Recent Posts

Thursday, November 21, 2024
ಬೈಂದೂರುಸುದ್ದಿ

ಮಳೆಗಾಲದ ತುರ್ತು ಸ್ಪಂದನೆಗೆ ಎರಡು ತಂಡ ಸಿದ್ಧ :ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಮುಂದಾಳತ್ವದಲ್ಲಿ ಈ ತಂಡ ಕಾರ್ಯಾಚರಣೆ-ಕಹಳೆ ನ್ಯೂಸ್

ಬೈಂದೂರು: ಮಳೆಗಾಲದಲ್ಲಿ ಸಂಭವಿಸಬಹುದಾದ ವಿಪತ್ತು ನಿರ್ವಹಣೆಗೆ ಜಿಲ್ಲಾ ವಿಪತ್ತು‌‌ ನಿರ್ವಹಣ ಪ್ರಾಧಿಕಾರದಿಂದ ಒಂದು ರೀತಿಯ ಸಿದ್ಧತೆ ಮಾಡಿಕೊಂಡಿದ್ದರೆ, ಬೈಂದೂರು ಕ್ಷೇತ್ರದಲ್ಲಿ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ವಿಶೇಷ ಮೇಲುಸ್ತುವಾರಿಯಲ್ಲಿ ಸಾರ್ವಜನಿಕ ತುರ್ತು ವಿಪತ್ತು ನಿರ್ವಹಣೆಗೆ ಎರಡು ತಂಡ ಗಳನ್ನು ರಚನೆ ಮಾಡಲಾಗಿದೆ.

ಕ್ಷೇತ್ರದ ಕರಾವಳಿ ಭಾಗಕ್ಕೆ ಒಂದಕ್ಕೆ ತಂಡ ಹಾಗೂ ಮಲೆನಾಡು ಭಾಗಕ್ಕೆ ಒಂದು ತಂಡ ರಚನೆ ಮಾಡಲಾಗಿದೆ. ಪ್ರತಿ ತಂಡದಲ್ಲೂ ಹತ್ತು ಸದಸ್ಯರಿದ್ದು, ಮಳೆಗಾಲದಲ್ಲಿ ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಮಾಹಿತಿ ಬಂದ ತಕ್ಷಣವೇ ತಂಡ ಸದಸ್ಯರು ಸ್ಥಳಕ್ಕೆ ಧಾವಿಸುವುದು ಅಥವಾ ಸ್ಥಳೀಯ ಕಾರ್ಯಕರ್ತರ ಮೂಲಕ ತುರ್ತು ಸ್ಪಂದನೆ ಇತ್ಯಾದಿ ನಡೆಸಲಿದ್ದಾರೆ.‌ ಇದೊಂದು ಶಾಸಕರ ನೇತೃತ್ವದ ಖಾಸಗಿ ವ್ಯವಸ್ಥೆಯಾಗಿದ್ದು, ಬಿಜೆಪಿ ಕಾರ್ಯಕರ್ತರು, ಪ್ರಮುಖರು, ಪಂಚಾಯತ್ ಸದಸ್ಯರು ಸೇರಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತುರ್ತು ಸ್ಪಂದನೆ ಅತಿಮುಖ್ಯ
ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತ ಅಥವಾ ಹಾನಿಗೆ ತುರ್ತು ಸ್ಪಂದನೆ ಅತಿ‌ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗಕ್ಕೆ ನಮ್ಮ ಕಾರ್ಯಕರ್ತರ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ. ಈ ತಂಡದ ಸದಸ್ಯರು ಸಮನ್ವಯದಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಲೆನಾಡು ತಂಡ
1. ಸಂಚಾಲಕ : ರಾಘವೇಂದ್ರ ನೆಂಪು :(7892643784)
2. ಸಹ ಸಂಚಾಲಕ : ಲಕ್ಷಣ ಮುದೂರು :(9448142785)
3. ಹರೀಶ ಸೆಳಕೊಡು
4. ಗುರುಪ್ರಸಾದ ಕೊಲ್ಲೂರು
5. ಸಿದ್ದೇಶ ಏಳಜಿತ್
6. ಪ್ರಶಾಂತ ಆಲೂರು
7. ಪ್ರಜ್ವಲ ಕಾಲ್ತೋಡು
8. ಹರ್ಷ ಸಿದ್ದಾಪುರ
9. ಗಣೇಶ ಪೂಜಾರಿ
10. ಚಂದ್ರ ಜೋಗಿ

ಕರಾವಳಿ ತಂಡ
1. ಸಂಚಾಲಕ : ಗೋಪಾಲ ವಸ್ರೆ : (9535959138)
2. ಸಹ ಸಂಚಾಲಕ : ಲಕ್ಕ್ಷ್ಮಿರಾಜ ತಲ್ಲೂರು : (9480071959)
3. ಸುಕೇಶ್ ಪೂಜಾರಿ
4. ಅಶೋಕ ದೇವಾಡಿಗ
5. ಕೃಷ್ಣ ಕೊಡೇರಿ
6. ಜಗದಿಶ ಆಲಂದೂರು
7. ಅವಿನಾಶ ಶಿರೂರು
8. ಪ್ರದೀಪ ಉಪ್ಪುಂದ
9. ನಾಗರಾಜ ಪಟೆಗಾರ
10. ರಾಮದಾಸ ಖಾರ್ವಿ