ಪುತ್ತೂರು : ಜಿಡೆಕಲ್ಲು ಕಾಲೇಜು ಬಳಿ ಮನೆಯೊಂದರಲ್ಲಿ ರೆಫ್ರಿಜರೇಟರ್ ಸ್ಫೋಟ : ಬೆಂಕಿ ನಂದಿಸಿದ ಕಾಲೇಜಿನ ವಿದ್ಯಾರ್ಥಿಗಳು – ಕಹಳೆ ನ್ಯೂಸ್
ಪುತ್ತೂರು: ಜಿಡೆಕಲ್ಲು ಕಾಲೇಜು ಬಳಿ ಇರುವ ಮನೆಯೊಂದರಲ್ಲಿ ಇಂದು ಬೆಳಗ್ಗೆ ರೆಫ್ರಿಜರೇಟರ್ ಸ್ಫೋಟಗೊಂಡ ಪರಿಣಾಮ ಇಡೀ ಮನೆಗೆ ಬೆಂಕಿ ಹಬ್ಬಿದ ಘಟನೆ ನಡೆದಿದೆ.
ತಕ್ಷಣವೇ ಅದೇ ಪರಿಸರದಲ್ಲಿದ್ದ ಜಿಡೆಕಲ್ಲು ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಾದ ಎಡ್ವರ್ಡ್, ವಿಖ್ಯಾತ್ ಮತ್ತು ಪ್ರೀತೇಶ್ ಸೇರಿ ಸ್ಥಳೀಯರಾದ ಅಶೋಕ್ ರವರ ಸಹಕಾರದೊಂದಿಗೆ ಮನೆಯೊಳಗೆ ನುಗ್ಗಿ ನೀರು ಎರಚುವ ಮೂಲಕ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ನಂತರ ಕೆಲವೇ ಹೊತ್ತಿನಲ್ಲಿ ಅಗ್ನಿಶಾಮಕದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಯೊಳಗೆ ಇದ್ದ ಹಲವು ಅಗತ್ಯ ವಸ್ತುಗಳಿಗೆ ಭಾರೀ ಪ್ರಮಾಣದ ಹಾನಿ ಉಂಟಾಗಿದೆ.