Saturday, September 21, 2024
ಸುದ್ದಿ

ಮದ್ಯಪ್ರಿಯರಿಗೆ ರಾಜ್ಯ ಸರ್ಕಾರದಿಂದ ಶಾಕ್..! ಜುಲೈ 1ರಿಂದ ಅಗ್ಗದ ಮದ್ಯ ಬೆಲೆ ದುಬಾರಿ – ಕಹಳೆ ನ್ಯೂಸ್

ಬೆಂಗಳೂರು: ಮದ್ಯ ಪ್ರಿಯರಿಗೆ ಸರ್ಕಾರದಿಂದ ಶಾಕ್ ಸಿಗಲಿದೆ. ಬಜೆಟ್‌ನಲ್ಲಿ ಪ್ರಕಟಿಸಿದಂತೆ ಜುಲೈ ಒಂದರಿಂದ ರಾಜ್ಯದಲ್ಲಿ ಮದ್ಯದ ಬೆಲೆಗಳಲ್ಲಿ ಏರಿಳಿತ ಆಗಲಿದೆ. ಅಗ್ಗದ ಬೆಲೆಯ ಮದ್ಯಗಳು ದುಬಾರಿಯಾದರೆ ದುಬಾರಿ ಮದ್ಯಗಳ ದರದಲ್ಲಿ ಸ್ವಲ್ಪ ಪ್ರಮಾಣದ ಇಳಿಕೆ ಆಗಲಿದೆ.

ಅಗ್ಗದ ಮದ್ಯದ ಬೆಲೆ ಹೆಚ್ಚಿಸುವ ಈ ಮೂಲಕ ಬಡ ಎಣ್ಣೆ ಪ್ರಿಯರ ಮೇಲೆ ಮತ್ತಷ್ಟು ಭಾರ ಹಾಕಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಚ್‌ಡಿಕೆ ವ್ಯಂಗ್ಯ :
ಮದ್ಯದ ದರ ಇಳಿಕೆಗೆ ಕೇಂದ್ರ ಮಂತ್ರಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಈಗ ಎಣ್ಣೆ ದರ ಇಳಿಸ್ತಾರ? ಜ್ಞಾನೋದಯ ಆಗಿದ್ಯಾ ಅಂತಾ ಕಾಲೆಳೆದಿದ್ದಾರೆ. ಮದ್ಯದ ದರ ಹೆಚ್ಚಳವನ್ನು ಗ್ಯಾರಂಟಿಗಳಿಗೆ ಲಿಂಕ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಲು ವಿಪಕ್ಷಗಳಿಗೆ ನೈತಿಕತೆ ಇಲ್ಲ ಎಂದು ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಕಿಡಿಕಾರಿದ್ದಾರೆ. ಯಾವ್ಯಾವ ದರ ಎಷ್ಟು ಆಗುತ್ತದೆ ಎಂಬುದನ್ನು ತಿಳಿಯಲು ಜುಲೈ 1ರವರೆಗೆ ಕಾದು ನೋಡಿ ಎಂದಿದ್ದಾರೆ.

ಜಾಹೀರಾತು