Tuesday, January 21, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಸರ್ವೀಸ್ ರಸ್ತೆಯ ಮೇಲೆ ಮಣ್ಣು ಹಾಕಿ ರಸ್ತೆ ನಿರ್ಮಾಣ : ಆಕ್ರೋಶ ವ್ಯಕ್ತಪಡಿಸಿದ ರ್ಸಾಜನಿಕರು – ಕಹಳೆ ನ್ಯೂಸ್

ಬಂಟ್ವಾಳ: ಪಾಣೆಮಂಗಳೂರು ಸರ್ವೀಸ್ ರಸ್ತೆಗೆ ಮಣ್ಣು ಹಾಕಿ ವಾಹನ ಸಂಚಾರಕ್ಕೆ ಅಡಚಣೆಯನ್ನು ಉಂಟು ಮಾಡಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ದೂರುಗಳು ಕೇಳಿ ಬಂದಿದ್ದು, ತಾಲೂಕಿನ ಅಧಿಕಾರಿಗಳು ಈ ಬಗ್ಗೆ ಯಾಕೆ ಮೌನ ಎಂಬ ಆರೋಪ ಮಾಡಿದ್ದಾರೆ.

ಬಿಸಿರೋಡಿನಿಂದ ಮೆಲ್ಕಾರ್ ಹೆದ್ದಾರಿಯ ಮಧ್ಯೆ ಭಾಗದ ಪಾಣೆಮಂಗಳೂರು ಎಂಬಲ್ಲಿ ಸರ್ವೀಸ್ ರಸ್ತೆಯ ಅರ್ಧ ಭಾಗಕ್ಕೆ ಮಣ್ಣು ಹಾಕಿದ್ದಾರೆ.ಗುಡ್ಡೆಯೊಂದರ ಮಣ್ಣನ್ನು ಅಗೆದು ಲಾರಿಯಲ್ಲಿ ಕೊಂಡು ಹೋಗುವ ದೃಷ್ಟಿಯಿಂದ ಸರ್ವೀಸ್ ರಸ್ತೆಗೆ ಮಣ್ಣು ಹಾಕಿ ರಸ್ತೆ ನಿರ್ಮಾಣ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ವೀಸ್ ರಸ್ತೆಯ ಮೇಲೆ ಮಣ್ಣು ಹಾಕಿ ರಸ್ತೆ ನಿರ್ಮಾಣ ಮಾಡಿದ ಪರಿಣಾಮ ರಾತ್ರಿ ವೇಳೆ ದ್ವಿಚಕ್ರ ವಾಹನ ಸವಾರರಿಗೆ ಅಪಘಾತ ಸಂಭವಿಸುವ ಸಾಧ್ಯತೆಗಳಿವೆ ಎಂಬ ಆತಂಕವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಕಳೆದ ಅನೇಕ ದಿನಗಳಿಂದ ಸರ್ವೀಸ್ ರಸ್ತೆಯ ಮೇಲೆ ಮಣ್ಣು ಹಾಕಿ ಲಾರಿಗಳು ಸಂಚಾರ ಮಾಡುತ್ತಿದ್ದು, ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನ ಸವಾರರು ಜೀವ ಭಯದಲ್ಲಿ ಪ್ರಯಾಣಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊದಲೇ ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚಾರ ಮಾಡುವುದೇ ದೊಡ್ಡ ಸಾಹಸದ ಕೆಲಸವಾಗಿದೆ, ಇದರ ಜೊತೆಯಲ್ಲಿ ಅರ್ಧದಷ್ಟು ರಸ್ತೆಯನ್ನು ಖಾಸಗಿ ವ್ಯಕ್ತಿಗಳ ಕಾಮಗಾರಿಗಾಗಿ ರಸ್ತೆಯನ್ನು ನುಂಗಿ ಹಾಕಿ ಸವಾರರು ಕಷ್ಟಪಡುವಂತಾಗಿದೆ. ತಾಲೂಕಿನ ಆಡಳಿತ ವ್ಯವಸ್ಥೆ, ಪೆÇೀಲೀಸ್ ಇಲಾಖೆ ಇವರ ವಿರುದ್ದ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.