Tuesday, April 8, 2025
ಉತ್ತರಕನ್ನಡರಾಜಕೀಯಸುದ್ದಿ

ಮಾಜಿ ಕೇಂದ್ರ ಸಚಿವ, ಮಾಜಿ ಸಂಸದ ಅನಂತ್ ಕುಮಾರ್‌ ಹೆಗ್ಡೆ ಮನೆಯಲ್ಲಿ ಅಗ್ನಿ ಅವಘಡ – ಕಹಳೆ ನ್ಯೂಸ್

ಕಾರವಾರ: ಮಾಜಿ ಕೇಂದ್ರ ಸಚಿವ, ಮಾಜಿ ಸಂಸದ ಅನಂತ್ ಕುಮಾರ್ ಹೆಗ್ಡೆ(Anantkumar Hegde) ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಇಂದು ಮುಂಜಾನೆ ಈ ಘಟನೆ ನಡೆದಿದೆ. ಶಿರಸಿಯ KHB ಕಾಲೋನಿಯಲ್ಲಿ ಇರುವ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ‌ ಈ ಘಟನೆ ಸಂಭವಿಸಿದೆ. ಮನೆಯ ಮೇಲ್ಭಾಗದ ಜಿಮ್ ಮಾಡುವ ಕೊಠಡಿಯಲ್ಲಿ ಶಾರ್ಟ್‌ ಸರ್ಕ್ಯೂಟ್‌ ಆಗಿದೆ.

ಬೆಂಕಿಯ ಕೆನ್ನಾಲಿಗೆಗೆ ಲಕ್ಷಾಂತರ ಮೌಲ್ಯದ ಜಿಮ್ ವಸ್ತುಗಳು ನಾಶವಾಗಿವೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ