕಾಮತ್ ಸಮಾರಂಭದ ಉದ್ದೇಶವನ್ನು ವಿವರಿಸುತ್ತಾ “ಇಂತಹ ಆಚರಣೆಗಳು ತಂದೆ-ಮಕ್ಕಳ ನಡುವಿನ ಸೌಹಾರ್ದತೆಯನ್ನು ಹೆಚ್ಚಿಸುತ್ತವೆ. ತಂದೆ-ಮಕ್ಕಳ ಬಾಂಧವ್ಯವು ಅಶ್ವತ್ಥ ಮರದಂತೆ ಬಲವಾದದ್ದು. ಈ ದಿನವು ತಂದೆಯ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ತಕ್ಕ ದಿನ” ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಂದೆ-ಮಕ್ಕಳು ತಮ್ಮ ಅನನ್ಯ ಬಾಂಧವ್ಯದ ಸಿಹಿತನವನ್ನು ಅನುಭವಿಸಿದರು. ಮಕ್ಕಳ ಮೃದು ಕಿರುನಗೆಯು ತಂದೆಯ ಹೃದಯಕ್ಕೆ ಮತ್ತಷ್ಟು ಹತ್ತಿರವಾಯಿತು.ತಂದೆ-ಮಕ್ಕಳು ಮನರಂಜನೆಯಲ್ಲಿ ನಗುತ್ತಾ, ಹಾಡುತ್ತಾ, ಆಟವಾಡುತ್ತಾ ಆನಂದಿಸಿದರು. ವಿಶೇಷವಾಗಿ, ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿಯಲು ಸೆಲ್ಫಿ ಬೂತ್ ವ್ಯವಸ್ಥೆ ಮಾಡಲಾಗಿತ್ತು, ಇದರಲ್ಲಿ ತಂದೆ-ಮಕ್ಕಳು ತಮ್ಮ ಮನಸ್ಸುಗಳಲ್ಲಿಯೇ ಉಳಿಯುವಂತಹ ಛಾಯಾಚಿತ್ರಗಳನ್ನು ತೆಗೆಸಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ತAದೆ-ಮಕ್ಕಳ ಒಡನಾಟ ಪ್ರೀತಿಯ ಬಿರುಸನ್ನು ಮತ್ತಷ್ಟು ಹೆಚ್ಚಿಸಿತು. ಎಲ್ಲರೂ ದಿನದ ಅಮೂಲ್ಯ ಕ್ಷಣಗಳನ್ನು ಮೆಲುಕು ಹಾಕುತ್ತ ಮನೆಗೆ ಮರಳಿ ಹೋಗುವಂತೆ ಕಾರ್ಯಕ್ರಮವನ್ನು ಸಮಾಪನಗೊಳಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾರಂಭದಲ್ಲಿ ಕೆನರಾ ಹೈ ಸ್ಕೂಲ್ ಅಸೋಸಿಯೇಷನ್‌ನ ಉಪಾಧ್ಯಕ್ಷರಾದ ಶ್ರೀ ಕೆ. ಸುರೇಶ್ ಕಾಮತ್, ಕೆನರಾ ನಂದಗೋಕುಲ್ ಮತ್ತು ಕೆನರಾ ಅಂತಾರಾಷ್ಟ್ರೀಯ ಶಾಲೆಯ ನಿರ್ದೇಶಕಿ ಶ್ರೀಮತಿ ಅಂಜನಾ ಕಾಮತ್, ಸಂಯೋಜಕಾರದ ವಂದನಾ ಮತ್ತು ಪೂರ್ಣಿಮಾ ಹಾಗೂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.