Thursday, November 14, 2024
ಉಡುಪಿಸುದ್ದಿ

ಸೌರ ವಿದ್ಯುತ್ ಫಲಕಗಳ ಸಮರ್ಪಣೆ ಮತ್ತು ಯಕ್ಷ ಶಿಕ್ಷಣ ತರಗತಿ ಉದ್ಘಾಟನೆ –ಕಹಳೆ ನ್ಯೂಸ್

ಉಡುಪಿ: ಕಟಪಾಡಿಯ ಎಸ್.ವಿ.ಎಸ್ ವಿದ್ಯಾವರ್ಧಕ ಸಂಘ(ರಿ) ಇದರ ಅಂಗಸAಸ್ಥೆಯಾದ ಎಸ್.ವಿ.ಎಸ್ ಆಂಗ್ಲಮಾಧ್ಯಮ ಶಾಲೆಯ ಕಟ್ಟಡದ ಮೂರನೇ ಮಹಡಿಯಲ್ಲಿ 25 KW ಸಾಮರ್ಥ್ಯದ ಸುಮಾರು 15ಲಕ್ಷ ರೂಪಾಯಿ ವೆಚ್ಚದ, ಮಂಗಳೂರಿನ ಇನ್‌ವೆಂಜರ್ ಟೆಕ್ನಿಲಿಜಿಸ್ ಪ್ರೈ.ಲಿ. ಕಂಪೆನಿಯವರಿAದ ಪ್ರಾಯೋಜಿಸಲ್ಪಟ್ಟ, ಸೌರ ವಿದ್ಯುತ್ ಉತ್ಪಾದನಾ ಫಲಕಗಳ ಅನಾವರಣ ಹಾಗೂ ಸಮರ್ಪಣೆ ಕಾರ್ಯಕ್ರಮವು ಜನಪ್ರಿಯ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ನೆರವೇರಿಸಿ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ ಸತ್ಯೇಂದ್ರ ಪೈಯವರ ನಾಯಕತ್ವವನ್ನು ಪ್ರಶಂಸಿಸಿದರು. ಇದೇ ಸಂದರ್ಭದಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ ನಡೆಸಲ್ಪಡುವ, ಮಾನ್ಯ ಶಾಸಕರ ಮಾತೃಶ್ರೀಯವರ ಟ್ರಸ್ಟ್ನಿಂದ ಪ್ರಾಯೋಜಿಸಲ್ಪಡುವ ಯಕ್ಷಗಾನ ತರಬೇತಿ ಶಿಕ್ಷಣವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸುತ್ತಾ, ಯಕ್ಷಗಾನ ಶಿಕ್ಷಣ ಮಗುವಿನ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕ ಹೊರತು ಮಾರಕವಲ್ಲ ಎಂದು ತಿಳಿಸಿದರು. ಆಡಳಿತಾತ್ಮಕ ತರಬೇತಿ ಶಿಕ್ಷಣವು ಶಾಲಾ ಹಂತದಲ್ಲಿ ದೊರಕಿದರೆ, ನಮ್ಮಲ್ಲಿಯ ವಿದ್ಯಾರ್ಥಿಗಳು ಸಹ IAS,  IPS, KAS ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ನಿರ್ವಹಣೆ ಮಾಡಲು ಸಾಧ್ಯ ಎಂದು ತಿಳಿಸಿ. ಈ ದೆಸೆಯಲ್ಲಿ ಯೋಚಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸಂಚಾಲಕರಾದ ಕೆ.ವಿ ಸತ್ಯೇಂದ್ರ ಪೈಯವರು ಶಾಲೆಯ ಪ್ರತೀ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ದೊರಕುವಂತಾಗಲು ಅಗತ್ಯವಿರುವ ಭೌತಿಕ ಸವಲತ್ತುಗಳನ್ನು ಒದಗಿಸಲು ಶಾಲಾ ಆಡಳಿತ ಮಂಡಳಿ ಬದ್ದವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಎಸ್.ವಿ.ಎಸ್ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಬಿ ಚಂದ್ರಕಾAತ್ ಪೈ, ಶ್ರೀನಿವಾಸ ಕಿಣಿ, ಗಣೇಶ್ ಕಿಣಿ, ನಿತ್ಯಾನಂದ ಶೆಣೈ, ವೆಂಕಟರಮಣ ಭಟ್, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಮೋಹಿನಿ ಎಸ್ ಸಾಲ್ಯಾನ್ ಮತ್ತು ಮುಖ್ಯ ಶಿಕ್ಷಕಿ ಶ್ವೇತಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕಿಯರಾದ ವಿದ್ಯಾ ಮತ್ತು ಶಿಲ್ಪಾ ಕಾರ್ಯಕ್ರಮ ನಿರ್ವಹಿಸಿದರು. ಆರಾಧನಾ ಭಟ್ ಮತ್ತು ವಿಂದ್ಯಾ ಪ್ರಾರ್ಥಿಸಿದರು. ದೇವೇಂದ್ರ ನಾಯಕ್ ಸರ್ವರನ್ನು ಸ್ವಾಗತಿಸಿದರು ಮತ್ತು ಸರ್ವೋತ್ತಮ ಆಚಾರ್ಯ ವಂದನಾರ್ಪಣೆಗೈದರು.