ಉಡುಪಿ : ಮೂಡುಗಿಳಿಯಾರು ಸರಕಾರಿ ಸಂಯುಕ್ತ ಪ್ರೌಢಶಾಲೆ ಪ್ರಾಥಮಿಕ ವಿಭಾಗ,ನೂತನವಾಗಿ ಆರಂಭಗೊAಡಿರುವ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಯ ಉದ್ಘಾಟನೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ.ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿ ಮಾತನಾಡಿ ಗುಣಮಟ್ಟದ ಕಲಿಕೆಯನ್ನು ತಮ್ಮ ಮಕ್ಕಳಲ್ಲಿ ರೂಪಿಸುವುದಕ್ಕೆ ಇದು ಅವಕಾಶ ಕಲ್ಪಿಸುತ್ತದೆ.
ಆರಂಭದ ಪೂರ್ವ ಪ್ರಾಥಮಿಕ ಶಿಕ್ಷಣದ ಹಂತದಿAದಲೇ ಸರ್ಕಾರಿ ಶಾಲೆಗಳಲ್ಲಿ ಸಮಾನ ಶಿಕ್ಷಣಕ್ಕಾಗಿ ಉತ್ತಮವಾದ ಭದ್ರ ಅಡಿಪಾಯ ಹಾಕಿದರೆ ಇದು ಮುಂದಿನ ಹಂತವಾದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣಕ್ಕೆ ಅತ್ಯುತ್ತಮವಾದ ಕಲಿಕೆಯ ವಾತಾವರಣವನ್ನು ಕಲ್ಪಿಸುತ್ತದೆ.ಈ ಉದ್ದೇಶದಿಂದ ದಾನಿಗಳು ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿ ಪ್ರಾರಂಭಿಸಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಅಧ್ಯಕ್ಷರು ಗ್ರಾಮ ಪಂಚಾಯಿತಿ ಕೋಟ ವಹಿಸಿದರು.
ಈ ಸಂದರ್ಭದಲ್ಲಿಯೋಗೇAದ್ರ ಪೂಜಾರಿ ಅಧ್ಯಕ್ಷರು ಶಾಲಾ ಅಭಿವೃದ್ಧಿ ಸಮಿತಿ, ಪ್ರಸ್ತುತ ಗ್ರಾಮ ಪಂಚಾಯಿತಿ ಸದಸ್ಯರು, ಶಿವರಾಮ್ ಭಟ್ ಮುಖ್ಯೋಪಾಧ್ಯಾಯರು ಪ್ರೌಢಶಾಲೆ, ಶ್ರೀಮತಿ ಶೋಭಾ ಸದಸ್ಯರು ಗ್ರಾಮ ಪಂಚಾಯತ್ ಕೋಟ,ಶೇಖರ್ ಜಿ ಸದಸ್ಯರು ಗ್ರಾಮ ಪಂಚಾಯತ್ ಕೋಟ, ಶ್ರೀಮತಿ ಸುಚಿತ್ರ ಸದಸ್ಯರು ಗ್ರಾಮ ಪಂಚಾಯತ್ ಕೋಟ,ಸವಿತಾ ಸಿ. ಆರ್.ಪಿ. ಕಾರ್ಕಡ ಕ್ಲಸ್ಟರ್,,ಭರತ್ ಕುಮಾರ್ ಶೆಟ್ಟಿ ಮಾಜಿ ತಾಲೂಕು ಪಂಚಾಯತ್ ಸದಸ್ಯರು, ರಾಜಾರಾಮಶೆಟ್ಟಿ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸುರೇಶ್ ಪೂಜಾರಿ *ಅಧ್ಯಕ್ಷರು ಹಳೆವಿದ್ಯಾಥಿ ಸಂಘ ಪ್ರೌಢಶಾಲೆ,, *ರಾಘವೇಂದ್ರ ಶೆಟ್ಟಿ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಪ್ರಾಥಮಿಕ ಶಾಲೆ,, ಹಾಗೂ ಶಿಕ್ಷಕ ವೃಂದದವರು ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು,, ಊರಿನ ಪ್ರಮುಖರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.