Recent Posts

Monday, November 25, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ರಾಜ್ಯಾದ್ಯಂತ ದಶಲಕ್ಷ ಗಿಡ ನಾಟಿ ಕಾರ್ಯಕ್ರಮದ ಅಭಿಯಾನದ ಪೂರ್ವ ಸಿದ್ಧತಾ ಗಿಡ ನಾಟಿ ಕಾರ್ಯಕ್ರಮ-ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕರ್ನಾಟಕ ರಾಜ್ಯದ್ಯಾಂತ ನಡೆಸುವ ದಶಲಕ್ಷ ಗಿಡ ನಾಟಿ ಕಾರ್ಯಕ್ರಮದ ಪೂರ್ವಸಿದ್ಧತೆಯಾಗಿ ಇಂದು ಉಡುಪಿ ಪ್ರಾದೇಶಿಕ ವಿಭಾಗದ ಬಂಟ್ವಾಳ ತಾಲೂಕಿನ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಿಂದ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ ರವರ ಮಾರ್ಗದರ್ಶನದಲ್ಲಿ ಗಿಡ ನಾಟಿ ಮಾಡಲಾಯಿತು.

ಈ ಸಂದರ್ಭದಲ್ಲಿ ಜುಲೈ 2 ಕರ್ನಾಟಕ ಸರಕಾರದ ಮಾನ್ಯ ಅರಣ್ಯಮಂತ್ರಿ, ಹಾಗೂ ವಿಶೇಷ ಗಣ್ಯರ ಆಗಮನದ ಮೂಲಕ ನಡೆಯಲಿರುವ ಕಾರ್ಯಕ್ರಮದ ನಿಮಿತ್ತ ಚಪ್ಪರ ಮುಹೂರ್ತ ವನ್ನು ಕಾರಿಂಜೆಶ್ವರ ದೇವಸ್ಥಾನದ ಅರ್ಚಕರು ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಹಾಬ ಕುಲಾಲ್,ಯೋಜನೆಯ ಕೃಷಿ ನಿರ್ದೇಶಕರಾದ ಮನೋಜ್ ಮಿನೇಜಸ್, ಬಂಟ್ವಾಳ ತಾಲೂಕಿನ ವಲಯ ಅರಣ್ಯ ಅಧಿಕಾರಿ ಪ್ರಫುಲ್ ಶೆಟ್ಟಿ ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ, ಕಾರಿಂಜೆಶ್ವರ ದೇವಸ್ಥಾನದ ಮಾಜಿ ಅಧ್ಯಕ್ಷರಾದ ಜಿನರಾಜ್ ಆರಿಗ, ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್,ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಮಾಣಿಕ್ಯ ರಾಜ ಜೈನ್, ರೈತ ಮೋರ್ಚ ಅಧ್ಯಕ್ಷರಾದ ವಿಜಯ ರೈ,ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಚಿದಾನಂದ ರೈ, ಕಾವಳಪಡೂರು ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಶರ್ಮ, ಶೌರ್ಯ ವಿಪತ್ತು ಯೋಜನಾಧಿಕಾರಿಗಳಾದ ಜೈವಂತ್ ಪಟಗಾರ್ , ಕಿಶೋರ್, ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಅರಣ್ಯ ಅಧಿಕಾರಿ ಅನಿಲ್,, ಫಾರೆಸ್ಟ್ ಗಾರ್ಡ್ ಲಕ್ಷ್ಮೀನಾರಾಯಣ, ಕಾಳಪಡುಡುರು ಪಂಚಾಯಿತಿ ಪಿಡಿಒ ರಚನ್ ಕುಮಾರ್, ಕೃಷಿ ಅಧಿಕಾರಿ ಜಯರಾಮ್, ಜನಜಾಗೃತಿ ಮೇಲ್ವಿಚಾರಕ ನಿತೇಶ್ , ಕೃಷಿ ಮ್ಯಾನೇಜರ್ ಉಮೇಶ್, ವಗ್ಗ ವಲಯ ಅಧ್ಯಕ್ಷರಾದ ಉಮೇಶ್, ಜನಜಾಗೃತಿ ಸದಸ್ಯರಾದ ಶೇಖರ್, ಶೌರ್ಯ ಘಟಕದ ಮಾಸ್ಟರ್ ಪ್ರಕಾಶ್ ಪೂಜಾರಿ, ಕ್ಯಾಪ್ಟನ್ ನಿತೇಶ್, ವಗ್ಗ ವಲಯದ ಮೇಲ್ವಿಚಾರಕಿ ಸವಿತಾ , ವಗ್ಗ ವಲಯದ ಸೇವ ಪ್ರತಿನಿಧಿಗಳು ಒಕ್ಕೂಟದ ಅಧ್ಯಕ್ಷರುಗಳು ನಿಕಟಪೂರ್ವ ಅಧ್ಯಕ್ಷರುಗಳು ನವ ಜೀವನ ಸಮಿತಿಯ ಸದಸ್ಯರು ಪುಂಜಲಕಟ್ಟೆ,ವಾಮದಪದವು,ಹಾಡಬೆಟ್ಟು, ಶೌರ್ಯ ಘಟಕದ ಸದಸ್ಯರು, ಒಕ್ಕೂಟಗಳ ಸದಸ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು