Saturday, November 23, 2024
ಉಡುಪಿಯಕ್ಷಗಾನ / ಕಲೆಸುದ್ದಿ

ಉಡುಪಿ: ಮಥುರಾ ಹೋಟೆಲ್‌‌ನ ಜಯಕೃಷ್ಣ ಸಭಾಂಗಣದಲ್ಲಿ ನಡೆದ ಬೆಂಕಿ ರಹಿತ ಅಡುಗೆ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆ– ಕಹಳೆ ನ್ಯೂಸ್

ಉಡುಪಿ: ಮಥುರಾ ಹೋಟೆಲ್‌‌ನ ಜಯಕೃಷ್ಣ ಸಭಾಂಗಣದಲ್ಲಿ ಬೆಂಕಿ ರಹಿತ ಅಡುಗೆ ಸ್ಪರ್ಧೆ ಮತ್ತು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಉದ್ಯಮಿ ವಿಶ್ವನಾಥ್ ಶೆಣೈ ಉದ್ಘಾಟಿಸಿದರು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಡಗಬೆಟ್ಟು ಕ್ರೆಡಿಟ್ ಕೋ.ಅ. ಸೊಸೈಟಿಯ ಅಧ್ಯಕ್ಷರಾದ ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ ಇಂದಿನ ಕಾಲದಲ್ಲಿ ಆರೋಗ್ಯವೇ ಬಹುದೊಡ್ಡ ಸಂಪತ್ತು. ನಾವು ಹಿತಮಿತ ಆಹಾರ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ. ಅಡುಗೆ ಕೊಣೆಯಲ್ಲಿ ಬೆಂಕಿ ಇಲ್ಲದೆ ಆಹಾರ ತಯಾರಿಸಿ ಉತ್ತಮ ಆರೋಗ್ಯವಂತರಾಗಿ ಇರುವಂತೆ ಜಾಗೃತಿ ಮೂಡಿಸುವ ಕೆಲಸ ಅಭಿನಂದನಾರ್ಹ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಗಳಾಗಿ ಪ್ರಸಾದ್ ನೇತ್ರಾಲಯದ ಮುಖ್ಯಸ್ಥರಾದ ಡಾ.ಕೆ.ಕೃಷ್ಣಪ್ರಸಾದ್, ನಗರಸಭಾ ಸದಸ್ಯರಾ ವಿಜಯ್ ಕೊಡವೂರು, ಅಮೃತ ಕೃಷ್ಣಮೂರ್ತಿ ಆಚಾರ್ಯ, ಸಮಾಜಸೇವಕಾರದ ಕೃಷ್ಣಮೂರ್ತಿ ಆಚಾರ್ಯ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಅಲೆವೂರು ರಾಜೇಶ ಶೆಟ್ಟಿ, ಉಮೇಶ್ ಮಾರ್ಪಳ್ಳಿ, ಅಕ್ಷತಾ ಗಿರೀಶ್ ಐತಾಳ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಡೆದ ಬೆಂಕಿ ರಹಿತ ಅಡುಗೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ – ಸೀಮಾ ಪೈ ದ್ವಿತೀಯ ಬಹುಮಾನ ಪ್ರಿಯಾ ನಾಯಕ್, ತೃತೀಯ ಬಹುಮಾನವನ್ನು ವೀರಭದ್ರ ಪಡೆದರು.

ಇನ್ನು ಮಕ್ಕಳಿಗಾಗಿ ನಡೆದ ಚಿತ್ರಕಲಾ ಸ್ಪರ್ಧೆ ಬಣ್ಣದಲ್ಲಿ ಜೂನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಅನ್ವಿತಾ ಶೆಟ್ಟಿಗಾರ್, ದ್ವಿತೀಯ ಬಹುಮಾನ ವಿನೇಶ್ ಆಚಾರ್ಯ, ತೃತೀಯ ಬಹುಮಾನ ನಿಧಿಶ್ ಜೆ ನಾಯಕ್ ಪಡೆದರು.

ಸೀನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನ ದ್ವಿತಿ ಎಸ್, ದ್ವಿತೀಯ ಬಹುಮಾನ ಕೃಷ್ಣಪ್ರಸಾದ್ ಭಟ್ ಹಾಗೆ ತೃತೀಯ ಬಹುಮಾನ ಪರೀಕ್ಷಿತ ಆಚಾರ್ಯ ಪಡೆದರು.

ತೀರ್ಪುಗಾರರಾಗಿ ಭಾಗ್ಯಶ್ರೀ ಐತಾಳ್ , ಜೂಲಿಯಸ್ ಲೂಯಿಸ್ ,ಮಹೇಂದ್ರ ಆಚಾರ್ಯ, ಶ್ರೀನಾಥ್ ಮಣಿಪಾಲ ಸಹಕರಿಸಿದರು. ನಿರೂಪಣೆ ನಾಗರತ್ನ ಜಿ ಹೇರ್ಳೆ ನೆರವೇರಿಸಿದರು.