Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಸಂಕಷ್ಟದಲ್ಲಿರುವ ಬಂಟ್ವಾಳ ಕುರಿಯಾಳದ ಬಡ ಕುಟುಂಬಕ್ಕೆ ನೆರವಾದ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ಟಾಳ ಪ್ರಖಂಡ – ಕಹಳೆ ನ್ಯೂಸ್

ಬಂಟ್ವಾಳ : ಕುರಿಯಾಳದ ತೀರಾ ಅಸಹಾಯಕ ಮತ್ತು ಬಡತನದಲ್ಲಿದ್ದ ಕುಟುಂಬಕ್ಕೆ ವಿಶ್ವಹಿಂದು ಪರಿಷತ್ ಬಜರಂಗದಳ ಬಂಟ್ಟಾಳ ಪ್ರಖಂಡದ ವತಿಯಿಂದ ಒಂದು ದಿನದ ಧರ್ಮ ರಕ್ಷಣೆ ಮತ್ತು ಸೇವಾ ಕಾರ್ಯ ನಡೆಯಿತು.

ಬಂಟ್ವಾಳ ತಾಲೂಕಿನ ಕುರಿಯಾಳ ನಿವಾಸಿ ಪದ್ಮನಾಭ ಪೂಜಾರಿಯವರ ಕುಟುಂಬವೊAದು ತೀರಾ ಸಂಕಷ್ಟದಲ್ಲಿದ್ದು ಮನೆ ಮತ್ತು ಮನೆಯ ಪರಿಸರ ಕೆಟ್ಟು ಹೋಗಿತ್ತು. ಇದನ್ನು ಮನಗಂಡ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ಟಾಳ ಪ್ರಖಂಡದ ಕಾರ್ಯಕರ್ತರು ಜೂ.16ರಂದು ಪದ್ಮನಾಭ ಪೂಜಾರಿಯವರ ಮನೆಯನ್ನು ಸಂಪೂರ್ಣವಾಗಿ ಶುಚಿಗೊಳಿಸಿ ಮನೆಗೆ ಬಣ್ಣ ಬಳಿಯುವ ಕಾರ್ಯವನ್ನು ಮಾಡಿದರು. ಹಾಗೆಯೇ ಮನೆಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನು ಒದಗಿಸಿ ಮುಂದೆ ಎಲ್ಲಾ ರೀತಿಯ ಮೂಲ ಸೌಕರ್ಯವನ್ನು ಒದಗಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು