Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ:ಮಳೆಗೆ ವಿಪತ್ತು ಸಂಭವಿಸಬಹುದಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಬೇಟಿ-ಕಹಳೆ ನ್ಯೂಸ್

ಬಂಟ್ವಾಳ: ಮಳೆಗೆ ವಿಪತ್ತು ಸಂಭವಿಸಬಹುದಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿ, ಅವಶ್ಯಕತೆ ಇರುವ ಕಡೆಗಳಲ್ಲಿ ಸೂಕ್ತವಾದ ಕ್ರಮ ಕೈಗೊಳ್ಳುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸ್ಥಳದಲ್ಲಿ ನಿರ್ದೇಶನ ನೀಡಿದರು.

ಮಳೆಗೆ ಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಮಾಡಿಸುವುದು, ನೆರೆ, ಗುಡ್ಡ ಜರಿತ ಸಹಿತ ಇನ್ನಿತರ ಪ್ರಮುಖ ಸಮಸ್ಯೆಗಳನ್ನು ಟಾಸ್ಕ್ ಪೋರ್ಸ್ ಮೂಲಕ ತಂಡವಾಗಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಯಾವ ರೀತಿ ಅಧಿಕಾರಿಗಳು ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆಯಲು ಮತ್ತು ಮಳೆಯಿಂದ ಹಾನಿಯಾಗುವ ಪ್ರಮುಖ ಸ್ಥಳಗಳಿಗೆ ಬೇಟಿ ನೀಡುವುದಾಗಿ ಅವರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಮುಖವಾಗಿ ಗೂಡಿನಬಳಿ ಎಂಬಲ್ಲಿ ರಸ್ತೆ ಕುಸಿತ ಕಂಡಿರುವ ಜಾಗದಲ್ಲಿ ತಡೆಗೋಡೆ ನಿರ್ಮಾಣವಾಗುತ್ತಿದ್ದು ಅದರ ಕಾಮಗಾರಿ ಮತ್ತು ಇಲ್ಲಿನ ಸಮಸ್ಯೆ ಯ ಬಗ್ಗೆ ಅವಲೋಕನ ನಡೆಸಿದ್ದೇನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗುಡ್ಡ ದಿಂದ ನೀರು ಹರಿದುಹೋಗುವ ವ್ಯವಸ್ಥೆ ಸರಿಪಡಿಸಬೇಕಾಗಿದೆ. ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಜಾಸ್ತಿಯಾದ ಸಮಯದಲ್ಲಿ ನದಿಯ ದಡದಲ್ಲಿರುವ ಮನೆಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಬಗ್ಗೆಯೂ ತಿಳಿಸಿದ್ದೇನೆ.

ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಎಂಬಲ್ಲಿ ಪುರಸಭಾ ಇಲಾಖೆಗೆ ಸಂಬAಧಿಸಿದ ಕುಡಿಯುವ ನೀರಿನ ಟ್ಯಾಂಕ್ ಅಪಾಯಕಾರಿ ಸ್ಥಿತಿಯಲ್ಲಿದ್ದು, ಈ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಣೆಮಂಗಳೂರಿನಲ್ಲಿ ಖಾಸಗಿ ಜಾಗದವರು ಗುಡ್ಡ ಅಗೆತದಿಂದ ಪುರಸಭೆಯ ನೀರಿನ ಟ್ಯಾಂಕ್ ಅಪಾಯದಲ್ಲಿದೆ, ಮುಂದೆ ಮತ್ತೆ ಗುಡ್ಡ ಅಗೆಯದಂತೆ ಕಾನೂನು ಪ್ರಕಾರ ತಡೆಯಾಜ್ಞೆ ತರುವುದಕ್ಕೆ ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ ಎಂದರು.

ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್‌ಕುಮಾರ್, ಪ್ರೊಬೆಷನರಿ ಐಎಎಸ್ ಅಧಿಕಾರಿ ಶುಶಾಂತ್, ಮಂಗಳೂರು ಎಸಿ ಹರ್ಷವರ್ಧನ ಪಿ.ಜೆ., ತಹಶೀಲ್ದಾರ್ ಅರ್ಚನಾ ಭಟ್, ಬೂಡಾ ಅಧ್ಯಕ್ಷ ಬೇಬಿ ಕುಂದರ್, ಪುರಸಭಾ ಸದಸ್ಯೆ ಝೀನತ್ ಪಿರೋಜ್, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟೋ, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೋ, ಕಂದಾಯ ನಿರೀಕ್ಷಕರಾದ ಜನಾರ್ದನ್ ಜೆ, ವಿಜಯ್ ಆರ್, ಪುರಸಭಾ ಸಮುದಾಯ ಸಂಘಟಕಿ ಉಮಾವತಿ ಮೊದಲಾದವರು ಉಪಸ್ಥಿತರಿದ್ದರು.