Friday, April 11, 2025
ಸುದ್ದಿ

ಕುಮಾರ ಪರ್ವದ ಅಲೆಗೆ ಸಾಕ್ಷಿಯಾದ ಕಾಂಗ್ರೆಸ್-ಜೆಡಿಎಸ್ ಸಮಾವೇಶ – ಕಹಳೆ ನ್ಯೂಸ್

ಲೋಕಸಭಾ ಉಪ ಸಮರಕ್ಕೆ ಶಿವಮೊಗ್ಗ ರಣಕಣ ಸಿದ್ಧಗೊಂಡಿದ್ದು, ತೀರ್ಥಹಳ್ಳಿಯಲ್ಲಿ ನಿನ್ನೆ ನಡೆದ ಕಾಂಗ್ರೆಸ್-ಜೆಡಿಎಸ್ ಸಮಾವೇಶ ಕುಮಾರ ಪರ್ವದ ಅಲೆಗೆ ಸಾಕ್ಷಿಯಾಯಿತು.

ತೀರ್ಥಹಳ್ಳಿಯ ಸಂಸ್ಕೃತಿ ಮಂದಿರದಲ್ಲಿ ನಡೆದ ಸಮಾವೇಶಕ್ಕೆ 5,000 ಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸಿ ಮೈತ್ರಿ ಪಕ್ಷದ ಬಲ ಪ್ರದರ್ಶನ ಮಾಡಿದರು. ಜತೆಗೆ ಕಾಂಗ್ರೆಸ್-ಜೆಡಿಎಸ್ ಮಿಶ್ರ ನಾಯಕತ್ವಕ್ಕೆ ಜೈ ಜೈ ಎನ್ನುತ್ತಿರುವುದು ಕಂಡು ಬಂತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸಿಎಂ ಕುಮಾರ ಸ್ವಾಮಿ ಈ ನಾಡಿನ ಜನರ ಮನದಲ್ಲಿದ್ದೇನೆ. ಸಾಲ ಮನ್ನಾ ಮೂಲಕ ಪ್ರತಿ ಮನೆಗೂ ಸಹಕಾರಿಯಾಗಿದ್ದೇನೆ. ಹಿರಿಯ ಜೀವಿಗಳಿಗೆ 1,000 ರೂ.ಹಣ ಸಹಾಯ ಮಾಡಲಿದ್ದೇನೆ. ಮಲೆನಾಡಿನ ಅಡಿಕೆ ಬೆಲೆ, ಕಾಲು ಸಂಕಕ್ಕೆ ಬಜೆಟ್‌ನಲ್ಲಿ ಹಣ ಇಟ್ಟಿದ್ದೇನೆ. ಸಮಾವೇಶದಲ್ಲಿ ಜೆಡಿಎಸ್, ಕಾಂಗ್ರೆಸ್ ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ