ಮಂಗಳೂರು : ದ.ಕ. ಜಿ.ಪ.ಹಿರಿಯ ಪ್ರಾಥಮಿಕ ಶಾಲೆ. ಕಾವೂರು ಇದರ ಶತಮಾನೋತ್ಸವದ ಪ್ರಥಮ ಪೂರ್ವಭಾವಿ ಸಭೆಯನ್ನು ಮಂಗಳೂರು ನಗರ ಉತ್ತರ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ವೈಭರತ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ಹಾಗೂ ಹಳೆ ವಿದ್ಯಾರ್ಥಿ ಸಂಘ, ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಒಟ್ಟು ಸೇರಿ ಶತಮಾನೋತ್ಸವದ ರೂಪರೇಷೆಗಳನ್ನು ತಯಾರಿಸಬೇಕಾಗಿ ಸಲಹೆ ನೀಡಿದರು.
ಈ ಸಭೆಯಲ್ಲಿ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಕಾರ್ಪೊರೇಟರ್ ಶ್ರೀಮತಿ ಸುಮಂಗಳ ಹಾಗೂ ಸ್ಥಳೀಯ ಮುಖಂಡರಾದ ಸೀತೇಶ್ ಕೊಂಡೆ, ಅಜಿತ್ ಪಳನೀರು, ನಿತೇಶ್ ಕಾವೂರು ಶ್ರೀನಿವಾಸ್ ಕಾವೂರು ಪೆಲ್ಸಿ ರೇಗೊ, ಸಮಾಜ ಸೇವಕರು, ರಮೇಶ್ ಕಾವೂರು, ಕೃಷ್ಣಪ್ಪ ಕಲ್ಮಾಡಿ ಶಂಕರ್ ಕಾವೂರು, ಶಿವರಾಮ ಕಾವೂರು ತುಳಸಿ ಕಾವೂರು ಮತ್ತು ಊರಿನ ಶಾಲಾಭಿಮಾನಿಗಳು ಭಾಗವಹಿಸಿದ್ದರು.