Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ನೆಟ್ಡಣಿಗೆ ಮುಡ್ನೂರು ಗ್ರಾಪಂ ಸಭಾಂಗಣದಲ್ಲಿ ನಡೆದ ಅಕ್ರಮ-ಸಕ್ರಮ ಬೈಠಕ್ ಹಾಗೂ ಹಕ್ಕು‌ಪತ್ರ ವಿತರಣಾ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಚುನಾವಣಾ ಪ್ರಚಾರದ ವೇಳೆ ನನ್ನ ಕ್ಷೇತ್ರದ ಜನರಿಗೆ ಕೊಟ್ಟ ಮಾತನ್ನು ಎಂದು‌ತಪ್ಪಲಾರೆ ಗ್ರಾಮದ‌ಪ್ರತೀ‌ ಮನೆ ಮನೆಗೂ ಹಕ್ಕು ಪತ್ರ ತಲುಪಿಸುವ ಕೆಲಸವನ್ನು ಮಾಡಿಯೇ ಸಿದ್ದ ಇದರಲ್ಲಿ ಯಾವುದೇ ವೆತ್ಯಾಸಗಳೇ ಇಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ನೆಟ್ಡಣಿಗೆ ಮುಡ್ನೂರು ಗ್ರಾಪಂ ಸಭಾಂಗಣದಲ್ಲಿ ನಡೆದ ಅಕ್ರಮ ಸಕ್ರಮ ಬೈಠಕ್ ಹಾಗೂ ಹಕ್ಕು‌ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಅಕ್ರಮ ಸಕ್ರಮ ಹಕ್ಕು ಪತ್ರ ವಿತರಣೆಗೆ ಚಾಲನೆ ನೀಡಲಾಗಿದೆ. ಒಟ್ಟು 13000 ಅರ್ಜಿಗಳು ಇದೆ. ಇವೆಲ್ಲವನ್ನೂ ಹಂತ ಹಂತವಾಗಿ ವಿಲೇವಾರಿ ಮಾಡಿಯೇ ಮಾಡುತ್ತೇವೆ. ನನ್ನ ಅರ್ಜಿ ಏನಾಗಬಹುದೋ ಎಂಬ ಭಯ ಯಾರಿಗೂ ಬೇಡ ಖಂಡಿತವಾಗಿಯೂ ನಿಮಗೆ ಹಕ್ಕು‌ಪತ್ರ ಸಿಕ್ಕೇ ಸಿಗ್ತದೆ ಅನುಮಾನವೇ ಬೇಡ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಕ್ರಮ ಸಕ್ರಮ/ 94 ಸಿ ಕೊಡುವುದೇ ನನ್ನ ಮುಖ್ಯ ಉದ್ದೇಶವಾಗಿತ್ತು:
ನಾನು ರಾಜಕೀಯಕ್ಕೆ ಬರುವ ಮೊದಲು ಅಕ್ರಮ ಸಕ್ರಮ ಮತ್ತು 94 ಸಿ ಮತ್ತು ಸಿಸಿ ಇದರಲ್ಲಿನ ಭೃಷ್ಟಾಚಾರತೆಯ ಬಗ್ಗೆ ಗೊತ್ತಿತ್ತು. ನಾನು ಶಾಸಕನಾದರೆ ಇವೆಲ್ಲವನ್ನೂ ಭೃಷ್ಟಾಚಾರವಿಲ್ಲದೆ ವಿಲೇವಾರಿ‌ಮಾಡುತ್ತಿದ್ದೆ ,ಬಡವರಿಗೆ ಸಹಾಯ ಮಾಡುತ್ತಿದ್ದೆ ಎಂಬ ಆಸೆ ಇತ್ತು. ಈಗ ನಾನು ಶಾಸಕನಾಗಿದ್ದೇನೆ ಆವತ್ತು ನಾನು ವ್ಯಕ್ತಪಡಿಸಿದ ಆಸೆಯನ್ನು ನಾನೇ ಈಡೇರಿಸಲಿದ್ದೇನೆ. ನಾನು ಎಂದೂ ಭೃಷ್ಟಾಚಾರದ ವಿರುದ್ದವೇ ಇದರಲ್ಲಿ ರಾಜಿಯೇ ಇಲ್ಲ ಎಂದು‌ಶಾಸಕರು ಹೇಳಿದರು.