Recent Posts

Sunday, January 19, 2025
ರಾಜಕೀಯಸುದ್ದಿ

ರೆಡ್ಡಿಯನ್ನು ಜೈಲಿನಿಂದ ಬಿಡಿಸಿಕೊಂಡು ಬಂದಿದ್ದೇ ರಾಮುಲು ಸಾಧನೆ: ಸಿದ್ದರಾಮಯ್ಯ – ಕಹಳೆ ನ್ಯೂಸ್

ಬಳ್ಳಾರಿ: ಬಳ್ಳಾರಿಗೆ ಶ್ರೀರಾಮುಲು ಕೊಡುಗೆ ಏನೂ ಇಲ್ಲ. ರಾಮುಲುರದ್ದು ರೆಡ್ಡಿಯನ್ನು ಜೈಲಿನಿಂದ ಬಿಡಿಸಿಕೊಂಡು ಬಂದಿದಷ್ಟೇ ಸಾಧನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬಳ್ಳಾರಿ ಲೋಕಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಪರ ಹಗರಿಬೊಮ್ಮನಹಳ್ಳಿಯಲ್ಲಿ ಪ್ರಚಾರ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ ರಾಮುಲು ವಿರುದ್ಧ ಕಿಡಿಕಾರಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದ 5 ಕ್ಷೇತ್ರಗಳಲ್ಲೂ ನಾನು ಪ್ರಚಾರ ಮಾಡಿದ್ದೇನೆ. ಎಲ್ಲ ಕಡೆಯೂ ಕಾಂಗ್ರೆಸ್ ಪರ ಅಲೆ ಇದೆ. ಬಿಜೆಪಿ ವಿರುದ್ಧವಾದ ಅಲೆ ಎಲ್ಲೆಡೆಯಿದೆ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಉಗ್ರಪ್ಪ ಗೆಲ್ಲುವುದು ಅಷ್ಟೇ ಸತ್ಯ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಸಿರು ಶಾಲು ಹಾಕಿದ ಯಡಿಯೂರಪ್ಪ ರೈತರ ಸಾಲಮನ್ನಾ ಮಾಡಲಿಲ್ಲ. ಅಲ್ಲದೇ ರಾಜ್ಯದ ಜನರು ಕೇಂದ್ರದ ಆಡಳಿತದಿಂದ ಭ್ರಮ ನಿರಶನಗೊಂಡಿದ್ದಾರೆ ಎಂದರು.