ವಿಶ್ವದ ಅತ್ಯಂತ ಎತ್ತರದ ಸರ್ದಾರ್ ಪಟೇಲರ ‘ಏಕತಾ ಪ್ರತಿಮೆ’ ಅನಾವರಣ ಮಾಡಿದ ಪ್ರಧಾನಿ ನರೇಂದ್ರ ಮೋದಿ – ಕಹಳೆ ನ್ಯೂಸ್
ಅಹಮದಬಾದ್,ಅ 31 : ಗುಜರಾತ್ ನ ಕೆವಾಡಿಯಾ ಗ್ರಾಮದ ಬಳಿಯ ನರ್ಮದಾ ನದಿ ತಟದಲ್ಲಿ ನಿರ್ಮಿಸಲಾಗಿರುವ 182 ಮೀಟರ್ ಎತ್ತರದ ಸರ್ದಾರ್ ಪಟೇಲರ ಏಕತಾ ಪ್ರತಿಮೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಟೇಲ್ ಅವರ 142 ನೇ ಜನ್ಮ ದಿನಾಚರಣೆಯ ದಿನವಾದ
ಅ.31 ರಂದು ಲೋಕಾರ್ಪಣೆಗೊಳಿಸಿದರು.
https://youtu.be/yMS0M70QQzA
ಈ ಪ್ರತಿಮೆ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಪಡೆದಿದೆ.
ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ ಬಳಿಕ ವಾಯು ಸೇನೆಯ ಮೂರು ವಿಮಾನಗಳು ಹಾರಾಟ ನಡೆಸಿ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳನ್ನು ಹೊರಸೂಸಿತು. ಬಳಿಕ ಎಂಐ-17 ಹೆಲಿಕಾಪ್ಟರ್ ಗಳಿಂದ ಪ್ರತಿಮೆಗೆ ಪುಷ್ಪಗಳ ಸುರಿಮಳೆ ನಡೆಸಲಾಯಿತು.
ಆ ಬಳಿಕ ಮಾತನಾಡಿದ ಪ್ರಧಾನಿ ಮೋದಿ , ಸರ್ದಾರ್ ವಲ್ಲಭಭಾಯ್ ಪಟೇಲರ ಜನ್ಮದಿನವಾದ ಇಂದು ಭಾರತದ ಇತಿಹಾಸವನ್ನು ನಾವು ಮತ್ತೆ ನೆನಪಿಸಿಕೊಳ್ಳಬೇಕಾಗಿದೆ ರಾಜರ ಆಳ್ವಿಕೆಯಲ್ಲಿದ್ದ 550 ಪ್ರಾಂತ್ಯಗಳನ್ನು ಒಗ್ಗಟ್ಟಾಗಿಸಿ ಸಂಯುಕ್ತ ಭಾರತ ಕಟ್ಟಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬುಧವಾರ ಏಕತಾ ದಿವಸವನ್ನು ಆಚರಣೆ ಮಾಡಲಾಗುತ್ತಿದೆ.
ಇತಿಹಾಸವನ್ನು ಗಮನಿಸಿದಾಗ ಅಂದು ಸರ್ದಾರ್ ಪಟೇಲ್ ಅವರು ದಿಟ್ಟತನ, ಏಕತೆಯ ಸಂಕಲ್ಪ ತೋರಿಸದಿದ್ದರೆ, ನಾವಿಂದ ಸೋಮನಾಥ ಹಾಗೂ ಹೈದರಾಬಾದ್ ನ ಚಾರ್ ಮಿನಾರ್ ನೋಡಲು ವೀಸಾ ಹೊಂದಿರಬೇಕಾದ ಪರಿಸ್ಥಿತಿ ಬರುತ್ತಿತ್ತು. ಆದರೆ ಪ್ರಾಂತ್ಯಗಳನ್ನು ಜತೆಗೂಡಿಸಿ ಸಂಯುಕ್ತ ಭಾರತ ಕಟ್ಟಿದ ಇಂಥ ಲೋಹಪುರುಷ ಪಟೇಲರಿಗೆ ನೂರೊಂದು ನಮನಗಳು ಎಂದರು.