Recent Posts

Sunday, January 19, 2025
ಸುದ್ದಿ

ಉಗ್ರರಿಗೆ ಪಾಕ್ ಮಿಲಿಟರಿಯ ಬೆಂಬಲ: ಭಾರತಕ್ಕೆ ಎಚ್ಚರಿಕೆ – ಕಹಳೆ ನ್ಯೂಸ್

ದೆಹಲಿ: ಪಾಕಿಸ್ತಾನದಲ್ಲಿ ಮುಂದೊಂದು ದಿನ ಮುಂಬೈ ದಾಳಿ ರೂವಾರಿ, ಲಷ್ಕರ್ ಎ ತೊಯ್ಬಾ ಉಗ್ರ ಹಫೀಜ್ ಸಯೀದ್ ಪ್ರಧಾನಿಯಾದರೂ ಅಚ್ಚರಿ ಇಲ್ಲ. ಯಾಕಂದ್ರೆ ಪಾಕಿಸ್ತಾನದಲ್ಲಿ ಉಗ್ರರಿಗೆ ಅಲ್ಲಿನ ಸೇನೆಯಿಂದ ಸಿಗುತ್ತಿರುವ ಬಹಿರಂಗ ಬೆಂಬಲ, ಧಾರ್ಮಿಕ ಹಾಗೂ ಭಯೋತ್ಪಾದಕರ ರಾಜಕೀಯ ಪಕ್ಷಗಳು ಗಳಿಸುತ್ತಿರುವ ಜನಪ್ರಿಯತೆಯನ್ನು ನೋಡಿದರೆ ಈ ಆತಂಕದ ದಿನ ದೂರವಿಲ್ಲ ಎಂದು ಆಕ್ಸ್ ಫರ್ಡ್ ವಿವಿ ಹಾಗೂ ಭಾರತೀಯ ಮೂಲದ ಸ್ಟ್ರ‍್ಯಾಟಜಿಕ್ ಫೋರ್ ಸೈಟ್ ಗ್ರೂಪ್ ವರದಿ ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

2020 ರ ತರುವಾಯ ದಕ್ಷಿಣ ಏಷ್ಯಾದಲ್ಲಿ ಕಾಣಿಸಿಕೊಳ್ಳಲಿರುವ ಭಯೋತ್ಪಾದನೆಯ ಆತಂಕವನ್ನು ಈ ವರದಿ ಉಲ್ಲೇಖಿಸಿದೆ. ಪಾಕ್ ಮಿಲಿಟರಿಯ ಬಹಿರಂಗ ಬೆಂಬಲದೊಂದಿಗೆ ಅಲ್ಲಿನ ಉಗ್ರರು ಹಾಗೂ ಮೂಲಭೂತವಾದಿಗಳು ಭಾರತದ ರಾಜಕೀಯ ಮತ್ತು ಹಣಕಾಸು ವ್ಯವಸ್ಥೆಗಳ ಮೇಲೆ ದಾಳಿ ಮಾಡಬಹುದು ಎಂದೂ ಎಚ್ಚರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು