Recent Posts

Monday, January 20, 2025
ಸುದ್ದಿ

ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ “ಸರಣಿ ಶಿವಪೂಜಾ ಅಭಿಯಾನ” -ಸಮಾಪನಾ ಸಮಾರಂಭ – ಕಹಳೆ ನ್ಯೂಸ್

ಸುಳ್ಯ :ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ “ಸರಣಿ ಶಿªಪೂಜಾ ಅಭಿಯಾನ-2018”ರ ಸಮಾಪನಾ ಸಮಾರಂಭ ಹಾಗೂ ಸಾಧಕ ಸಮ್ಮಾನ ಪ್ರಶಸ್ತಿ ಕಾರ್ಯಕ್ರಮಗಳು ದಿನಾಂಕ 28-10-2018ರಂದು ಪ್ರಶಾಂತ ಕಾವಿನಮೂಲೆ ಇವರ ನಿವಾಸ ಕಳಂಜದ “ಗ್ರೀನ್ ಗಾರ್ಡನ್ಸ್”ನಲ್ಲಿ ನಡೆಯಿತು.

ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮಿಜಿಯವರು ಅಶೀರ್ವಚನ ನೀಡಿ “ಅಕ್ಷರಗಳ ಕ್ರಮಬದ್ಧ ಜೋಡಣೆಯಿಂದ ನಿರ್ಮಾಣವಾದ ವೇದ ಮಂತ್ರಗಳು ಅದ್ಭುತವಾದ ದಿವ್ಯ ಶಕ್ತಿಗಳನ್ನು ಉತ್ಪಾದಿಸುತ್ತವೆ. ಋಷಿಮುನಿಗಳ ತಪಸ್ಸಿನ ಫಲವಾಗಿ ಅವಿರ್ಭರಿಸಿರುವ ಗ್ರಂಥಗಳಾಗಿರುವ ವೇದಗಳು ಅಪೌರುಷೇಯಯಗಳಾಗಿವೆ. ಇಂತಹ ಮಂತ್ರಗಳ ಉಚ್ಛಾರದಿಂದ ಸುತ್ತಲಿನ ಪರಿಸರದಲ್ಲಿ ದಿವ್ಯ ಸ್ಪಂದನ ಉಂಟಾಗುತ್ತದೆ. ಋಷಿ ಮುನಿಗಳ ತಪಸ್ಸಿನ ಫಲವಾಗಿ ಉಂಟಾದ ಧನಾತ್ಮಕ ಶಕ್ತಿಗಳೇ ಪ್ರಪಂಚದ ಉಳಿವಿಗೆ ಕಾರಣ”ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾರಂಭದಲ್ಲಿ ಸುಳ್ಯ ಜಯನಗರದ “ಅಪರ್ಣಾ ಸ್ಟೀಲ್ ಇಂಡಸ್ಟ್ರೀಸ್”ನ ಮಾಲಿಕರಾದ ಶ್ರೀ ರಾಮಚಂದ್ರ ಭಟ್‍ರವರಿಗೆ “ಸಾಧಕ-ಸಮ್ಮಾನ ಪ್ರಶಸ್ತಿ 2018”ನ್ನು ನೀಡಿ ಗೌರವಿಸಲಾಯಿತು. ಇವರ ಬಗ್ಗೆ ಅಭಿನಂದನಾ ನುಡಿ ಹಾಗೂ ಸಮಾಪನಾ ಮುಖ್ಯ ಭಾಷಣವನ್ನು ಅಡಿಕೆ ಪತ್ರಿಕೆಯ ಉಪ ಸಂಪಾದಕ ಹಾಗೂ ಖ್ಯಾತ ಯಕ್ಷಗಾನ ಕಲಾವಿದ ಶ್ರೀ ನಾ.ಕಾರಂತ ಪೆರಾಜೆ ಮಾತನಾಡಿ, “ಮಣ್ಣಿನ ಸಂಪರ್ಕವನ್ನು ಬಲವಂತವಾಗಿ ಕಿತ್ತುಕೊಂಡು ನಗರ ಸೇರಿದ ಪರಿಣಾಮ ನಾವಿಂದು ಕೊರಗುವಂತಾಗಿದೆ. ಮಣ್ಣಿನ ಸಂಸ್ಕೃತಿಯ ಸಂಪರ್ಕ ಇಲ್ಲದ ಕಲಿಕೆ ಕಲಿಕೆಯೇ ಅಲ್ಲ. ನಮ್ಮೊಳಗಿನ ಕೌಶಲ್ಯಕ್ಕೆ ಚಿಕಿತ್ಸೆ ಆಗಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೌಶಲ್ಯದ ಇನ್ನೊಂದು ಮುಖವೇ ಆವಿಷ್ಕಾರ. ಈ ನಿಟ್ಟಿನಲ್ಲಿ ಇಂದಿನ ಸಾಧಕ ಸಮ್ಮಾನವು ಅಡಿಕೆ ಸುಲಿಯುವ ಯಂತ್ರವನ್ನು ಆವಿಷ್ಕರಿಸಿದ ರಾಮಚಂದ್ರ ಭಟ್‍ರವರ ಕೌಶಲ್ಯಕ್ಕೆ ಸಂದ ಗೌರವವಾಗಿದೆ”ಎಂದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ರೀಯುತ ಅರುಣಕುಮಾರ ತೀರ್ಥಹಳ್ಳಿ ಮಾತನಾಡಿ,“ಶ್ರದ್ಧೆ ಮತ್ತು ನಂಬಿಕೆಗಳೇ ಶ್ರೇಯಸ್ಕರವಾದದ್ದು.ಅಂತಹ ಗುಣಗಳನ್ನು ಜಾಗೃತ ಗೊಳಿಸುವುದೇ ಸರಣಿ ಶಿವಪೂಜೆಯ ಉದ್ದೇಶ” ಎಂದರು.

ಮುಖ್ಯ ಅಭ್ಯಾಗತರಾಗಿ ಪುತ್ತೂರಿನ ಸಿವಿಲ್ ಇಂಜಿನಿಯರ್ ಶ್ರೀ ಶಂಕರ ಭಟ್ ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು “ಸರಣಿ ಶಿವಪೂಜಾ ಅಭಿಯಾನ-2018”ರ ಸಂಚಾಲಕರಾದ ಶ್ರೀ ಪ್ರಶಾಂತ ಕಾವಿನಮೂಲೆ ವಹಿಸಿ ಯಶಸ್ಸಿಗೆ ಕಾgಣರಾದ ಎಲ್ಲರನ್ನು ಅಭಿನಂದಿಸಿದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಶ್ರೀ ಗೋಪಾಲಕೃಷ್ಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸರಣಿ ಶಿವಪೂಜ ಅಭಿಯಾನ 2018ರ ಮಾತೃ ವಿಭಾಗದ ಸಂಚಾಲಕಿ ಶ್ರೀಮತಿ ರಜನಿ ಪ್ರಸಾದ್, ಮಂಗಳೂರು ಶುಭಾಶÀಂಸನೆಯನ್ನು ಮಾಡಿ ಧನ್ಯವಾದ ಸಮರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಪ್ರತಿಷ್ಠಾನದ ಪ್ರಧಾನಾಚಾರ್ಯ ಶ್ರೀ ಪುರೋಹಿತ ನಾಗರಾಜ ಭಟ್ ಹಾಗೂ ಶ್ರೀಮತಿ ಶ್ರೀದೇವಿ ದಂಪತಿಗಳನ್ನು, ವೇದ ಶಿಬಿರದ ಗುರುಗಳಾದ ವೇದ ಮೂರ್ತಿ ಸುದರ್ಶನ ಭಟ್, ವೇದ ಮೂರ್ತಿ ಅಭಿರಾಮ ಭಟ್ ಸgಳಿಕುಂಜ ಇವರುಗಳನ್ನು ಪೋಷಕರ ವತಿಯಿಂದ ಸಮ್ಮಾನಿಸಲಾಯಿತು.

ಇವರನ್ನು ಆಂಗ್ಲ ಭಾಷಾ ಉಪನ್ಯಾಸಕಕುಂಬ್ರ ರಾಮಚಂದ್ರ ಭಟ್ ಅಭಿನಂದಿಸಿದರು. ಅಭಿಯಾನದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಅರ್ಹತಾ ಪತ್ರ ಮತ್ತು ಅಭಿನಂದನಾ ಪತ್ರವನ್ನು ಶ್ರೀ ಸ್ವಾಮೀಜಿಯವರು ನೀಡಿ ಆಶೀರ್ವದಿಸಿದರು. ಅಭಿಯಾನವು ಬೆಂಗಳೂರು, ತೀರ್ಥಹಳ್ಳಿ, ಉಡುಪಿ, ಕಾಸರಗೋಡು ಸೇರಿದಂತೆ ರಾಜ್ಯ-ಹೊರ ರಾಜ್ಯದಾದ್ಯಂತ ಈಗಾಗಲೇ 406 ಶಿವಪೂಜೆಗಳನ್ನು ನೆರವೇರಿಸಿದ್ದು, ಈ ವರ್ಷ 380ನೇ ಸರಣಿಯಿಂದ ಆರಂಭಿಸಿ 406ನೇ ಶಿವಪೂಜೆಯಲ್ಲಿ ಸಮಾಪನೆಯಾಗಿದೆ. ಅಭಿಯಾನದ ಎಲ್ಲಾ ಶಿವಪೂಜೆಗಳಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳಿಗೆ “ವೇದ ಪ್ರತಿಭಾರತ್ನ”ಪುರಸ್ಕಾರ ನೀಡಿ ಗೌರವಿಸಲಾಯಿತು.

ಶ್ರೀಮತಿ ಸುಜಾತ, ಶ್ರೀ ಮಹೇಶ್ ಪ್ರಸಾದ, ಶ್ರೀ ಭೀಮ್ ಭಟ್ ಇವರುಗಳು ಪೋಷಕರ ಪರವಾಗಿ ಚಿ| ಶ್ರೀಶಕುಮಾರ, ಚಿ| ಶ್ರೀನಿಧಿ ಇವರು ವಿದ್ಯಾರ್ಥಿಗಳ ಪರವಾಗಿ ಹಾಗೂ ಬಂಧುಗಳ ಪರವಾಗಿ ಶ್ರೀ ನರಸಿಂಹ ಭಟ್ ಸೂರ್ಯಂಬೈಲುರವರು ಅನಿಸಿಕೆ ವ್ಯಕ್ತಪಡಿಸಿದರು.ಶ್ರೀಯುತ ರಾಮಮೂರ್ತಿ ದಾೈಲಾಟ ಸ್ವಾಗತಿಸಿದರು. ಚಿ| ಅನಿತೇಜ,ಚಿ|ಶ್ರೇಯಾನ್, ಚಿ| ಧನ್ವಿಪ್ರಸಾದ್, ಚಿ| ವಿಶ್ರುತ, ಚಿ| ಚಿರಂತನ ಪ್ರಾರ್ಥಿಸಿದರು. ಶ್ರೀಮತಿ ಶ್ರೀದೇವಿ ಹಾಗೂ ಶ್ರೀಮತಿ ಅರ್ಚನಾ ಕಾರ್ಯಕ್ರಮ ನಿರೂಪಿಸಿದರು.