Wednesday, January 22, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತೂರಿನ ದರ್ಬೆ ಬೆಥನಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ – ರಕ್ಷಕ ಶಿಕ್ಷಕ ಸಂಘದ ಮಹಾಸಭೆ –ಕಹಳೆ ನ್ಯೂಸ್

ದರ್ಬೆ : ಪುತ್ತೂರಿನ ಶೈಕ್ಷಣಿಕ ಕ್ಷೇತ್ರದ ಇತಿಹಾಸದಲ್ಲಿ ಶೈಕ್ಷಣಿಕವಾಗಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಮುಂಚೂಣಿ ಸಂಸ್ಥೆಯಾದ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪಾಂಗ್ಲಾಯ್ ದರ್ಬೆ ಪುತ್ತೂರು ಇಲ್ಲಿನ ರಕ್ಷಕ – ಶಿಕ್ಷಕ ಸಂಫದ ಮಹಾಸಭೆಯು ದಿನಾಂಕ 22/06/2024 ನೇ ಶನಿವಾರದಂದು ಶಾಲಾ ಸಭಾಂಗಣದಲ್ಲಿ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ವಂದನೀಯ ಭಗಿನಿ ಪ್ರಶಾಂತಿ ಬಿ ಎಸ್ ಅಧ್ಯಕ್ಷತೆಯಲ್ಲಿ ನೆರವೇರಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಂತ ಅಲೋಶಿಯಸ್ ವಿಶ್ವವಿದ್ಯಾಲಯ ಮಂಗಳೂರು ಇಲ್ಲಿನ ಉಪನ್ಯಾಸಕರಾಗಿರುವ ಪ್ರೋ. ಸೆವ್ರಿನ್ ಪಿಂಟೊರವರು ಮಾತನಾಡಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪೋಷಕರು ಮತ್ತು ಶಿಕ್ಷಕರು ಎರಡು ಕಂಬಗಳಿದ್ದAತೆ. ಎರಡು ಕಂಬಗಳಲ್ಲಿ ಒಂದು ಅಲ್ಲಾಡಿದರೂ ಮಕ್ಕಳ ಭವಿಷ್ಯಕ್ಕೆ ಅಪಾಯಕಾರಿ. ಆ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಎಚ್ಚರಿಕೆಯಿಂದ ಕಾರ್ಯಪ್ರವೃತ್ತರಾಗಬೇಕು, ಮಕ್ಕಳ ಶೈಕ್ಷಣಿಕ ಪಯಣ ಅತೀ ಅಮೂಲ್ಯ ಈ ಸಂದರ್ಭದಲ್ಲಿ ವೈಯಕ್ತಿಕ ಮೊಬೈಲ್ ಅನಿವಾರ್ಯತೆ ಇದೆಯೇ ?.ಇದ್ದರೆ ಆಗುವ ಅನಾಹುತಗಳ ಬಗ್ಗೆ ಪೋಷಕರು ಗಂಭೀರ ಆಲೋಚಿಸುವ ಅಗತ್ಯವಿದೆ ಎಂದರು.ಬೆಥನಿ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ನಮ್ಮ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಅವರಲ್ಲಿರುವ ಶಿಸ್ತು ಬದ್ದ ಜೀವನ ಶೈಲಿ ಇತರರಿಗೆ ಅನುಕರಣೀಯ ಎಂದು ಬೆಥನಿ ಸಂಸ್ಥೆಯ ಮಕ್ಕಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಡಾ.ಎಡ್ವಿಡ್ ಸಂತಾನ್ ಡಿʼಸೋಜ ರವರು ಮಾತನಾಡಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕರಂತೆ ಪೋಷಕರ ಜವಾಬ್ದಾರಿ ಹೆಚ್ಚಾಗಿದ್ದು.ಮಕ್ಕಳು ಕೇಳುವ ಪ್ರತಿ ಪ್ರಶ್ನೆಗೆ ಉತ್ತರಿಸುವ ಕನಿಷ್ಠ ಸೌಜನ್ಯ ನಮ್ಮಲ್ಲಿದ್ದರೆ, ನಮ್ಮ ಮಕ್ಕಳು ನಮ್ಮ ಮಾತನ್ನು ಕೇಳುವ ಮಕ್ಕಳಾಗಿ ಬೆಳೆಯುತ್ತಾರೆ. ಹಾಗಾಗಿ ಮಕ್ಕಳ ಭಾವನೆಗಳಿಗೆ ಬೆಲೆ ಇರಲಿ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷತೆ ವಹಿಸಿ ಮಾತನಾಡಿದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ವಂದನೀಯ ಭಗಿನಿ ಪ್ರಶಾಂತಿ ಬಿ ಎಸ್ ಮಾತನಾಡಿ 2023 -2024 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 99.21%ಫಲಿತಾಂಶ ಬರುವಲ್ಲಿ ಪ್ರಮುಖ ಪಾತ್ರವಹಿಸಿದ ಮುಖ್ಯ ಶಿಕ್ಷಕಿ, ಶಿಕ್ಷಕ – ಶಿಕ್ಷಕಿಯರು ಹಾಗೂ ಸಹಕರಿಸಿದ ಪೋಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಮಕ್ಕಳನ್ನು ಬೆಳೆಸುವಾಗ ಮಕ್ಕಳಿಗೆ ಸೋಲನ್ನು ಎದುರಿಸುವ ಪಾಠ ಅಗತ್ಯವಿದ್ದು ಸೋತು ಗೆದ್ದವರ ಕಥೆ ಹೇಳಿದರೆ ಉತ್ತಮ, ಮನೆಕೆಲಸದಲ್ಲಿ ಮಕ್ಕಳಿಗೆ ಅವಕಾಶ ಕೊಡಿ. ಕಲಿಕೆ ಜತೆಗೆ ಗಾರ್ಡನಿಂಗ್ ನಂತಹ ಸಹಪಠ್ಯಕ್ಕೂ ಅವಕಾಶ ಕೊಟ್ಟು ಮಕ್ಕಳಿಗೆ ಅನುಭವ ಆಧಾರಿತ ಜೀವನ ಶಿಕ್ಷಣ ನೀಡಿ ಎಂದರು.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ( 97.6% )ಪಡೆದುಕೊಂಡು ಶಾಲೆಗೆ ಪ್ರಥಮ ಸ್ಥಾನಿಯಾದ ಕು. ವೃದ್ಧಿ ರೈ ಯವರನ್ನು ಶಾಲು ಹೊದಿಸಿ ಫಲಪುಷ್ಪ ಗೌರವದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಕು. ವೃದ್ಧಿ ರೈ ಪೋಷಕರಾದ ಶೇಖರ್ ರೈ ಶ್ರೀರಾಮ ಪದವಿ ಪೂರ್ವ ಕಾಲೇಜು ಪೆರ್ನೆ, ಇವರು ಮಾತನಾಡಿ ಬೆಥನಿ ಸಂಸ್ಥೆಯಲ್ಲಿ ವಿದ್ಯರ್ಥಿಗಳ ಕಲಿಕೆಯ ಕಡೆಗೆ ಕೊಡುವ ವಿಶೇಷ ಗಮನ ಶಿಕ್ಷಕರು ಮತ್ತು ಪೋಷಕರ ನಡುವಿನ ಒಡನಾಟ ಅತ್ಯುತ್ತಮವಾಗಿದ್ದು, ಈ ಸಂಸ್ಥೆಯ ಮೇಲೆ ಎಲ್ಲಾ ಪೋಷಕರು ನೂರು ಶೇಕಡ ನಂಬಿಕೆಯನ್ನು ಇಡಬಹುದು ಎಂದರು. ಬಳಿಕ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 45 ವಿದ್ಯಾರ್ಥಿಗಳನ್ನು ಗೌರವದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷರಾದ ಆಶಾ ನಾಯಕ್ ಹಾಗೂ ಮುಖ್ಯ ಶಿಕ್ಷಕಿ ಭಗಿನಿ ಶಾಂತಿ ಆಗ್ನೇಸ್ ಉಪಸ್ಥಿತರಿದ್ದರು.

ಪ್ರಾರ್ಥನಾ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭಗೊAಡು,ಶಿಕ್ಷಕಿ ಚಂದ್ರಾವತಿ ಸ್ವಾಗತಿಸಿ, ಶಿಕ್ಷಕಿ ಬೃಂದಾ ಕೆ.ಎಂ ವರದಿ ವಾಚಿಸಿದರು.ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಶಾಂತಿ ಆಗ್ನೇಸ್ ಶಾಲಾ ಶೈಕ್ಷಣಿಕ ಮಾಹಿತಿ ಹಾಗೂ ಗತವರ್ಷದ ಶೈಕ್ಷಣಿಕ ಹಾಗೂ ಕ್ರೀಡಾ ಸಾಧನೆಯ ಬಗ್ಗೆ ವರದಿ ನೀಡಿದರು. ಶಿಕ್ಷಕಿ ಸೌಮ್ಯ ವಂದಿಸಿ, ಶಿಕ್ಷಕಿ ಬೃಂದಾ ಕೆ. ಎಂ, ಪವಿತ್ರ ವಿ ಕಾರ್ಯಕ್ರಮ ನಿರೂಪಿಸಿದರು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು. ಬಳಿಕ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಉಪಾಧ್ಯಕ್ಷರಾಗಿ ಶ್ರೀ ರಘುನಾಥ ರೈ ಹಾಗೂ ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷರಾಗಿ ಶ್ರೀಮತಿ ಸುನೀತಾ ದಲ್ಮೆದಾ ರವರನ್ನು ಆಯ್ಕೆ ಮಾಡಲಾಯಿತು.