Friday, September 20, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪೆಟ್ರೋಲ್ ಡೀಸೆಲ್ ಬೆಲೆಏರಿಕೆ ಖಂಡಿಸಿ,ಬಂಟ್ವಾಳ ಬಿಜೆಪಿ ವತಿಯಿಂದ ಬಿಸಿರೋಡಿನಲ್ಲಿ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ –ಕಹಳೆ ನ್ಯೂಸ್

ಬಂಟ್ವಾಳ: ಪೆಟ್ರೋಲ್ ಡೀಸೆಲ್ ಬೆಲೆಏರಿಕೆಯನ್ನು ಖಂಡಿಸಿ,ಬಂಟ್ವಾಳ ಬಿಜೆಪಿ ವತಿಯಿಂದ ಬಿಸಿರೋಡಿನಲ್ಲಿ ಹೆದ್ದಾರಿ ತಡೆ ನಡೆಸಿ ಕಾಂಗ್ರೆಸ್ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಬಜೆಟ್ ನಲ್ಲಿ ತೆರಿಗೆ ಏರಿಕೆ ಮಾಡಿ ರಾಜ್ಯದ ಬೊಕ್ಕಸ ತುಂಬಿಸಲು ಹೊರಟಿರುವ ಸಿದ್ದರಾಮಯ್ಯ ಅವರು ಈಗ ಮತ್ತೆ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯದ ಜನತೆಗೆ ದೊಡ್ಡ ಅನ್ಯಾಯ ಮಾಡಿದೆ ಎಂದು ಆರೋಪ ಮಾಡಿದರು.
ಬಡವರ ಕಲ್ಯಾಣದ ಮುಖವಾಡ ಹಾಕಿರುವ ಕಾಂಗ್ರೆಸ್ ಸರಕಾರ ಬೆಲೆ ಏರಿಕೆ ಮೂಲಕ ರಾಜ್ಯದ ಜನರ ಜೀವನದ ಮೇಲೆ ಕ್ರೌರ್ಯ ಮೆರೆದಿದೆ ಎಂದು ಹೇಳಿದರು.
ಸ್ವಾರ್ಥದ ರಾಜಕೀಯ ಮತ್ತು ಚುನಾವಣೆಯಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಗ್ಯಾರಂಟಿ ಹೆಸರನಲ್ಲಿ ಜನರನ್ನು ಮೋಸ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರಕಾರ ,ಇದೀಗ ಜನರನ್ನು ಬಡತನದ ಕೂಪಕ್ಕೆ ತಳ್ಳುತ್ತಿದೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಲೋಕಸಭೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ಬಂಟ್ವಾಳ ಕ್ಷೇತ್ರದ ಜನರು ಉತ್ತಮ ಬೆಂಬಲ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿನ ಗೆಲುವನ್ನು ಅರಗಿಸಿಲಾರದೆ ಕಾಂಗ್ರೆಸ್ ಕೋಪವನ್ನು ಇದೀಗ ಬೆಲೆ ಏರಿಕೆ ಎಂಬ ಅಸ್ತ್ರದ ಮೂಲಕ ರಾಜ್ಯದ ಜನರ ಮೇಲೆ ಸವಾರಿ ಮಾಡಲು ಹೊರಟಿದೆ, ಆದರೆ ಇಂತಹ ನೀಚ ಬುದ್ದಿಯಿಂದ ರಾಜ್ಯದ ಜನತೆ ಕಾಂಗ್ರೆಸ್ ಗೆ ತಕ್ಕುದಾದ ಬುದ್ದಿಯನ್ನು ಮುಂಬರುವ ಚುನಾವಣೆಯಲ್ಲಿ ನೀಡಲಿದೆ ಎಂದು ಹೇಳಿದ ಅವರು ಅಭಿವೃದ್ಧಿಗಾಗಿ ಮೀಸಲಿರಿಸಬೇಕಾದ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿದ ಕಾಂಗ್ರೆಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಜಾಹೀರಾತು

ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ. ಮಾತನಾಡಿ, ಸಿದ್ದರಾಮಯ್ಯ ಮತ್ತು ಡಿ‌ಕೆಶಿಯವರೇ ನೀವು ಹಿಂದೂವಾ ಕ್ರೈಸ್ತರಾ? ನಿಮ್ಮ ಆಡಳಿತದಲ್ಲಿ ಹಿಂದೂಗಳಿಗೆ ಏನು ನೀಡಿದ್ದೀರಿ, ನೀವು ಹಿಂದೂಗಳಿಗೆ ಕೇವಲ ಚೆಂಬು ನೀಡಿದ್ದಿರಿ ಎಂದು ಆರೋಪ ಮಾಡಿದರು.

ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ಚೆನ್ನಪ ಆರ್ ಕೋಟ್ಯಾನ್,ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಪೂಜಾ ಪೈ, ಸುಲೋಚನ ಜಿ.ಕೆ.ಭಟ್,ವಜ್ರನಾಥ್ ಕಲ್ಲಡ್ಕ,ಮಾದವ ಮಾವೆ, ದೇವಪ್ಪ ಪೂಜಾರಿ, ವಿಕಾಶ್ ಪುತ್ತೂರು, ದೇವದಾಸ್ ಶೆಟ್ಟಿ, ಸಂದೇಶ್ ಶೆಟ್ಟಿ, ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ,ಗೋವಿಂದ ಪ್ರಭು, ಸೀಮಾಮಾದವ, ಪ್ರಭಾಕರ್ ಪ್ರಭು, ಪುರುಷೋತ್ತಮ ಶೆಟ್ಟಿ, ರವೀಶ್ ಶೆಟ್ಟಿ, ಡೊಂಬಯ್ಯ ಅರಳ, ವಿದ್ಯಾವತಿಪ್ರಮೋದ್ ಕುಮಾರ್, ಹರ್ಷಿಣಿಪುಷ್ಪಾನಂದ, ರಶ್ಮಿತ್ ಶೆಟ್ಟಿ ಕೈತ್ರೋಡಿ, ಶ್ರೀದರ್ ಶೆಟ್ಟಿ ಪುಳಿಂಚ ,ಯಶೋಧರ ಕರ್ಬೆಟ್ಟು, ಚೈತ್ಯನ್ಯ ಗಣೇಶ್ ದಾಸ್, ಜಯಂತಿ, ಹರಿಪ್ರಸಾದ್, ಆನಂದ ಶಂಭೂರು, ಪುರುಷೋತ್ತಮ ಸಾಲಿಯಾನ್, ದಿನೇಶ್ ಭಂಡಾರಿ, ಪ್ರಕಾಶ್ ಅಂಚನ್, ಪುಷ್ಪರಾಜ್ ಚೌಟ, ಗಣೇಶ್ ರೈ ಮಾಣಿ, ಸತೀಶ್ ಪೂಜಾರಿ, ಮೋನಪ್ಪ ದೇವಶ್ಯ, ರತ್ನಾಕರ್ ಚೌಟ,ತನಿಯಪ್ಪ ಗೌಡ, ರೊನಾಲ್ಡ್ ಬಂಟ್ವಾಳ, ಸುರೇಶ್ ಕೋಟ್ಯಾನ್,ಕಾರ್ತಿಕ್ ಬಲ್ಲಾಳ್, ಅಜಿತ್ ಶೆಟ್ಟಿ, ಕಿಶೋರ್ ಪಲ್ಲಿಪಾಡಿ ಸಂತೋಷ್ ರಾಯಿಬೆಟ್ಟು, ಸಂಜೀವ ಪೂಜಾರಿ ಪಂಜಿಕಲ್ಲು,ವಿಜಯ್ ಅಮ್ಟಾಡಿ, ಸುನಿಲ್ ಕಾಯರ್ ಮಾರ್, ಶುಭಕರ ಶೆಟ್ಟಿ, ಬಾಸ್ಕರ್ ಟೈಲರ್ ಮತ್ತಿತರ ಪ್ರಮುಖರು ಹಾಜರಿದ್ದರು.