Friday, September 20, 2024
ಅಂಕಣದಕ್ಷಿಣ ಕನ್ನಡಮಂಗಳೂರುಸಿನಿಮಾಸುದ್ದಿ

ತುಳು ಚಲನಚಿತ್ರ ಲೋಕದಲ್ಲೊಂದು ವಿಭಿನ್ನ ಪ್ರಯತ್ನದ, ಅಪೂರ್ವ ಅಭಿನಯದ ಹಳ್ಳಿ ಹುಡುಗಿ ಪಾತ್ರದಲ್ಲಿ ಸೈ ಎನಿಸಿಕೊಂಡ ನ್ಯಾಚುರಲ್‌ ಬ್ಯೂಟಿ ಅನ್ವಿತಾ ಸಾಗರ್..!! – ಕಹಳೆ ನ್ಯೂಸ್

ಅನ್ವಿತಾ ಸಾಗರ್ ನಮ್ಮ ಕುಡ್ಲದ ಬೆಡಗಿ. ಈಕೆಯ ಮೂಲ ಹೆಸರು ಪಾರ್ವತಿ. 1992 ರ ಫೆಬ್ರವರಿ 20 ರಂದು ಜನಿಸಿದ ಈ ನ್ಯಾಚುರಲ್‌ ಬ್ಯೂಟಿ ಈಗ ಕನ್ನಡ ಸೀರಿಯಲ್ ನಟಿ ಅನ್ನೋದು ನಿಮಗೆ ಗೊತ್ತೇ ಇದೆ. ಆದ್ರೆ ಅದಕ್ಕೂ ಮುನ್ನ ಇವರು ಮಾಡೆಲ್ ಆಗಿದ್ದರು, ಟಿವಿ ಚಾನೆಲ್ ಗಳಲ್ಲಿ ನಿರೂಪಣೆ ಮಾಡ್ತಿದ್ರು, ಇನ್ನೂ ಹೇಳ್ಬೇಕಾದ್ರೆ ಇವರು ಕನ್ನಡ ಮತ್ತು ತುಳು ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ ಅನ್ನೋದು ಗಮನಾರ್ಹ ಸಂಗತಿ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು

ಈ ನ್ಯಾಚುರಲ್ ಬ್ಯೂಟಿ, ಮಲ್ಟಿ ಟ್ಯಾಲೆಂಟ್ ಮಂಗಳೂರು ಹುಡುಗಿಯ ಸಹೋದರ ಅನೂಪ್ ಸಾಗರ್ ಕೂಡಾ ತುಳು ಚಿತ್ರರಂಗದಲ್ಲಿ ಮಿಂಚುತ್ತಿರುವಂತಹ ನಟ. ಅನ್ವಿತಾ ಜನಿಸಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ, ಅಲ್ಲಿಯೇ ಹೈಸ್ಕೂಲ್ ಶಿಕ್ಷಣ ಮುಗಿಸಿದ ಇವರು, ನಂತರ ನೆಲೆಯೂರಿದ್ದು ಮಂಗಳೂರಿನಲ್ಲಿ. ಇವರ ತಂದೆ ಉದ್ಯಮಿ ಹೇಮಚಂದ್ರ, ತಾಯಿ ಭಾರತಿ. ಮಂಗಳೂನಲ್ಲೇ ಇವರು ಎಂ.ಬಿ.ಎ ಸ್ನಾತಕೋತ್ತರ ಪದವಿ ಪಡೆದು ಬಳಿಕ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು.

ಸ್ನಾತ್ತಕೋತ್ತರ ಪದವಿ ಪಡೆಯುತ್ತಿರುವಾಗಲೇ ಅನ್ವಿತಾ ನಾಲ್ಕು ವರುಷಗಳ ಕಾಲ ನಮ್ಮ ಟಿ.ವಿ ಚಾನಲ್ ನಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದರು. ನಂತರ 2015 ರಲ್ಲಿ ಇವರು ರಂಜಿತ್ ಬಜ್ಪೆ ನಿರ್ದೇಶನದ ದಂಡ್ ತುಳುಚಿತ್ರದ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಿಸಿದರು. ಇದರ ನಂತರ ಹಲವಾರು ತುಳು ಮತ್ತು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ.

 

ಅನ್ವಿತಾ ಅವರು ಕನ್ನಡ ಸಿನಿಮಾಗಳಾದ ಬಣ್ಣ ಬಣ್ಣದ ಬದುಕು, ಸ್ನೇಹಚಕ್ರ, ಮಾಯಾಕನ್ನಡಿ , ಜೀವನ ಯಜ್ಞ ಹಾಗೂ ತುಳು ಸಿನಿಮಾಗಳಾದ ದಂಡ್ , ಪೆಟ್ಕಮ್ಮಿ, ಬಲೆ ಪುದರ್ ದೀಕ ಈ ಪ್ರೀತಿಗ್ ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಪ್ರಸ್ತುತವಾಗಿ ಇವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಎಂಬ ಧಾರವಾಹಿಯಲ್ಲಿ ‘ಆಧ್ಯಾ; ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ವಿಶೇಷವಾಗಿ ಇನ್ನು ಐತಿಹಾಸಿಕ ಪಾತ್ರಗಳನ್ನು ತುಂಬ ಇಷ್ಟ ಪಡುವ ಅನ್ವಿತಾಗೆ ನೆಗೆಟಿವ್ ಶೇಡ್ ಮಾಡಬೇಕು ಎಂಬ ಆಸೆಯೂ ಇದೆಯಂತೆ. ಅಷ್ಟೇ ಅಲ್ಲ ಸಿನಿಮಾ, ವೆಬ್ ಸಿರೀಸ್ ಕಡೆಗೆ ಗಮನ ಕೊಡಬೇಕು ಎನ್ನುವ ಯೋಜನೆಯೂ ಇದೆಯಂತೆ. ಗಟ್ಟಿಮೇಳ ಸೀರಿಯಲ್ ನ ಆದ್ಯಾ ಪಾತ್ರದಲ್ಲಿ ಕರ್ನಾಟಕದಾದ್ಯಂತ ಸಾಕಷ್ಟು ಜನಪ್ರಿಯತೆ ಪಡೆದ ಹಿನ್ನೆಲೆಯಲ್ಲಿ ಈ ಕ್ಷೇತ್ರ ಬಿಡಲು ಮನಸ್ಸಿಲ್ಲ ಎನ್ನುತ್ತಾರೆ ಅನ್ವಿತಾ ಸಾಗರ್. ಅದರ ಜೊತೆಗೆ ಮಂಗಳೂರಿನಲ್ಲಿ ಇವರದ್ದೇ ಆದ ಒಂದು ಕೆಫೆ ಕೂಡ ಇದೆ‌.

ಸೋಶಿಯಲ್ ಮೀಡಿಯಾದಲ್ಲೂ ಅಭಿಮಾನಿಗಳನ್ನು ಹೊಂದಿರುವ ಅನ್ವಿತಾ ಸೂಪರ್ ಡ್ಯಾನ್ಸರ್ ಕೂಡ ಹೌದು, ಅದನ್ನು ಇವರ ಸೋಶಿಯಲ್ ಮೀಡೀಯಾ ನೋಡಿದ್ರೇನೆ ಗೊತ್ತಾಗುತ್ತೆ. ಸಾಕಷ್ಟು ಡ್ಯಾನ್ಸ್ ವಿಡೀಯೋಗಳನ್ನು, ರೀಲ್ಸ್ ಗಳನ್ನು ಶೇರ್ ಮಾಡುತ್ತಾ, ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ ಈ ಸುಂದರಿ. ಇದು ಅನ್ವಿತಾ ಸಾಗರ್ ಬಗ್ಗೆ ಒಂದಿಷ್ಟು ಮಾಹಿತಿ.

ಸದ್ಯ ತುಳು ಚಿತ್ರರಂಗದಲ್ಲಿ ಅನೇಕ ಚಿತ್ರಗಳು ಬರುತ್ತಿದ್ದರು. ನೆನಪಿನಲ್ಲಿ ಉಳಿಯುವಂತಹ ಚಿತ್ರಗಳು, ಪಾತ್ರಗಳು ಬಾರದೆ ಕಾಲಗಳಲೇ ಕಳೆದವು. ತುಳು ಚಿತ್ರರಂಗ ಕೇವಲ ಕಾಮಿಡಿಗೆ ಮೀಸಲಾಗಿದೆ ಎಂದು‌ ಮೂಗು ಮುರಿಯುವ ಪ್ರೇಕ್ಷಕರಿಗೆ ಒಂದೊಳ್ಳೆ ಪಾತ್ರ ಮೊನ್ನೆ ತಾನೆ ಬಿಡುಗಡೆ ಹೊಂದಿದ ತುಡರ್ ಚಿತ್ರದ ಮಲ್ಲಿಯ ಪಾತ್ರ. ಎಸ್. ಹೌದು ಚಿತ್ರದಲ್ಲಿ ಸಾಕಷ್ಟು ಅನುಭವಿ ನಟ – ನಟಿಯರು ಸಮರ್ಥವಾಗಿ ಪಾತ್ರ ನಿರ್ವಹಣೆ ಮಾಡಿ, ಕಥೆಗೆ ನ್ಯಾಯ ಒದಗಿಸಲು ಮುಂದಾಗಿದ್ದಾರೆ. ಆದರೆ ಅಂದುಕೊಂಡಷ್ಟು ಮಟ್ಟಿಗೆ ಯಶಸ್ವಿ ಸಿಕ್ಕದಿದ್ದರು, ಅತೀ ಕಳಪೆಯಲ್ಲ. ಆದರೆ ಅನ್ವಿತಾ ಸಾಗರ್ ಮಾತ್ರ ಈ ಚಿತ್ರದ ಮಲ್ಲಿ ಪಾತ್ರದಲ್ಲಿ ಸೂಪರ್ ಪಾಸ್ ಆಗಿದ್ದಾರೆ. ಸಂಪೂರ್ಣ ಚಲನಚಿತ್ರದಲ್ಲಿ ನಂಬರ್ ಒನ್ ಸ್ಥಾನ ಇವರದ್ದೇ.. ಸಂಪೂರ್ಣ ಚಿತ್ರ ನೋಡಿದ ಪ್ರೇಕ್ಷಕನಾಗಿ ನಾನು ಹಾಗೂ ಚಿತ್ರಮಂದಿರದಿಂದ ಹೊರಬರುತ್ತಿದ್ದವರ ಬಾಯಿಯಲ್ಲಿ ಇದ್ದದ್ದು ಮಲ್ಲಿಯ ತುಳು ಹಾಡು.. ಮುಗ್ದ ಅಭಿನಯ.

Kahale News

ಇನ್ನು ಅನ್ವಿತಾ ಸಾಗರ್ ಹತ್ರ ಈ ಬಗ್ಗೆ ಕೇಳಿದ್ರೆ ಮಲ್ಲಿ ಒಂದು ಮುಗ್ದ, ಕ್ಯೂಟ್ ಪಾತ್ರ… ಅವಳಿಗೆ ಅವಳದ್ದೇ ಪುಟ್ಟಲೋಕ ಮತ್ತು ಸಮಾಜಕ್ಕೆ ಮಲ್ಲಿಯ ಪಾತ್ರ ಸಂದೇಶ ನೀಡುವಂತಹದ್ದು, ಮತ್ತು‌ ಮಲ್ಲಿ ಪಾತ್ರಕ್ಕೆ ಇರುವುದು ಮೂರೇ ದೃಶ್ಯ ಅದರಲ್ಲಿ ಪೂರ್ಣ ಚಲನಚಿತ್ರ ಕಥೆಯ ಟ್ವಿಸ್ಟ್ ಅಡಕವಾಗಿದೆ ಹೀಗಾಗಿಯೇ ಈ ಪಾತ್ರಕ್ಕೆ ಜೀವ ತುಂಬುವುದು ಅಷ್ಟು ಸುಲಭದ ಕೆಲಸವಲ್ಲ. ನನಗೆ ದೇವರಂತೆ ಎರಡು ನಿರ್ದೇಶಕರು ಮತ್ತು ಮೋಹನ್ ಸಾರ್ ಸಿಕ್ಕಿದ್ರು., ಅವ್ರು ಪ್ರತಿ ಹಂತದಲ್ಲೂ ಹೇಳಿಕೊಟ್ಟರು. ಆ ಶುದ್ದ ಹಳ್ಳಿಯ ತುಳು ಭಾಷೆ ಸ್ವಲ್ಪಮಟ್ಟಿಗೆ ಕಷ್ಟ ಅನ್ನಿಸಿತು. ಆ‌ ಪಾತ್ರಕ್ಕಾಗಿ ನಾನು ಬಹಳಷ್ಟು ತಯಾರಿ ಮಾಡಿದ್ದೇ‌ನೆ. ಮತ್ತು ಜನ ಇಂದು ಅದನ್ನು ಮೆಚ್ಚಿಕೊಂಡಿರುವುದು ಖುಷಿ ಕೊಟ್ಟಿದೆ ಎಂದು ಪಾತ್ರ ಮಲ್ಲಿಯಷ್ಟೇ ಮುಗ್ದವಾಗಿ ಹೇಳ್ತಾರೆ ಈ ನ್ಯಾಚುರಲ್‌ ಬ್ಯೂಟಿ ಅನ್ವಿತಾ.

ಒಟ್ಟಿನಲ್ಲಿ ಚಲನಚಿತ್ರ ಎಷ್ಟು ಯಶಸ್ಸು ಕಂಡಿದೆಯೂ ಅದಕ್ಕಿಂತ ಜಾಸ್ತಿಯಾಗಿ ಇಡೀ ಚಿತ್ರತಂಡಕ್ಕೆ ಮಲ್ಲಿ ಪಾತ್ರ ಬಹುದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ ಮತ್ತು ತುಳುವಿನಲ್ಲಿ ಇಂತಹದ್ದೊಂದು ಅಪರೂಪದ ಪ್ರಯೋಗ ಮಾಡಿ, ನಿರ್ದೇಶಕರು ಸೈ ಎನಿಸಿಕೊಂಡಿದ್ದಾರೆ. ಶುಭವಾಗಲಿ.

– ಶ್ಯಾಮ ಸುದರ್ಶನ ಹೊಸಮೂಲೆ
ಪ್ರಧಾನ ಸಂಪಾದಕರು