Recent Posts

Tuesday, January 21, 2025
ದಕ್ಷಿಣ ಕನ್ನಡಮಂಗಳೂರುಶಿಕ್ಷಣಸುದ್ದಿ

ಸ್ವಸ್ತಿಶ್ರೀ ಜೈನ ವಸತಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ವಿಶ್ವ ಯೋಗ ದಿನಾಚರಣೆ – ಕಹಳೆ ನ್ಯೂಸ್

ಮಂಗಳೂರು : ಸ್ವಸ್ತಿಶ್ರೀ ಜೈನ ವಸತಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ವಿಶ್ವ ಯೋಗ ದಿನಾಚರಣೆಯನ್ನು ಯೋಗಾಸನಾ ಮಾಡುದರ ಮೂಲಕ ಆಚರಿಸಲಾಯಿತು.

ಪರಮಪೂಜ್ಯ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿ ಯವರು ಪ್ರಾರಂಭ ದಲ್ಲಿ ಭಾರತೀಯ ಸಂಸ್ಕøತಿ ಯ ಶ್ರೇಷ್ಠ ಕೊಡುಗೆ ಗಳಲ್ಲಿ ಯೋಗ ಹಾಗೂ ಧ್ಯಾನ ವು ಶ್ರೇಷ್ಠ ಜೀವನ ಕಲೆಯಾಗಿದ್ದು ಅದಿಯೋಗಿ ಭಗವಾನ್ ಆಧಿನಾಥರು ಸಹಸ್ರ ಸಹಸ್ರ ವರ್ಷ ಗಳ ಪೂರ್ವ ದಲ್ಲೆ ಭೋದಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾನವ ಮನಸು ಹಾಗೂ ದೇಹ ಅರೋಗ್ಯಕ್ಕೆ ಯೋಗ ಪೂರಕ ದಿನಾ ಬೆಳಿಗ್ಗೆ ಅನುಲೋಮ ವಿಲೋಮ ಮಾಡುವ ವಿದ್ಯಾರ್ಥಿ ಉತ್ಸಾಹ ದಿಂದ ಕಲಿಕೆ ಯಲ್ಲಿ ಮುಂದಿರಲು ಸಾಧ್ಯ ಎಂದು ತಿಳಿಸಿ ಯೋಗದ ವಿವಿಧ ಆಸನಗಳ ಪರಿಚಯವನ್ನು ಮಕ್ಕಳಿಗೆ ವಿಶ್ವ ಯೋಗ ದಿನವಾದ ಜೂನ್ 21,2024 ರಂದು ಶ್ರೀ ಜೈನ ಮಠದ ಬಳಿ ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ ಬೆಳಿಗ್ಗೆ 9.30ರಿಂದ 10.15ರ ವರೆಗೆ ತಿಳಿಸಿಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸರಳ ಯೋಗದ ಆಸನಗಳಾದ ಪದ್ಮಾಸನ, ವೀರಾಸನಾ, ಶಲಾಭಾಸನಾ, ಪರ್ವತಾಸನಾ, ವೃಕ್ಷಾಸನ, ಸರ್ವಾಂಗಸನಾ, ಯೋಗಾಸನಗಳ ರಾಜ ಶಿರ್ಷಾಸನಾ ಕೂಡಾ ಮಾಡಿ ಅದರ ಪ್ರಯೋಜನ ತಿಳಿಸಿದರು. ದ್ವಿತೀಯ ಪಿ ಯು ವಿದ್ಯಾರ್ಥಿ ಕುಮಾರಿ ಸ್ವಾತಿ ಹಾಗೂ ಕುಮಾರಿ ಮನಸ್ವಿನಿ ಕೆಲವು ಆಸನಗಳನ್ನು ತಿಳಿಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ವಿವಿಧ ಯೋಗದ ಆಸನಗಳನ್ನು ಮಾಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಸೌಮ್ಯ ಶ್ರೀ ಸ್ವಾಗತಿಸಿ ಉಪನ್ಯಾಸಕೆ ಸುಜಾತಾ ವಂದನಾರ್ಪಣೆ ಸಲ್ಲಿಸಿದರು ಸ್ವಸ್ತಿಶ್ರೀ ಕಾಲೇಜು ಉಪನ್ಯಾಸಕ ವ್ರoದದವರು ಉಪಸ್ಥಿತರಿದ್ದರು