Friday, September 20, 2024
ಸುದ್ದಿ

ಚೀನಾ ಪಟಾಕಿಗಳ ಅಕ್ರಮ ಮಾರಾಟದ ಮೇಲೆ ಕಾನೂನು ಕಾರ್ಯಚರಣೆಯನ್ನು ಮಾಡಲು ಒತ್ತಾಯ – ಕಹಳೆ ನ್ಯೂಸ್

ಪುತ್ತೂರು: ದೇವತೆಗಳು-ರಾಷ್ಟ್ರಪುರುಷರ ಚಿತ್ರಗಳಿರುವ ಮತ್ತು ಚೀನಾ ಪಟಾಕಿಗಳ ಅಕ್ರಮ ಮಾರಾಟದ ಮೇಲೆ ಕಾನೂನು ಕಾರ್ಯಚರಣೆಯನ್ನು ಮಾಡಲು ಒತ್ತಾಯಿಸಿ ಪುತ್ತೂರು ತಹಶೀಲ್ದಾರರು, ನಗರ ಪೊಲೀಸ್ ಠಾಣೆ, ನಗರದ ಮುಖ್ಯ ಪಟಾಕಿ ಮಾರಾಟ ಮಳಿಗೆಗಳಾದ ಕೆ.ವಿ. ಪೈ, ಶ್ರೀಧರ ಭಟ್ ಬ್ರದರ್ಸ್ ಮೊದಲಾದ ಮಳಿಗೆಗಳಿಗೆ ಮನವಿ ನೀಡಲಾಯಿತು.

ಮಾರುಕಟ್ಟೆಯಲ್ಲಿ ಶ್ರೀಲಕ್ಷ್ಮೀ, ಶ್ರೀಕೃಷ್ಣ, ಶ್ರೀವಿಷ್ಣು ಇತ್ಯಾದಿ ದೇವತೆಗಳ ಹಾಗೂ ನೇತಾಜಿ ಸುಭಾಷಚಂದ್ರ ಬೋಸ್, ಲೋಕಮಾನ್ಯ ತಿಲಕ ಇತ್ಯಾದಿ ರಾಷ್ಟ್ರಪುರುಷರ ಚಿತ್ರಗಳಿರುವ ಪಟಾಕಿಯನ್ನು ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದೆ. ಇಂತಹ ಪಟಾಕಿಗಳನ್ನು ಉರಿಸಿದಾಗ ದೇವತೆಗಳ ಹಾಗೂ ರಾಷ್ಟ್ರಪುರುಷರ ಚಿತ್ರವು ಛಿದ್ರವಾಗಿ ರಸ್ತೆಯ ತುಂಬಾ ಹರಡುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಇದರಿಂದ ಅದು ಜನರ ಕಾಲಿನಡಿಯಲ್ಲಿ ಹಾಗೂ ವಾಹನದ ಅಡಿಯಲ್ಲಿ ಅಥವಾ ಕಸದ ಬುಟ್ಟಿ ಹಾಗೂ ಚರಂಡಿಯಲ್ಲಿ ಬಿದ್ದಿರುವುದು ಕಾಣಿಸುತ್ತದೆ. ಇದರಿಂದ ದೇವಿ-ದೇವತೆಗಳ ಘೋರ ಅವಮಾನ ಹಾಗೂ ರಾಷ್ಟ್ರಪುರುಷರ ಅಗೌರವವಾಗುತ್ತದೆ. ದೇವಿ-ದೇವತೆಗಳ ಅವಮಾನವನ್ನು ಮಾಡುವುದು ಪಾಪವೇ ಆಗಿದೆ ಹಾಗೂ ನಮಗೆ ತಿಳಿಯದೇ ನಾವು ಆ ಪಾಪದ ಭಾಗಿಯಾಗುತ್ತಿದ್ದೇವೆ. ಭಾರತೀಯ ಸಂವಿಧಾನಕ್ಕನುಸಾರ `ಧಾರ್ಮಿಕ ಭಾವನೆಗೆ ಘಾಸಿ ಗೊಳಿಸುವುದು’ ಒಂದು ಗಂಭೀರವಾದ ಅಪರಾಧವೇ ಆಗಿದೆ.

ಅಕ್ರಮ ಪಟಾಕಿ ಮಾರಾಟ ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು!

ಭಾರತದಲ್ಲಿ ಹರಡುತ್ತಿರುವ ಚೈನಾ ವಸ್ತುಗಳ ವ್ಯಾಪಾರದಲ್ಲಿ ಕಳೆದ ಕೆಲವು ವರ್ಷಗಳಿಂದ ಚೈನಾ ಪಟಾಕಿಯೂ ಕೂಡ ದೊಡ್ಡ ಪ್ರಮಾಣದಲ್ಲಿ ಬಂದಿದೆ. ಇದರಲ್ಲಿ ವಿಷಕಾರಿ ಪದಾರ್ಥದ ಪ್ರಮಾಣವು ಹೆಚ್ಚು ಇರುತ್ತದೆ. ಅದನ್ನು ತಯಾರಿಸುವಾಗ `ಪೊಟ್ಯಾಶಿಯಮ್ ಕ್ಲೊರೈಡ್’ ಹಾಗೂ `ಪೊಟ್ಯಾಶಿಯಮ್ ಪರಕ್ಲೊರೈಡ್’ ಈ ರಾಸಾಯನಿಕ ವಿಶ್ರಣವನ್ನು ಉಪಯೋಗಿಸಲಾಗುತ್ತದೆ. ಆದರೆ ಭಾರತದಲ್ಲಿ ಈ ರಾಸಾಯನಿಕ ಪದಾರ್ಥಗಳ ಮೇಲೆ ನಿರ್ಬಂಧ ಇದೆ. ಈ ರಾಸಾಯನಿಕಗಳು ಅತ್ಯಂತ ಮಾಲಿನ್ಯಕಾರಿಯಾಗಿದೆ.

ಭಾರತ ಸರಕಾರವು ಚೀನೀ ಪಟಾಕಿಗಳ ಮೇಲೆ ಈ ದೀಪಾವಳಿಯಂದು ನಿರ್ಬಂಧವನ್ನು ಹೇರಿದೆ. `ಎಕ್ಸಪ್ಲೋಜಿವ್ ಆಕ್ಟ್ 2008′ ದ ಅನ್ವಯ ವಿದೇಶಿ ಸ್ಪೋಟಕಗಳನ್ನು ಇಟ್ಟುಕೊಳ್ಳುವುದು ಹಾಗೂ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ಸಹ ಅಕ್ರಮವಾಗಿ ತಂದು ಮಾರಾಟ ಮಾಡಲಾಗುತ್ತಿದೆ. ಈ ಪಟಾಕಿಗಳು ಆರೋಗ್ಯದ ದೃಷ್ಠಿಯಲ್ಲಿ ಅಪಾಯಕಾರಿಯಾಗಿದೆ. ಅದಕ್ಕಾಗಿ ಇಂತಹ ಪಟಾಕಿ ಮಾರಾಟ ಮಾಡುವವರ ಮತ್ತು ಉಪಯೋಗಿಸುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಎಂದು ಸಮಿತಿಯ ಮನವಿಯಲ್ಲಿ ವಿನಂತಿಸಲಾಗಿದೆ.

ಮನವಿ ನೀಡುವ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ದಯಾನಂದ ಹೆಗ್ಡೆ, ಶ್ರೀ. ಯೋಗೀಶ್, ಶ್ರೀ. ಹರಿಪ್ರಸಾದ್ ಶೆಟ್ಟಿ, ಶ್ರೀ. ನಾಗೇಶ್, ಶ್ರೀ. ಪ್ರಶಾಂತ್, ಶ್ರೀ. ಕೇಶವ ಗೌಡ ಮೊದಲಾದವರು ಉಪಸ್ಥಿತರಿದ್ದರು.