Monday, January 20, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ರಾಷ್ಟ್ರೀಯ ಹೆದ್ದಾರಿ ಮಂಗಳೂರು – ಬೆಂಗಳೂರು ಮಧ್ಯೆ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಮಗುಚಿ ಬಿದ್ದ ಪಿಕಪ್ – – ಕಹಳೆ ನ್ಯೂಸ್

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಮಂಗಳೂರು – ಬೆಂಗಳೂರು ಮಧ್ಯೆ ತುಂಬೆ ತಿರುವಿನಲ್ಲಿ ಹೆಚ್ಚುತ್ತಿರುವ ಅಪಘಾತದಿಂದ ವಾಹನ ಸವಾರರಲ್ಲಿ ಆತಂಕ ಮನೆ ಮಾಡಿದೆ. ಎರಡು ವಾರಗಳ ಅಂತರದಲ್ಲಿ ಎರಡು ವಾಹನಗಳು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಮಗುಚಿ ಬಿದ್ದ ಘಟನೆ ನಡೆದಿದೆ.

ಕಳೆದ ವಾರ ಎಲ್.ಪಿ.ಜಿ ಗ್ಯಾಸ್ ಟ್ಯಾಂಕ್ ಹೊಂದಿದ ಲಾರಿಯೊಂದು ರಸ್ತೆಗೆ ಪಲ್ಟಿಯಾಗಿದೆ. ಇದೀಗ ಇಂದು ಬೆಳಿಗ್ಗೆ ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ವಾಹನವೊಂದರ ಇಂಜಿನ್ ನ್ನು ಕೊಂಡು ಹೋಗುತ್ತಿದ್ದ ಪಿಕಪ್ ವಾಹನ ತುಂಬೆ ತಿರುವಿನಲ್ಲಿ ಪಲ್ಟಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅವೈಜ್ಞಾನಿಕ ರೀತಿಯ ಹೆದ್ದಾರಿಯ ನಿರ್ಮಾಣಗೊಂಡ ಬಳಿಕ ಈ ಜಾಗದಲ್ಲಿ ಅನೇಕ ವಾಹನಗಳು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಪಲ್ಟಿಯಾಗಿರುವುದು ಕಂಡು ಬಂದಿದೆ. ಮಳೆಗಾಲದಲ್ಲಂತೂ ಈ ಜಾಗದಲ್ಲಿ ಮಳೆಯ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದೆ ರಸ್ತೆ ತುಂಬಾ ಈಜು ಕೊಳವಾಗಿ ಮಾರ್ಪಾಡಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೇಲಿನ ಗುಡ್ಡದಿಂದ ಹರಿಯುವ ನೀರಿನ ಜೊತೆ ರಸ್ತೆಯ ಬದಿಯ ನೀರು ಹರಿದುಹೋಗಲು ಸರಿಯಾದ ಚರಂಡಿ ಇಲ್ಲದ ಕಾರಣ ತಿರುವಿನಲ್ಲಿ ಈಜುಕೊಳದಂತೆ ಮಳೆಗಾಲ ಮುಗಿಯುವವರೆಗೆ ನೀರು ತುಂಬಿರುತ್ತದೆ. ನೀರು ನಿಂತ ಪರಿಣಾಮ ವಾಹನ ಸವಾರರಿಗೆ ರಸ್ತೆ ಎಲ್ಲಿದೆ ಎಂಬುದೇ ಕಾಣದೆ ವಾಹನಗಳು ಅಪಘಾತಕ್ಕೆ ಕಾರಣವಾಗುತ್ತದೆ ಎಂದು ವಾಹನ ಸವಾರರು ಆರೋಪ‌ಮಾಡಿದ್ದಾರೆ.

‌ ಹೆದ್ದಾರಿ ಇಲಾಖೆಗೆ ಪತ್ರ: ಟ್ರಾಫಿಕ್ ಎಸ್.ಐ.ಸುತೇಶ್  ತುಂಬೆ ತಿರುವು ತುಂಬಾ ಅಪಾಯಕಾರಿಯಾಗಿದೆ. ಅನೇಕ ಬಾರಿ ಇಲ್ಲಿ ವಾಹನಗಳು ಪಲ್ಟಿಯಾಗಿದೆ. ಈ ಬಗ್ಗೆ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ‌‌ ತುಂಬಾ ಡೀಪ್ ಮತ್ತು ಏಕಾಏಕಿ ತಿರುವು ಆಗಿರುವುದರಿಂದ ವಾಹನಗಳು ಅಪಘಾತಕ್ಕೆ ಒಳಗಾಗುತ್ತದೆ. ಹಾಗಾಗಿ ಇಲ್ಲಿ ವಾಹನ ಸವಾರರು ಬಹಳ ಎಚ್ಚರಿಕೆಯಿಂದ ಚಾಲನೆ ಮಾಡಬೇಕಾಗಿದೆ.

ರಾಷ್ಟ್ರೀಯ ಹೆದ್ದಾರಿ ಆಗಿರುವ ಕಾರಣ ಇಲ್ಲಿ ವಾಹನಗಳ ವೇಗ ತಡೆಯಲು ಕೂಡ ಕಾನೂನಿನಲ್ಲಿ ಅವಕಾಶ ವಿಲ್ಲ, ಆದರೆ ಹೆದ್ದಾರಿ ಇಲಾಖೆಯವರು ರಬ್ಬರ್ ಹಂಪ್ಸ್ ಗಳನ್ನು ಅಳವಡಿಸಿದರೆ ವಾಹನಗಳು ಸ್ವಲ್ಪ ಮಟ್ಟಿಗೆ ವೇಗವನ್ನು ಕಡಿಮೆ ಮಾಡಿ ಸಂಚಾರ ಮಾಡಬಹುದು. ಈ ನಿಟ್ಟಿನಲ್ಲಿ ಅನೇಕ‌ಬಾರಿ ಹೆದ್ದಾರಿ ಇಲಾಖೆಗೆ ಪತ್ರವನ್ನು ಬರೆಯಲಾಗಿದೆ. ಈವರೆಗೆ ಇಲಾಖೆ ಗಮನಹರಿಸಿಲ್ಲ ಎಂದು ಅವರು ತಿಳಿಸಿದರು. ಇಲಾಖೆಯವರು ಅನುಮತಿ ನೀಡಿ ವೇಗ ನಿಯಂತ್ರಣಕ್ಕೆ ರಬ್ಬರ್ ಹಂಪ್ಸ್ ಗಳನ್ನು ಹಾಕಿದರೆ ಸ್ವಲ್ಪಮಟ್ಟಿಗೆ ಅಪಘಾತ ಕಡಿಮೆಯಾಗಬಹುದು ಎಂದಿದ್ದಾರೆ.