ಕಾಪು :ಇನ್ನಂಜೆ ಪಂಚಾಯತ್ ವ್ಯಾಪ್ತಿಯಲ್ಲಿ 500ಗಿಡಗಳನ್ನು ನೆಟ್ಟು, 500ಗಿಡಗಳನ್ನು ನಾಗರೀಕರಿಗೆ ವಿತರಣೆ ಮಾಡಿ ಗಿಡಗಳ ಸಂಭ್ರಮ ಆಚರಣೆ ಕಾರ್ಯಕ್ರಮವನ್ನು ಆಸರೆ ಹಿರಿಯ ನಾಗರೀಕರ ಮನೆಯಲ್ಲಿ ಆಚರಿಸಲಾಯಿತು-ಕಹಳೆ ನ್ಯೂಸ್
ಕಾಪು : ತಾನು ಆಹಾರ ತಿಂದರೆ ಗಿಡಗಳಿಗೂ ಆಹಾರ ನೀಡುವೆ, ತಾನು ಈ ವರೆಗೆ ಸೇವೆ ಮಾಡಿ ಸಾಕಿದ 200 ಹಿರಿಯ ನಾಗರೀಕರಂತೆ ತನ್ನ ಸುತ್ತ ಮುತ್ತ ನೆಟ್ಟಿರುವ 500 ಗಿಡಗಳನ್ನು ಸಾಕುವೆ ನೀವು ಯಾವಾಗ ಬೇಕಾದರೂ ಬಂದುಕೇಳಿ ನಾನು ಬದುಕಿದ್ದರೆ ಗಿಡಗಳು ಬದುಕಿರುತ್ತವೆ ಎಂದು 500 ಗಿಡಗಳನ್ನು ನೆಡುವ ಮತ್ತು ಸಾಕುವ ಜವಾಬ್ದಾರಿ ತೆಗೆದುಕೊಂಡ ಪಾಂಗಳ ಗುಡ್ಡೆ ಆಸರೆ ಎಂಬ ಹಿರಿಯ ನಾಗರೀಕರ ಮನೆಯ ಪೆನ್ ವೆಲ್ ಸೋನ್ಸ್ ರಬಗ್ಗೆ ಕಾಪು ತಹಸೀಲ್ದಾರ್ ಆಡಿ ಪ್ರತಿಭಾ ಆರ್, ಸಂತಸ ವ್ಯಕ್ತ ಪಡಿಸಿದರು.
ಕಾಪು ಕ್ಷೇತ್ರದ ಮಾನ್ಯ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಯವರ ಮುತುವರ್ಜಿ ಯಲ್ಲಿ ಮತ್ತು ಕಾಪು ತಹಸೀಲ್ದಾರ್ ಮಾರ್ಗದರ್ಶನ ದಲ್ಲಿ ಉಸಿರಿಗಾಗಿ ಹಸಿರು ಎಂಬ ಸಂಘಟನೆ ಮುಕಾಂತರ ಕಾಪುವಿನ ನಿರಂತರ ಹಸಿರು ಅಭಿಯಾನದ ಪ್ರಥಮ ಹಂತದ ಕಾರ್ಯಕ್ರಮವನ್ನು ಇನ್ನಂಜೆ ಪಂಚಾಯತ್ ವ್ಯಾಪ್ತಿಯಲ್ಲಿ 500ಗಿಡಗಳನ್ನು ನೆಟ್ಟು 500ಗಿಡಗಳನ್ನು ನಾಗರೀಕರಿಗೆ ವಿತರಣೆ ಮಾಡಿ ಗಿಡಗಳ ಸಂಭ್ರಮ ಆಚರಣೆ ಕಾರ್ಯಕ್ರಮವನ್ನು ಆಸರೆ ಹಿರಿಯ ನಾಗರೀಕರ ಮನೆಯಲ್ಲಿ ಆಚರಿಸಲಾಯಿತು.
ಹುಟ್ಟುವಾಗಲೇ 2 ಕೈ ಯಲ್ಲಿ 4 ಬೆರಳು ಗಳು 9 ನೇ ತರಗತಿ ಶಿಕ್ಷಣ ರಿಕ್ಷಾ ಕಾರು ವೃತ್ತಿ ಮಾಡುತ್ತಿದ್ದರು ತನ್ನ ಹೋರಾಟದ ಬದುಕಿನಲ್ಲಿ ಈ ವರೆಗೆ ಸುಮಾರು 200 ಹಿರಿಯ ನಾಗರೀಕರ ಸೇವೆ ಮಾಡುತ್ತಿರುವ ಮತ್ತು ಇವತ್ತು 500 ಗಿಡಗಳನ್ನು ಸಾಕುವ ಜವಾಬ್ದಾರಿ ತೆಗೆದು ಕೊಂಡಿರುವ ಪೆನ್ ವೆಲ್ ಸೋನ್ಸ್ ಸಮಾಜ ಕ್ಕೆ ಮಾದರಿ ಪ್ರತಿ ಗ್ರಾಮದಲ್ಲು ಇಂತವರು ಬೇಕು ಎಂದು ತಹಸೀಲ್ದಾರ್ ಅಭಿಪ್ರಾಯ ಪಟ್ಟರು.
ಕಾಪುವಿನಲ್ಲಿ ಹಸಿರು ಹೆಚ್ಚಿಸುವ ಜವಾಬ್ದಾರಿ ನಮ್ಮೆಲ್ಲರದು ಕಾಪುವನ್ನು ರಾಜ್ಯದಲ್ಲಿ ಮಾದರಿ ಮಾಡುವ, ಎಲ್ಲರು ಕೈ ಜೋಡಿಸಿ ಎಂದರು,
ಕಾರ್ಯಕ್ರಮದ ಅತಿಥಿಯಾಗಿ ಮಾತನಾಡಿದ ಗೀತಾಂಜಲಿ ಸುವರ್ಣ ಇವರು ಮಾತನಾಡುತ್ತ ಕಾಪುವಿನ ನಾಗರೀಕರಿಗಾಗಿ ರಾತ್ರಿ ಹಗಲು ಎನ್ನದೆ ಜನ ಸ್ಪಂದನೆ ಮಾಡುವ ತಹಸೀಲ್ದಾರ್ ದೊರೆತಿರುದು ನಮ್ಮೆಲ್ಲರ ಭಾಗ್ಯ ಎಂದರು ಕಾಪು ಹಿತಕ್ಕಾಗಿ ಸದಾ ಸೇವೆ ಮಾಡುತ್ತಿರುವ ಇವರ ಜೊತೆ ಕೈ ಜೋಡಿಸಿ, ಎಂದರು ಕಾಪುವಿನ ಹಸಿರು ನಿರಂತರ ಅಭಿಯಾನ ದಲ್ಲಿ ಸಕ್ರಿಯ ವಾಗಿ ಸೇವೆ ಮಾಡಿ ಅನೇಕ ರೀತಿ ಯಿಂದ ಸಹಾಯ ಮಾಡುತ್ತಿರುವ ಜಯ ಪೂಜಾರಿ ಯವರನ್ನು ಗುರುತಿಸಿ ಗೌರವಿಸಲಾಯಿತು.
ಆಣ ನಾನಾ ಸಾಹೇಬ್ ಧರ್ಮಧಿಕಾರಿ ಪ್ರತಿ ಸ್ಥಾನದ ಸದಸ್ಯರಾದ ಸಂತೋಷ್ ಎಂ ಶೆಟ್ಟಿಗಾರ್ ಕಾರ್ಯಕ್ರಮ ಆಯೋಜಿಸಿದರು ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ರಾಜೇಶ್ ಶೆಟ್ಟಿ, ಇನ್ನೆಂಜೆ ಗ್ರಾಮ ಪಂಚಾಯತ್ ಸದಸ್ಯರದ ಸೋನು ಪಾಂಗಳ, ಮತ್ತು ರಾಜೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಸಿ ಎಸ್ ಐ ಚರ್ಚ್ ಸಭಾ ಪಾಲಕರಾದ ಶಶಿಕಲಾ ಅವರು ಆಶೀರ್ವಾದ ನೀಡಿದರು ಸುಮಾರು 200 ಗಿಡ ಗಳನ್ನು ನಾಗರೀಕ ಕೊಡ ಲಾಯಿತು.