ದಿ|ಕಂಡ್ಲೂರುನರಸಿಂಹ ಜೋಗಿ ಹಾಗೂ ದಿ|ಶ್ರೀಮತಿ ಗಿರಿಜಾನರಸಿಂಹ ಜೋಗಿ ಸ್ಮರಣಾರ್ಥ ನೋಟ್ ಪುಸ್ತಕ ಕ್ರೀಡಾ ಸಮವಸ್ತ್ರ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ- ಕಹಳೆ ನ್ಯೂಸ್
“ವಿದ್ಯಾರ್ಥಿಗಳ ಭವ್ಯ ಭವಿಷ್ಯ ರೂಪಿಸುವ, ವಿದ್ಯಾರ್ಥಿಗಳ ಸಾಧನೆ ಹಿಂದಿರುವ ಶಿಕ್ಷಕರನ್ನು ಗೌರವಿಸುವುದರೊಂದಿಗೆ, ಅಬ್ದುಲ್ ಕಲಾಂ ಮತ್ತು ವಿವೇಕಾನಂದರು ನಮ್ಮ ಬದುಕಿನ ಆದರ್ಶವಾಗಬೇಕು. ನಮ್ಮಿಂದ ನಮ್ಮ ತಂದೆ ತಾಯಿ ಗುರುತಿಸಿಕೊಳ್ಳುವಂತಾದರೆ ಅದು ನಮ್ಮ ಬದುಕಿನ ಬಹುದೊಡ್ಡ ಸಾರ್ಥಕತೆ” ಎಂದು ಶ್ರೀ ಶ್ರೀನಿವಾಸ ಜೋಗಿ ಮಾಲಕರು ,ಶ್ರೀ ಭವಾನಿ ಕಂಗನ್ ಸ್ಟೋರ್ಸ್ ಬೆಂಗಳೂರು ಇವರು ಹೇಳಿದರು.
ರಾಮ್ಸನ್ ಸರ್ಕಾರಿ ಪ್ರೌಢಶಾಲೆ ಕಂಡ್ಲೂರು ಇಲ್ಲಿಯ ವಿದ್ಯಾರ್ಥಿಗಳಿಗೆ ತಮ್ಮ ತಂದೆ ತಾಯಿಯ ಸವಿನೆಪಿನಲ್ಲಿ ಪ್ರತಿ ವರ್ಷ ನೀಡುವ ಉಚಿತ ನೋಟ್ ಪುಸ್ತಕ, ಕ್ರೀಡಾ ಸಮವಸ್ತ್ರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಅಭಿನಂದಿಸಿ , ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಶ್ರೀ ಸಾಮ್ರಾಟ್ ಶೆಟ್ಟಿ, ಗೌರವಾಧ್ಯಕ್ಷರು ಶಾಲಾ ಅಭಿವೃದ್ಧಿ ಸಮಿತಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಚಂದ್ರಶೇಖರ ಜೋಗಿ ಆಡಳಿತ ಧರ್ಮದರ್ಶಿಗಳು ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಕಂಡ್ಲೂರು, ಶ್ರೀ ಶ್ರೀನಿವಾಸ ಜೋಗಿ, ಮಾಲಕರು ಭವಾನಿ” ಕಂಗನ್ ಸ್ಟೋರ್ಸ್ “ಬೆಂಗಳೂರು, ಶ್ರೀ ಪ್ರಕಾಶ್ಚಂದ್ರ ಶೆಟ್ಟಿ ಸದಸ್ಯರು ಗ್ರಾಮ ಪಂಚಾಯತ್, ಶ್ರೀ ನವೀನ್ ಷಾ ಮಾಲಕರು” ಅಪ್ಸರಾ ನಾವೆಲ್ಟಿಸ್” ಬೆಂಗಳೂರು, ಶ್ರೀ ಸುರೇಶ್ ಜೈನ್ ಮಾಲಕರು “ಮಯೂರ ಗ್ರೂಪ್ ಆಫ್ ಕಂಪನೀಸ್” ಶ್ರೀ ಪ್ರದೀಪ್ ಪ್ರಸಾದ್ “ಪ್ರಸಾದ್ ನಾವೆಲ್ಟಿಸ್” ಬೆಂಗಳೂರು, ಶ್ರೀ ನರೇಂದ್ರ ಕುಮಾರ್ “ಓಂ ಶಾಂತಿ ನಾವೆಲ್ಟಿಸ್” ಬೆಂಗಳೂರು, ಶ್ರೀ ವೆಂಕಟೇಶ ಹೆಬ್ಬಾರ್ “ಸಿಂಧೂರ ಫ್ಯಾನ್ಸಿ” ಬೆಂಗಳೂರು, ಶ್ರೀ ಚಂದು ಮಹಾರಾಜ್ ಚಿನ್ನದ ವ್ಯಾಪಾರಿಗಳು ಬೆಂಗಳೂರು, ಶ್ರೀ ಮುರುಳಿ ಜೋಶಿ ಉದ್ಯಮಿಗಳು ಬೆಂಗಳೂರು, ಶ್ರೀ ಕೃಷ್ಣಜೋಗಿ ಮಾಲಕರು” ಕನ್ನಿಕಾ ಕಂಗನ್ “ಬೆಂಗಳೂರು, ಶ್ರೀಮತಿ ಶೋಭಾ ಚಂದ್ರಶೇಖರ್ ಜೋಗಿ, ಶ್ರೀಮತಿ ಅನಿತಾ ಶ್ರೀನಿವಾಸ್ ಜೋಗಿ, ಶ್ರೀ ಗೋಪಾಲ್ ವಿಷ್ಣು ಭಟ್ ಪ್ರಭಾರ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.
ಕಲಿಕೆಗೆ ಪ್ರೇರಕರಾಗಿ ಸಹಾಯ ಸಹಕಾರ ನೀಡಿದ ಶ್ರೀ ಚಂದ್ರಶೇಖರ್ ಜೋಗಿ ,ಶ್ರೀ ಶ್ರೀನಿವಾಸ ಜೋಗಿ, ಹಾಗೂ ಶ್ರೀ ರಾಜಶೇಖರ್ ಜೋಗಿ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸಿ, ಶ್ರೀ ಚಂದ್ರಶೇಖರ್ ಜೋಗಿ ದಂಪತಿಗಳನ್ನು ಸಂಸ್ಥೆ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು. ಬಹುದೊಡ್ಡ ಮೊತ್ತದ ನಗದು ಬಹುಮಾನ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಪ್ರೋತ್ಸಾಹಿಸಿದ, ಉದ್ಯಮಿಗಳಾದ, ಶ್ರೀ ನವೀನ್ ಷಾ, ಶ್ರೀಪ್ರದೀಪ್ ಪ್ರಸಾದ್, ಶ್ರೀ ಸುರೇಶ್ ಜೈನ್, ಶ್ರೀ ನರೇಂದ್ರ ಕುಮಾರ್ ಜೈನ್ ಇವರನ್ನು ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು , ಪೋಷಕರು ವಿದ್ಯಾರ್ಥಿಗಳು ,ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಹ ಶಿಕ್ಷಕರಾದ ಶ್ರೀಮತಿ ರಜನಿ. ಎಸ್. ಹೆಗಡೆ ಸ್ವಾಗತಿಸಿ ,ಶ್ರೀಮತಿ ಲಕ್ಷ್ಮಿ ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು,ಸಹ ಶಿಕ್ಷಕ ಸಂತೋಷ್ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ರತ್ನಾ ವಂದಿಸಿದರು.