Saturday, November 16, 2024
ದಕ್ಷಿಣ ಕನ್ನಡಬಂಟ್ವಾಳಯಕ್ಷಗಾನ / ಕಲೆಸುದ್ದಿ

ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ನಡೆದ ಯಕ್ಷಧ್ರುವ ಯಕ್ಷ ಶಿಕ್ಷಣ ತರಬೇತಿಯ ಉದ್ಘಾಟನಾ ಕಾರ್ಯಕ್ರಮ – ಕಹಳೆ ನ್ಯೂಸ್

ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ಯಕ್ಷದ್ರುವ ಯಕ್ಷ ಶಿಕ್ಷಣ ತರಬೇತಿ ಉದ್ಘಾಟನಾ ಕಾರ್ಯಕ್ರಮವನ್ನು ಅತಿಥಿ ಅಭ್ಯಾಗತರಿಂದ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಲಾಯಿತು. ಶ್ರೀವತ್ಸ ದೇವರ ಸ್ತುತಿಯನ್ನು ಹಾಡಿದನು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದ ಅಧ್ಯಕ್ಷರಾದ ಸುಜಿತ್ ಕುಮಾರ್ (ಮಂಗಳೂರು ಗ್ರಾಮಾಂತರ ಜಿಲ್ಲಾ ಗ್ರಾಮಾ ವಿಕಾಸ ಸಂಯೋಜಕರು) ಶ್ರೀರಾಮ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಶ್ರೀರಾಮ ವಿದ್ಯಾ ಕೇಂದ್ರದ ಟ್ರಸ್ಟಿ ಇವರ ಮಾತಿನಲ್ಲಿ “ಯಕ್ಷಗಾನವು ಶಿಕ್ಷಣದ ಜೊತೆ ಇರುವಂತಹ ಒಂದು ಕಲೆ ಈ ಕಲೆಯನ್ನು ಮತ್ತು ಸಂಸ್ಕೃತಿಯನ್ನು ಉಳಿಸುವುದು ನಮ್ಮ ಕರ್ತವ್ಯ ಹಾಗೂ ವಿಶ್ವಗುರು ಭಾರತ ನಿರ್ಮಾಣದಲ್ಲಿ ಯಕ್ಷಗಾನದ ಕಲೆಯ ಪಾತ್ರವು ಮುಖ್ಯವಾಗಬೇಕೆಂದು” ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.)ಮಂಗಳೂರು ಇದರ ವಿಟ್ಲ ಘಟಕದ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಇವರ ಮಾತುಗಳಲ್ಲಿ “ಯಕ್ಷಗಾನವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಯಕ್ಷಗಾನದ ಜೊತೆ ಸಮಾಜಕ್ಕೆ ನಮ್ಮಿಂದಾಗುವ ಸೇವೆ ಮಾಡಬೇಕೆಂದು” ಶುಭ ಹಾರೈಸಿದರು.

ಶ್ರೀಯುತ ಪಿ ಪೂವಪ್ಪ ಶೆಟ್ಟಿ ನಿವೃತ್ತ ಉಪನ್ಯಾಸಕರು ಪ್ರಧಾನ ಕಾರ್ಯದರ್ಶಿಗಳು ವಿಟ್ಲ ಘಟಕ ಇವರ ಹಿತ ನುಡಿಗಳಲ್ಲಿ ಕಥೆಗಳನ್ನು ಮುಂದಿನ ಪೀಳಿಗೆಗೆ ತಿಳಿಸಲು ಇರುವ ಸುಲಭ ಸಾಧನ ಯಕ್ಷಗಾನ, ಅಳಿವಿನಂಚಿನಲ್ಲಿರುವ ಕಲೆಯನ್ನು ಪಟ್ಲ ಪೌಂಡೇಶನ್ ಸಂಸ್ಥಾಪಕರಾದ ಸತೀಶ್ ಪಟ್ಲರವರು ಕಲೆಯ ಅಭಿಮಾನ ಹಾಗೂ ಛಲದಿಂದ ಯಕ್ಷಗಾನಕ್ಕೆ ಹೇಗೆ ಶ್ರಮಿಸಿದ್ದಾರೆ ಎಂಬುವುದರ ಬಗ್ಗೆ ತಿಳಿಸಿದರು. ಶ್ರೀಯುತ ಅಮ್ಮುಂಜೆ ಮೋಹನ್ ಕುಮಾರ್ ಯಕ್ಷಗಾನ ಶಿಕ್ಷಕರು ಇವರು ವಿದ್ಯಾರ್ಥಿಗಳಿಗೆ ಯಕ್ಷಗಾನದ ಮೊದಲ ಹೆಜ್ಜೆಯ ತರಬೇತಿಯನ್ನು ಕೊಟ್ಟರು. ವೇದಿಕೆಯಲ್ಲಿ ಪ್ರಧಾನ ಸಂಚಾಲಕರು ವಿಟ್ಲ ಘಟಕ ಶ್ರೀ ಅರವಿಂದ ರೈ ಮೂರ್ಜೆಬೆಟ್ಟು ಹಾಗೂ ಶ್ರೀರಾಮ ಪ್ರೌಢಶಾಲೆಯ ಮುಖ್ಯ ಗುರುಗಳಾದ ಗೋಪಾಲ್ ಶ್ರೀಮಾನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಜಿನ್ನಪ್ಪ ಶ್ರೀಮಾನ್ ಸ್ವಾಗತ, ಸಹ ಶಿಕ್ಷಕಿ ಮೇಘಶ್ರೀ ವಂದಿಸಿ ,ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.