ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮಾಜಿಕ ಅರಣೀಕರಣ ಕಾರ್ಯಕ್ರಮದ ಅಂಗವಾಗಿ ಒಲಂಪುರಿ ಸಾಲುಮರ ತಿಮ್ಮಕ್ಕ ವೃಕ್ಷೋದ್ಯಮ ದಲ್ಲಿ ನಡೆಯುವ ಗಿಡ ನಾಟಿ ಕಾರ್ಯಕ್ರಮದ ಪೂರ್ವಭಾವಿ ಸಮಾಲೋಚನ ಸಭೆಯು ಬಂಟ್ವಾಳ ತಾಲೂಕಿನ ವಗ್ಗದ ಪಚ್ಚಜೆ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಶರ್ಮ ಅಧ್ಯಕ್ಷತೆಯಲ್ಲಿ ಜರಗಿತು.
ಪಚ್ಚಜೆ ಸಭಾಂಗಣದ ಮುಖ್ಯಸ್ಥರಾದ ಜಿನರಾಜ್ ಆರೀಗ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಗ್ರಾಮಾಭಿವೃದ್ಧಿ ಯೋಜನೆಯ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ ಯೋಜನೆಯ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ 1 ರ ನಿರ್ದೇಶಕರಾದ ಮಹಾಬಲ ಕುಲಾಲ್ ಅವರು ಕಾರ್ಯಕ್ರಮದ ಜವಾಬ್ದಾರಿಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ , ಸೊಸೈಟಿ ಬ್ಯಾಂಕಿನ ಅಧ್ಯಕ್ಷರಾದ ಪ್ರಮೋದ್ ರೈ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಪದ್ಮಶೇಖರ್ ಜೈನ್ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಸುಲೋಚನಾ ಭಟ್, ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಚಿದಾನಂದ ರೈ, ಹಾಲಿನ ಡೈರಿ ಅಧ್ಯಕ್ಷರಾದ ಶಿವಪ್ಪಗೌಡ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಾಣಿಕ್ಯ ರಾಜ ಜೈನ್, ಜನಜಾಗೃತಿ ಅಧ್ಯಕ್ಷರಾದ ಪುರುಷೋತ್ತಮ್, ಅಲಂಪುರಿ ಗುತ್ತು ಉದ್ಯಮಿ ಸುತಂಜನ್ ಜೈನ್, ಜನಜಾಗೃತಿ ಸದಸ್ಯರಾದ ನವೀನ್ ಚಂದ್ರ, ಆನಂದ ಆಚಾರಿ,, ಜಯಚಂದ್ರ ಬೊಳ್ಮಾರ್, ಕಾರಿಂಜ ದೇವಸ್ಥಾನದ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ , ಕೃಷಿಕರಾದ ವಿರೇಂದ್ರ ಆಮೀನ್, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಯೋಜನಾಧಿಕಾರಿಯದ ಜಯವಂತ ಪಟಗಾರ, , ಶೌರ್ಯ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಯೋಜನಾಧಿಕಾರಿಯದ ಕಿಶೋರ್ ಕುಮಾರ್ ಎಂ., ಜಿನೇಂದ್ರ ಮಾಜಿ ಪಂಚಾಯತಿ ಸದಸ್ಯರು , ಶೌರ್ಯ ಘಟಕದ ಕ್ಯಾಪ್ಟನ್ ಪ್ರಕಾಶ್, ಮಾಸ್ಟರ್ ನಿತಿನ್, ಜನಜಾಗೃತಿ ಸದಸ್ಯರ ಮೋಹನ್ ಸಾಲಿಯಾನ್, ನಿಕಟ ಪೂರ್ವ ಅಧ್ಯಕ್ಷರಾದ ಉಮೇಶ್ ನಾರಾಯಣ್, ಶ್ರೀ ಗಾಯತ್ರಿ ದೇವಿ ದೇವಸ್ಥಾನದ ಕಾರ್ಯದರ್ಶಿ ಅಭಿಷೇಕ್, ವಲಯ ಅಧ್ಯಕ್ಷರಾದ ಉಮೇಶ್, ಪದ್ಮನಾಭ , ನವೀನ್ ,ವಸಂತ್ ದಿನೇಶ್, ಶೌರ್ಯ ವಿಪತ್ತು ಮೇಲ್ವಿಚಾರಕರುಗಳು, ವಲಯ ಮೇಲ್ವಿಚಾರಕರು, ಕೃಷಿ ಅಧಿಕಾರಿಯವರು, ಆಂತರಿಕ ಲೆಕ್ಕ ಪರಿಶೋಧಕರು. ಒಕ್ಕೂಟಗಳ ಅಧ್ಯಕ್ಷರುಗಳು ನಿಕಟ ಪೂರ್ವ ಅಧ್ಯಕ್ಷರುಗಳು,ಪದಾಧಿಕಾರಿಗಳು ಸೇವಾ ಪ್ರತಿನಿಧಿಗಳು ಶೌರ್ಯ ವಿಪತ್ತು ಸದಸ್ಯರು ,ನವ ಜೀವನ ಸಮಿತಿಯ ಸದಸ್ಯರು, ಉಪಸ್ಥಿತರಿದ್ದರು.
ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಸ್ವಾಗತಿಸಿ, ವಗ್ಗ ವಲಯ ಮೇಲ್ವಿಚಾರಕಿ ಸವಿತಾ ವಂದಿಸಿ, ಕೃಷಿ ಮೇಲ್ವಿಚಾರಕ ಜಯಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು