Recent Posts

Sunday, January 19, 2025
ಸುದ್ದಿ

ವೆಸ್ಟ್ ಇಂಡೀಸ್ ವಿರುದ್ಧ ಬಾರತ ಭರ್ಜರಿ ಜಯ – ಕಹಳೆ ನ್ಯೂಸ್

ಮುಂಬೈ: ಮುಂಬೈನಲ್ಲಿ ನಿನ್ನೆ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಬೌಲಿಂಗ್‌ಗೆ ತತ್ತರಿಸಿದ ವಿಂಡೀಸ್ ಕೇವಲ 36.2 ಓವರ್‌ಗಳಲ್ಲಿ 153 ರನ್ ಗಳಿಗೆ ಆಲ್ ಔಟ್ ಆಯಿತು.

ಇದರೊಂದಿಗೆ ಟೀಂ ಇಂಡಿಯಾ 225 ರನ್‌ಗಳ ಭರ್ಜರಿ ಗೆಲುವು ಪಡೆದು, ಪುಣೆ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿತು. ಟೀಂ ಇಂಡಿಯಾ ನೀಡಿದ 378 ರನ್‌ಗಳ ಬೃಹತ್ ರನ್ ಬೆನ್ನತ್ತಿದ ವಿಂಡೀಸ್ ಯಾವುದೇ ಹಂತದಲ್ಲಿ ಟೀಂ ಇಂಡಿಯಾಗೆ ಸವಾಲು ನೀಡದೇ ಸುಲಭ ತುತ್ತಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ವೆಸ್ಟ್ ಇಂಡೀಸ್ ಪರ ಹೇಮರಾಜ್ 14, ಸ್ಯಾಮುಯಲ್ 18, ಹೆಟ್ಮೆಯರ್ 13, ಅಲೆನ್ 10 ಮಾತ್ರ ಎರಡಂಕಿ ಮೊತ್ತ ದಾಟಿದರೆ.ವಿಂಡೀಸ್ ಕ್ಯಾಪ್ಟನ್ ಹೋಲ್ಡರ್ ಏಕಾಂಗಿ ಹೋರಾಟ ನಡೆಸಿ ಔಟಾಗದೇ 54 ರನ್ ಸಿಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರೋಹಿತ್ ಶರ್ಮಾ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು. 5 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಟೂರ್ನಿಯ ಅಂತಿಮ ಪಂದ್ಯಕ್ಕೆ ತಂಡದ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.