Saturday, November 16, 2024
ದಕ್ಷಿಣ ಕನ್ನಡಮಂಗಳೂರುಸುದ್ದಿ

ರಿಕ್ಷಾ ತೊಳೆಯುತಿದ್ದ ವೇಳೆ ವಿದ್ಯುತ್ ತಂತಿ ಕಡಿದು ಬಿದ್ದು ಚಾಲಕ ಸಹಿತ ಇಬ್ಬರು ದುರ್ಮರಣ – ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅವ್ಯಾಹತವಾಗಿ ಗಾಳಿ ಮಳೆ ಸುರಿಯುತ್ತಿದ್ದು ಅಲ್ಲ್ಲಲ್ಲಿ ಅನಾಹುತಕ್ಕೆ ಕಾರಣವಾಗಿದೆ. ಮಂಗಳೂರು ನಗರದ ರೋಸಾರಿಯೊ ಶಾಲೆಯ ಬಳಿ ಇಬ್ಬರು ರಿಕ್ಷಾ ಚಾಲಕರು ವಿದ್ಯುತ್ ತಂತಿ ತಗಲಿ ಮೃತಪಟ್ಟ ಘಟನೆ ಗುರುವಾರ ನಸುಕಿನ ಜಾವ ಸಂಭವಿಸಿದೆ.

ರಿಕ್ಷಾ ತೊಳೆಯುತಿದ್ದ ವೇಳೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದು ಮೃತರನ್ನು ಹಾಸನ ಮೂಲದ ರಾಜು ಮತ್ತು ಕಡಬ ವ್ಯಾಪ್ತಿಯ ರಾಮಕುಂಜದ ದೇವರಾಜ್ ಎಂದು ತಿಳಿದು ಬಂದಿದೆ.ಇವರು ರೊಸಾರಿಯೋ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಇಂದು ಬೆಳಿಗ್ಗೆ ರಿಕ್ಷಾ ತೊಳೆಯುವ ಸಂದರ್ಭ ಸರ್ವಿಸ್ ವೈರ್ ತುಂಡಾಗಿ ಒಬ್ಬರ ಮೇಲೆ ಬಿದ್ದಿದೆ ಈ ವೇಳೆ ವಿದ್ಯುತ್ ಶಾಕ್ ಗೆ ಒಳಗಾದ ವ್ಯಕ್ತಿಯನ್ನು ರಕ್ಷಿಸಲು ತೆರಳಿದ ಇನ್ನೊಬ್ಬರು ಕೂಡ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ಮೃತದೇಹಗಳು ವೆನ್ಲಾಕ್ ಆಸ್ಫತ್ರೆಯ ಶವಗಾರದಲ್ಲಿರುವುದಾಗಿ ಪೆÇಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು