Saturday, November 23, 2024
ರಾಜ್ಯಸುದ್ದಿ

ಇನ್ಮುಂದೆ ವೈಟಿಂಗ್ ಲಿಸ್ಟ್ನಲ್ಲಿ ರೈಲಿನಲ್ಲಿ ಪ್ರಯಾಣಕ್ಕೆ ಅವಕಾಶವಿಲ್ಲ –ಕಹಳೆ ನ್ಯೂಸ್

ಜೂನ್ ತಿಂಗಳಿ ನಿಂದ ಈ ಕಾರ್ಯಾಚರಣೆ ಜಾರಿಗೆ ಬಂದಿದೆ. ಅದರಂತೆ ಮೊದಲ ದಿನವೇ ದೇಶದಾದ್ಯಂತದ 31 ರೈಲುಗಳಿಂದ 1,700 ಪ್ರಯಾಣಿಕರನ್ನು ಇಳಿಸಲಾಗಿದೆ ಎಂದು ಮ.ರೈಲ್ವೇ ಮೂಲಗಳು ತಿಳಿಸಿವೆ.
ಮುಂಬಯಿ ಸೆಂಟ್ರಲ್ ಮತ್ತು ಸೂರತ್ ನಿಲ್ದಾಣಗಳ ನಡುವೆ ಜೂ. 17 ರಂದು 99 ರೈಲುಗಳಿಂದ 246 ಪ್ರಯಾಣಿಕರನ್ನು ಟಿಕೆಟ್ ರಹಿತರೆಂದು ವೈಟಿಂಗ್ ಲಿಸ್ಟ್ನಲ್ಲಿ ಪ್ರಯಾಣಿಸುತ್ತಿದ್ದವರನ್ನು ಇಳಿಸಲಾಗಿದೆ. ಜೂ. 18 ರಂದು 105 ರೈಲುಗಳಿಂದ 292 ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ ಎಂದು ಇದೇವೇಳೆ ಪ.ರೈಲ್ವೇಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿನೀತ್ ಅಭಿಷೇಕ್ ತಿಳಿಸಿದ್ದಾರೆ.

ಜೂ.19 ಮತ್ತು 20 ರಂದು ಕ್ರಮವಾಗಿ 99 ಮತ್ತು 82 ರೈಲುಗಳಿಂದ 412 ಮತ್ತು 250 ಪ್ರಯಾಣಿಕರನ್ನು ಪ. ರೈಲ್ವೇಯು ಕೆಳಗಿಳಿಸಿದೆ ಎಂದೂ ಅವರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಭಾರತೀಯ ರೈಲ್ವೆಯು ಈ ಕಾರ್ಯಾಚರಣೆಯಿಂದ ಖಾಯಂ ಟಿಕೆಟ್ ಇಲ್ಲದೆ ವೈಟಿಂಗ್ ಲಿಸ್ಟ್ನಲ್ಲಿ ಹೆಸರಿದೆ ಎಂದು ಪ್ರಯಾಣಿಸಲು ಮುಂದಾದರೆ ಅರ್ಧ ದಾರಿಯಲ್ಲಿ ಇಳಿಯಬೇಕಾದ ಸಂಕಷ್ಟವನ್ನು ಪ್ರಯಾಣಿಕರು ಎದುರಿಸಲಿ ದ್ದಾರೆ. ಈ ಬಗ್ಗೆ ಕೆಲವು ರೈಲುಗಳಲ್ಲಿ ಪ್ರಯಾಣಿಕರು ಮತ್ತು ಟಿಸಿಗಳ ನಡುವೆ ಮಾತಿಗೆ ಮಾತು ಬೆಳೆದ ಘಟನೆಗಳು ನಡೆದಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು