ಮಾನವೀಯತೆ ಸ್ನೇಹ ಪರಾವ ವ್ಯಕ್ತಿತ್ವವನ್ನ ಅಳವಡಿಸಿಕೊಂಡಾಗ ಪರಿಪೂರ್ಣ ಜೀವನ ಸಾಧ್ಯ ; ಡಾ. ಭರತ್ ಶೆಟ್ಟಿ ವೈ –ಕಹಳೆ ನ್ಯೂಸ್
ಮಂಗಳೂರು : ಸಮಾಜದಲ್ಲಿ ಇತರರೊಂದಿಗೆ ಬೆರೆತು ಬಾಳುವುದರ ಜೊತೆಗೆ ಮಾನವೀಯತೆ ಸ್ನೇಹ ಪರಾವ ವ್ಯಕ್ತಿತ್ವವನ್ನ ಅಳವಡಿಸಿಕೊಂಡಾಗ ಪರಿಪೂರ್ಣ ಜೀವನ ಸಾಧ್ಯ ಎಂದು ಡಾ. ಭರತ್ ಶೆಟ್ಟಿ ವೈ ಹೇಳಿದರು.
ಅವರು ಶಕ್ತಿನಗರದಲ್ಲಿರುವ ಶಕ್ತಿ ವಸತಿ ಪದವಿ ಪೂರ್ವ ಶಕ್ತಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.
ಸಮಾಜದಲ್ಲಿ ಯಾರು ಒಬ್ಬಂಟಿಯಾಗಿ ಜೀವನ ನಡೆಸುತ್ತೇನೆ ಎಂದರೆ ಅದು ಸಾಧ್ಯವಾಗದು. ವೈದ್ಯರು ನ್ಯಾಯವಾದಿಗಳು ವ್ಯಾಪಾರಿಗಳು ಹೀಗೆ ಎಲ್ಲಾ ವರ್ಗದ ಜನರು ಏಕಾಂಗಿಯಾಗಿ ವಾಸಿಸುತ್ತೇನೆ ಎಂದರೆ ಸಾಧ್ಯವಾಗದು.ಸಮಾಜದ ನಡುವೆ ನಾವು ಬದುಕಿ, ಸಾಧಿಸಿ ತೋರಿಸುವ ಛಲವಿರಬೇಕು ಅಭಿಪ್ರಾಯ ಪಟ್ಟರು.
ಭಾರತದ ಸಾಂಸ್ಕೃತಿಕ ವಿಚಾರವನ್ನು ನಾವು ಗಣನೆಗೆ ತೆಗೆದುಕೊಂಡಾಗ ಭಕ್ತ ಪ್ರಹ್ಲಾದ ಶ್ರೇಷ್ಠ ವಿದ್ಯಾರ್ಥಿ ನಾಯಕನಾಗಿ, ಶ್ರೀಕೃಷ್ಣ ಪರಮಾತ್ಮನು ಅತ್ಯುತ್ತಮ ಕೌನ್ಸಿಲರ್ ಆಗಿ ನಾವು ಕಾಣಬಹುದು.ಅವರ ಶ್ರೇಷ್ಠತೆಯನ್ನು ಪೌರಾಣಿಕವಾಗಿ ಮಾತ್ರ ಕಂಡಿದ್ದೇವೆ. ಇಂತಹ ಸಾವಿರಾರು ಘಟನೆಗಳು ನಮಗೆ ಕಾಣಲು ಸಿಗುತ್ತದೆ.
ಪೋಷಕರಿಗೆ ತಮ್ಮ ಮಕ್ಕಳು ಉತ್ತಮ ಪ್ರಜೆಯಾಗಿ ಸಾಧನೆಗೈವ ಮೂಲಕ ಕೀರ್ತಿ ತರಬೇಕು ಎಂಬ ಮಹಾದಾಸೆ ಇರುತ್ತದೆ. ಯಾವುದೂ ಕೂಡ ಅಸಾಧ್ಯವಲ್ಲ ನಮ್ಮಲ್ಲಿ ಇಚ್ಛಾಶಕ್ತಿ ಕಠಿಣ ಪರಿಕ್ಷರಮವಿದ್ದಾಗ ನಾವು ಅಂದುಕೊAಡAತೆ ಗುರಿಯನ್ನು ತಲುಪಲು ಸಾಧ್ಯವಿದೆ.
ಶಕ್ತಿ ವಸತಿ ಕಾಲೇಜಿನಲ್ಲಿ ಉತ್ತಮ ಶಿಕ್ಷಣ, ಸಾಂಸ್ಕೃತಿಕ ಚಟುವಟಿಕೆ, ಜೀವನ ಮಾರ್ಗದರ್ಶನದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ಬಾಳಿನಲ್ಲಿ ಹೊಸ ಬೆಳಕು ಮೂಡಿಸುವ ಕೆಲಸವನ್ನು ನಡೆಸುತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು.
ಶಕ್ತಿ ಎಜುಕೇಶನ್ ಟ್ರಸ್ಟ್ ಇದರ ಅಧ್ಯಕ್ಷ ಕೆ ಸಿ ನಾಯಕ್, ಪ್ರಧಾನ ಸಲಹೆಗಾರ ರಮೇಶ್ ಕೆ .,ಶಕ್ತಿ ವಸತಿ ವಿದ್ಯಾ ಸಂಸ್ಥೆಯ ಪ್ರಾಂಶುಪಾಲೆ ಬಬಿತಾ ಸೂರಜ್, ವೆಂಕಟೇಶಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.