Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್(ರಿ ) ವಿಟ್ಲ ಇದರ ಅಳಿಕೆ ವಲಯದ ವತಿಯಿಂದ ಪರಿಸರ ದಿನಾಚರಣೆ ಹಾಗೂ ಗಿಡ ನಾಟಿ ಕಾರ್ಯಕ್ರಮ-ಕಹಳೆ ನ್ಯೂಸ್

ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್(ರಿ ) ವಿಟ್ಲ ಇದರ ಅಳಿಕೆ ವಲಯದ ವತಿಯಿಂದ ಪರಿಸರ ದಿನಾಚರಣೆ ಹಾಗೂ ಗಿಡ ನಾಟಿ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ ತೋರಣಕಟ್ಟೆಯಲ್ಲಿ ನಡೆಸಲಾಯಿತು.

|
ಕಾರ್ಯಕ್ರಮದ ಅದ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿ ವಹಿಸಿದರು. ಬಂಟ್ವಾಳ ತಾಲೂಕು ಶಿಕ್ಷಕರ ಸಂಘದ ಕಾರ್ಯದರ್ಶಿ ಯತೀಶ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶಿಕ್ಷಕರ ಕೊರತೆಯಿದ್ದ ಶಾಲೆಗೆ ಜ್ಞಾನದೀಪ ಶಿಕ್ಷಕರನ್ನು ನೇಮಕ ಮಾಡಿ ಸರಕಾರಿ ಶಾಲೆಗಳ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಪರಿಸರ ಕಾರ್ಯಕ್ರಮವಾಗಿ ನೆಟ್ಟು ಕೊಟ್ಟಂತಹ ಗಿಡವನ್ನು ಸಂರಕ್ಷಿಸುವ ಕೆಲಸವನ್ನು ಶಾಲೆಯ ಮಕ್ಕಳು,ಶಿಕ್ಷಕರು,ಪೋಷಕರು ಮಾಡಬೇಕೆಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತಾಲೂಕಿನ ಕ್ರಷಿ ಅದಿಕಾರಿ ಚಿದಾನಂದ ಪರಿಸರದ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಮಕ್ಕಳಿಗೆ ಪರಿಸರದ ಬಗ್ಗೆ ವಿವಿಧ ಸ್ಪರ್ಧೆ ಗಳನ್ನು ನಡೆಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಸೀತು ದೇವಿನಗರ ಇವರಿಗೆ ಯೋಜನೆಯ ಜನಮಂಗಳ ಕಾರ್ಯಕ್ರಮದಿಂದ ಮಂಜೂರಾದ ಯು ಶೇಪು ವಾಕರ್ ನ್ನುಈ ಸಂಧರ್ಭದಲ್ಲಿ ವಿತರಣೆ ಮಾಡಲಾಯಿತು. ಶಾಲಾ ಆವರಣದಲ್ಲಿ ಗಿಡ ನಾಟಿ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಲಾ ಮುಖ್ಯ ಶಿಕ್ಷಕಿ ಲೀಲಾವತಿ, ಶಾಲಾ ಶಿಕ್ಷಕ ವೃಂದ, ಒಕ್ಕೂಟದ ಅಧ್ಯಕ್ಷರಾದ ರಘು ನಾಯ್ಕ,ಒಕ್ಕೂಟದ ಪದಾದಿಕಾರಿಗಳು ಮಕ್ಕಳ ಪೋಷಕರು ,ವಿಪತ್ತು ನಿರ್ವಾಹಣ ಘಟಕದ ಪ್ರತಿನಿದಿ ದೀಪಕ್, ಶೌರ್ಯದ ತಂಡದ ಸದಸ್ಯರು, ಸ್ಥಳಿಯ ಸೇವಾಪ್ರತಿನಿದಿ ಸರಸ್ವತಿ,ಶರ್ಮಿಳಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಒಕ್ಕೂಟದ ಪದಾದಿಕಾರಿ ಅಮಿತರವರು ಸ್ವಾಗತಿಸಿ, ಅಳಿಕೆ ವಲಯ ಮೇಲ್ವೀಚಾರಕಿ ಮಾಲತಿ ಪ್ರಾಸ್ತವಿಕ ಮಾಡಿ ಪುಣಚ ಬಿ, ಸಿ ಎಸ್ ಕೇಂದ್ರದ ವಿ ಎಲ್ ಎ ಭವ್ಯ ವಂದಿಸಿ, ಶೌರ್ಯ ವಿಪತ್ತು ನಿರ್ವಾಹಣ ಘಟಕದ ಸಂಯೋಜಕಿ ರೂಪ ಕಾರ್ಯಕ್ರಮ ನಿರೂಪಿಸಿದ