Sunday, November 24, 2024
ಕಾಪುಸುದ್ದಿ

ಕಾಪು : “ನಮ್ ಬೋಟ್ ರೆಡಿ ಇದೆ, ಭಯ ಬೇಡ, ನಿಮ್ಮೊಂದಿಗೆ ನಾವಿದ್ದೇವೆ”: ತಹಶಿಲ್ದಾರ್ ಪ್ರತಿಭಾ ಆರ್– ಕಹಳೆ ನ್ಯೂಸ್

ಕಾಪು ತಾಲ್ಲೂಕಿನಲ್ಲಿ ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತೆ ಮತ್ತು ರಕ್ಷಣಾ ಕಾರ್ಯಗಳ ಸಿದ್ದತೆಯೂ ಚುರುಕಾಗಿದೆ. ಪಡುಬಿದ್ರೆಯ ಸರ್ಕಾರಿ ಶಾಲೆಯಲ್ಲಿ ಬೋಟ್, ಲೈಫ್ ಜಾಕೆಟ್, ಗಾಳಿ ಟ್ಯೂಬ್ ಇತ್ಯಾದಿ ಪರಿಕರಗಳನ್ನು ಸಿದ್ದವಾಗಿಟ್ಟುಕೊಳ್ಳಲಾಗಿದೆ ಎಂದು ತಹಶಿಲ್ದಾರ್ ಡಾ. ಪ್ರತಿಭಾ ಆರ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗೃಹರಕ್ಷಕ ದಳದ ಸಿಬ್ಬಂದಿಗಳಾದ ಕುಮಾರ್ ಕೋಟ್ಯಾನ್, ಮಹೇಶ್, ನವೀನ್ ಕುಮಾರ್, ಸುಕೇಶ್, ಕೇಶವ್ ಸುಬ್ರಹ್ಮಣ್ಯ ರವರು 24/7 ಕರ್ತವ್ಯದಲ್ಲಿ ಇರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನೆರೆ ಉಂಟಾದ ಸಂದರ್ಭದಲ್ಲಿ ತಹಶಿಲ್ದಾರ್ ಕಚೇರಿಯ ಕಂಟ್ರೋಲ್ ರೂಮ್ ಗೆ ಕಾಲ್ (0820 255 1444 ) ಮಾಡಬಹುದು. ತಕ್ಷಣವೇ ನಮ್ಮ ಗೃಹರಕ್ಷಕ ದಳದ ಸಿಬ್ಬಂದಿ ಬೋಟ್ ನೊಂದಿಗೆ ಆಗಮಿಸಿ ನೆರೆಗೊಳಗಾದವರನ್ನು ರಕ್ಷಿಸಿ ಕಾಳಜಿ ಕೇಂದ್ರಗಳಿಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ ಎಂದು ತಹಶಿಲ್ದಾರ್ ಪ್ರತಿಭಾ ಆರ್ ತಿಳಿಸಿದ್ದಾರೆ. ಪ್ರತಿ ಗ್ರಾಮದಲ್ಲಿ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದ್ದು ವ್ಯವಸ್ಥಿತ ರೀತಿಯಲ್ಲಿ ಸಿದ್ದಗೊಳಿಸಿಕೊಳ್ಳಲಾಗಿದೆ.

ಈಗಾಗಲೇ ಮಾನ್ಯ ತಹಶಿಲ್ದಾರ್ ಪ್ರತಿಭಾ ರವರು ನೆರೆ ಉಂಟಾಗುವ ಸಂಭವ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುತ್ತಾರೆ. ಅಂತಹ ಪ್ರದೇಶಗಳಿಂದ ಜನರನ್ನು ಶಿಫ್ಟ್ ಮಾಡಲು ಮನ ಒಲಿಸುವ ಪ್ರಯತ್ನ ಮಾಡಲಾಗಿದೆ. ಆದಾಗಿಯೂ ನಮ್ಮ ತಂಡ 24/7 ಸಿದ್ದವಾಗಿದೆ ಎಂದ ತಹಶಿಲ್ದಾರ್ ಪ್ರತಿಭಾ ಆರ್ ತಿಳಿಸಿದ್ದಾರೆ.