Tuesday, January 21, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪೆರ್ಲ ಶ್ರೀ ದುರ್ಗಾಪರಮೇಶ್ವರಿ ಉಲ್ಲಾಳ್ತಿ ದೇವಸ್ಥಾನದ ಸಭಾಭವನದಲ್ಲಿ ನಡೆಯುತ್ತಿರುವ 1801ನೇ ಮಧ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮ–ಕಹಳೆ ನ್ಯೂಸ್

ನಮ್ಮ ನಿರ್ಧಾರ ನಮ್ಮ ಕೈಯಲ್ಲಿದೆ,ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಆದರೆ ಹವ್ಯಾಸಗಳನ್ನು ಬದಲಾಯಿಸಬಹುದು, ಹವ್ಯಾಸಗಳು ನಮ್ಮ ಭವಿಷ್ಯವನ್ನೇ ಬದಲಾಯಿಸಬಲ್ಲದು. ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ.ಸಿ ಟ್ರಸ್ಟ್ (ರಿ )ಧರ್ಮಸ್ಥಳ,ಉಡುಪಿ ಪ್ರಾದೇಶಿಕ ವಿಭಾಗದ,ಮಂಜೇಶ್ವರ ತಾಲೂಕಿನ,ಪೆರ್ಲ ವಲಯದ, ಕಾಸರಗೋಡು ಪೆರ್ಲ ಶ್ರೀ ದುರ್ಗಾಪರಮೇಶ್ವರಿ ಉಲ್ಲಾಳ್ತಿ ದೇವಸ್ಥಾನದ ಸಭಾಭವನದಲ್ಲಿ ನಡೆಯುತ್ತಿರುವ 1801 ನೇ ಮಧ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡುತ್ತಾ ಒಬ್ಬ ಮಧ್ಯ ವ್ಯಸನಿಯಿಂದ ತನ್ನ ಕುಟುಂಬ, ಸಮಾಜಕ್ಕೆ ಯಾವ ಯಾವ ರೀತಿಯಲ್ಲಿ ಸಮಸ್ಯೆ ಉಂಟು ಮಾಡುತ್ತಾನೆ ಎಂಬುದನ್ನು ಮನಮುಟ್ಟುವ ರೀತಿಯಲ್ಲಿ ಮಾಹಿತಿ ನೀಡಿ, ಒಳ್ಳೆಯವನಾಗಿ ಸಮಾಜದಲ್ಲಿ ಗೌರವ ಸಿಗಬೇಕಾದರೆ ಬದಲಾಗಲೇಬೇಕು, ಶಿಬಿರಕ್ಕೆ ಯಾವ ಮನಸ್ಥಿತಿಯಲ್ಲಿ ಬಂದಿದ್ದೇವೆ ಎನ್ನುವುದು ಮುಖ್ಯವಲ್ಲ ಯಾವ ರೀತಿ ಬದಲಾಗಿ ವಾಪಸ್ ಶಿಬಿರದಿಂದ ಹೋಗುತ್ತೇವೆ ಎನ್ನುವುದೇ ಮುಖ್ಯ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸದಾನಂದ ಕುಧ್ವ,ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷರಾದ ಅಶ್ವಥ್ ಪೂಜಾರಿ ಲಾಲ್ ಬಾಗ್, ಜನಜಾಗೃತಿ ವೇದಿಕೆಯ ಮಂಜೇಶ್ವರ ತಾಲೂಕಿನ ಅಧ್ಯಕ್ಷರಾದ ಡಾಕ್ಟರ್ ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿ, ಕಾಸರಗೋಡು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಅಖಿಲೇಶ್ ನಗುಮೊಗಂ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ದಕ್ಷಿಣ ಕನ್ನಡ 2 ಜಿಲ್ಲೆಯ ನಿರ್ದೇಶಕರಾದ ಪ್ರವೀಣ್ ಕುಮಾರ್, ಮಂಜೇಶ್ವರ ತಾಲೂಕಿನ ಯೋಜನಾಧಿಕಾರಿಗಳಾದ ಶಶಿಕಲಾ ಸುವರ್ಣ,ಜನಜಾಗೃತಿ ವೇದಿಕೆಯ ಉಡುಪಿ ಪ್ರಾದೇಶಿ ವಿಭಾಗದ ಯೋಜನಾಧಿಕಾರಿಗಳಾದ ಗಣೇಶ್ ಆಚಾರ್ಯ,ಜನಜಾಗೃತಿ ಪೆರ್ಲ ವಲಯದ ಅಧ್ಯಕ್ಷರಾದ ಬಿ ಪಿ ಶೇಣಿ,ಒಕ್ಕೂಟದ ವಲಯ ಅಧ್ಯಕ್ಷರಾದ ಶ್ರೀಧರ್ ಮಣಿಯಾಣಿ,ಜನಜಾಗ್ರತಿ ಮೇಲ್ವಿಚಾರಕರಾದ ಶ್ರೀ ನಿತೇಶ್ ಕೆ, ವಲಯದ ಮೇಲ್ವಿಚಾರಕರಾದ ಜಯಶ್ರೀ, ಶಿಬಿರಾಧಿಕಾರಿ ದೇವಿ ಪ್ರಸಾದ್,ಆರೋಗ್ಯ ಕಾರ್ಯಕರ್ತರಾದ ನೇತ್ರಾವತಿ ಮೊದಲಾದವರು ಉಪಸ್ಥಿತರಿದ್ದರು,