Friday, April 11, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.)ಬಂಟ್ವಾಳ ಇದರ ತುಂಬೆ ವಲಯದ ಕಲ್ಲಿಗೆ ಒಕ್ಕೂಟ ಸಭೆ– ಕಹಳೆ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.)ಬಂಟ್ವಾಳ ಇದರ ತುಂಬೆ ವಲಯದ ಕಲ್ಲಿಗೆ ಒಕ್ಕೂಟ ಸಭೆಯು ಸರಕಾರಿ ಪ್ರಾಥಮಿಕ ಶಾಲೆ ಬ್ರಹ್ಮರ ಕೂಟ್ಲು ಇಲ್ಲಿ ಒಕ್ಕೂಟದ ಅಧ್ಯಕ್ಷರಾದ ಜಯಂತ ತುಂಬೆ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಗ್ರಾಮಾಭಿವೃದ್ಧಿಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಎಂ ಯೋಜನೆಯ ವಿಶೇಷ ಕಾರ್ಯಕ್ರಮಗಳಾದ ಸಂಪೂರ್ಣ ಸುರಕ್ಷಾ ,ಪ್ರಗತಿ ರಕ್ಷಾ ಕವಚ ,ಸುಜ್ಞಾನ ನಿಧಿ , ಕ್ರಿಟಿಕಲ್ ಫಂಡ್, ಮೈಕ್ರೋ ಬಜತ್ ಸೌಲಭ್ಯ, ಇತರ ಕಾರ್ಯಕ್ರಮಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು.
ಈ ಸಂದರ್ಭ ಒಕ್ಕೂಟದ ಮಾಷಲ್ಲ ಸಂಘದ ಸದಸ್ಯರಾದ ರಝಿನಾ ರವರ ಮಗ ಇರ್ಫಾನ್ ರವರಿಗೆ ಅನಾರೋಗ್ಯದ ನಿಮಿತ್ತ ಚಿಕಿತ್ಸಾ ವೆಚ್ಚಕ್ಕಾಗಿ ಕ್ಷೇತ್ರದಿಂದ ಮಂಜೂರಾದ ರೂ. 20,000 ಕ್ರಿಟಿಕಲ್ ಫಂಡ್ ಸೌಲಭ್ಯ ಮೊತ್ತವನ್ನು ವಿತರಿಸಲಾಯಿತು. ಈ ಸಂದರ್ಭ , ಕಳ್ಳಿಗೆ ಗ್ರಾಮ ಪಂಚಾಯತ್ ಆದ್ಯೆಕ್ಷೆ ವಾರಿಜಾ, ತುಂಬೆ ಗ್ರಾಮ ಪಂಚಾಯತಿ ಆದ್ಯೆಕ್ಷೆ ಜಯಂತಿ,ತುಂಬೆ ವಲಯದ ಮೇಲ್ವಿಚಾರಕಿ ಮಮತಾ,ಸೇವಾ ಪ್ರತಿನಿಧಿ ಬಬಿತಾ, ವಿ ಎಲ್ ಇ ರೋಹಿಣಿ, ಒಕ್ಕೂಟದ ಪದಾಧಿಕಾರಿಗಳು ಒಕ್ಕೂಟದ ಸಂಘ ಗಳ ಸದಸ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ