Saturday, January 25, 2025
ಉಡುಪಿಸುದ್ದಿ

ಉದ್ಘಾಟನೆಯ ಮುನ್ನವೇ ಕುಸಿತ ಕಂಡ 60ಲಕ್ಷ ವೆಚ್ಚದಲ್ಲಿ ಪರ್ಕಳದ ದುರ್ಗಾ ನಗರದಲ್ಲಿ ನೂತನವಾಗಿ ರಚಿಸಲಾದ ಕೆರೆ– ಕಹಳೆ ನ್ಯೂಸ್

ಉಡುಪಿ : ನಗರಸಭೆ ಮತ್ತು ಉಡುಪಿ ಕೆರೆ ಅಭಿವೃದ್ಧಿಯ ಪ್ರಾಧಿಕಾರದಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆಯ ಅನುದಾನದಲ್ಲಿ ಸುಮಾರು ಅಂದಾಜು 60 ಲಕ್ಷ ವೆಚ್ಚದಲ್ಲಿ ಪರ್ಕಳದ ದುರ್ಗಾ ನಗರದಲ್ಲಿ ನೂತನವಾಗಿ ರಚಿಸಲಾದ ಕೆರೆ ಉದ್ಘಾಟನೆಯಾಗುವ ಮುನ್ನವೇ ಕುಸಿದಿದೆ.

ಈ ಕೆರೆ ಮಣ್ಣುಅಗೆಯುವಾಗ ತ್ರಿಶೂಲ ಇರುವ ಕಲ್ಲು ಹಾಗೂ ಅಭಿಶೇಕ ನಡೆದ ತೀರ್ಥ ಹರಿದು ಹೋಗುವ ಕಲ್ಲಿನ ಕೊಂಡಿಸಿಕ್ಕಿದ್ದು, ನಾಥ ಪಂಥಕ್ಕೆ ಸೇರಿದ ವಸ್ತುಗಳಾಗಿವೆ ಎಂಬುದು ತಜ್ಞರ ಮಾತು.ಈ ವಸ್ತುಗಳು 12ನೇ ಶತಮಾನಕ್ಕೆ ಸೇರಿರುತ್ತದೆ ಎಂದು ತಿಳಿದುಬಂದಿದೆ. ಇದೀಗ ಒಂದು ತಿಂಗಳ ಹಿಂದೆ ಈಕೆರೆ ಪೂರ್ಣಗೊಂಡಿದೆ..

ಜಾಹೀರಾತು
ಜಾಹೀರಾತು
ಜಾಹೀರಾತು

ಉದ್ಘಾಟನೆಯ ಯಾಗುವ ಮೊದಲೇ ಕೆರೆ ಕುಸಿದಿರುವುದು ಕಾಮಗಾರಿಯ ಗುಣಮಟ್ಟದ ಕೊರತೆಯೇ ಎಂದು ಪರೀಕ್ಷಿಸಬೇಕಾಗಿದೆ.  ಪರ್ಕಳದ ಸುತ್ತಮುತ್ತ ಬೇರೆ ಬೇರೆ ಇಲಾಖೆ ಯ ಅನುದಾನದಿಂದ ಕೆರೆಯ ಅಭಿವೃದ್ಧಿ ಆಗಿದೆ . ಆದರೆ ಮತ್ತೆ ಮತ್ತೆ ಕುಸಿಯುತ್ತಿರುವುದು ಹೇಗೆ ಎಂಬುದೇ ಯಕ್ಷ ಪ್ರಶ್ನೆ

ಜಾಹೀರಾತು
ಜಾಹೀರಾತು
ಜಾಹೀರಾತು

ನಗರಸಭೆ ಮತ್ತು ಉಡುಪಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಎರಡು ಕೆರೆ ಅಭಿವೃದ್ಧಿ ಆಗುತ್ತದೆ.. ಉದ್ಘಾಟನೆ ಮುನ್ನ ಈಕೆರೆಯು ಕುಸಿತ ಕಂಡಿದೆ..

ಈ ಹಿಂದೆಯೂ ಕೂಡ ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನದ ಎದುರುಗಡೆ ಎರಡು ಕೋಟಿ ರುಪಾಯಿ ವೆಚ್ಚದಲ್ಲಿ ನೀರಾವರಿ ಇಲಾಖೆಯಿಂದ ನಿರ್ಮಾಣವಾದ ಕೆರೆ ಕೂಡ ಸತತ ನಾಲ್ಕು ಬಾರಿ ಕುಸಿತ ಕಂಡಿದೆ..

ಅನುದಾನ ಮೀಸಲಿಟ್ಟ, ಜನಪ್ರತಿನಿಧಿಗಳು ಹಾಗೂ ಇಲಾಖಾ ಅಧಿಕಾರಿಗಳ ಈ ಕೆಲಸಕಾರ್ಯದ ಕಾರ್ಯವೈಕರಿಯನ್ನು ಜನ ಪ್ರಶ್ನಿಸುವಂತಾಗಿದೆ.