ಬೆಂಗಳೂರು ಮಂದಿಗೆ ಮತ್ತೊಂದು ಶಾಕ್.. ಕಸ ವಿಲೇವಾರಿಗೂ ಕೊಡಬೇಕಿದೆ ಟ್ಯಾಕ್ಸ್! ತಿಂಗಳಿಗೆ ಬರೋಬ್ಬರಿ 100 ಕೋಟಿಯಷ್ಟು ಹೆಚ್ಚುವರಿ ಆದಾಯ ಬಿಬಿಎಂಪಿ ಕೈಗೆ..!! – ಕಹಳೆ ನ್ಯೂಸ್
ಬೆಂಗಳೂರು:- ಬೆಂಗಳೂರಿಗರ ಜೇಬಿಗೆ ಬಿಬಿಎಂಪಿ ಕಸದ ಹೆಸರಲ್ಲಿ ಕತ್ತರಿ ಹಾಕಲು ಹೊರಟಿದೆ. ಕೆಎಂಎಫ್ ಪ್ರತಿ ಪ್ಯಾಕೇಟಿನಲ್ಲಿ 50 ಎಂಎಲ್ ಹೆಚ್ಚುವರಿ ಹಾಲು ನೀಡಿ 2 ರೂಪಾಯಿ ಏರಿಕೆ ಮಾಡಿದೆ. ಇದು ಬೆಂಗಳೂರಿನ ಶ್ರೀಸಾಮಾನ್ಯರ ಕೈ ಸುಡುವಂತೆ ಮಾಡಿದೆ. ಇಂದು ಬೆಳ್ಳಂಬೆಳಗ್ಗೆ ಹಾಲು ಖರೀದಿಗೆ ನಂದಿನಿ ಬೂತ್ ಗೆ ಆಗಮಿಸಿದ ಜನರು ಬೆಲೆ ಏರಿದ್ದು ಕಂಡು ಅವಾಕ್ ಆದರೂ.
ಇದು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಎರಡನೇ ಬಾರಿ ಹಾಲಿನ ಬೆಲೆ ಏರಿಕೆಯಾಗಿದ್ದು, ಒಟ್ಟು 5 ರೂಪಾಯಿ ಏರಿಕೆಯಾಗಿದೆ. ಸರ್ಕಾರದ ಈ ನಡೆಗೆ ಬೆಂಗಳೂರು ಜನರು ಅಸಮಾಧಾನಗೊಂಡಿದ್ದಾರೆ
ಒಂದೆಡೆ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದ್ದು, ಜನರು ಪ್ರತಿದಿನ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಹಾಲು, ತರಕಾರಿ, ಸೊಪ್ಪು ಸೇರಿದಂತೆ ಎಲ್ಲವೂ ದುಬಾರಿಯಾಗ್ತಿರುವ ಹೊತ್ತಲ್ಲೇ ಬಿಬಿಎಂಪಿ ಬೆಂಗಳೂರು ಜನರ ಮೇಲೆ ಮತ್ತೊಂದು ಹೊರೆ ಹೊರೆಸಲು ಮುಂದಾಗಿದೆ. ಶೀಘ್ರವೇ ಬಿಬಿಎಂಪಿ ಬೆಂಗಳೂರು ಜನರಿಂದ ಗಾರ್ಬೇಜ್ ಸೆಸ್ ಕಲೆಕ್ಟ್ ಮಾಡಲು ಮುಂದಾಗ್ತಿದೆ. ಈ ಮೂಲಕ ಸಿಲಿಕಾನ್ ಸಿಟಿ ಮಂದಿ ಪ್ರತಿ ತಿಂಗಳು ಬಿಬಿಎಂಪಿಗೆ 100 ರೂಪಾಯಿ ಹೆಚ್ಚುವರಿಯಾಗಿ ಪಾವತಿ ಮಾಡಬೇಕಿದೆ.
ಹೀಗಾಗಿ ಇದನ್ನು ವಿರೋಧಿಸಿ ಬಿಬಿಎಂಪಿ ಕಚೇರಿಯಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಗಾರ್ಬೇಜ್ ಸೆಸ್ ಅನ್ನು ರದ್ದು ಮಾಡುವಂತೆ ಈ ವೇಳೆ ಆಗ್ರಹಿಸಿದ್ದಾರೆ.
ಬಿಬಿಎಂಪಿ ಹೊಸದಾಗಿ ಜಾರಿ ಮಾಡಲು ಹೊರಟಿರುವ ಗಾರ್ಬೇಜ್ ಸೆಸ್ ಯೋಜನೆಯಿಂದ ಪಾಲಿಕೆ ಖಜಾನೆಗೆ ಕೋಟ್ಯಾಂತರ ರೂಪಾಯಿ ಹರಿದು ಬರಲಿದೆ. ಬೆಂಗಳೂರಲ್ಲಿ ಅಂದಾಜು 35 ಲಕ್ಷಕ್ಕೂ ಅಧಿಕ ಪ್ರಾಪರ್ಟಿಗಳಿವೆ. ಇದರಲ್ಲಿ ವಸತಿ ಹಾಗೂ ವಾಣಿಜ್ಯ ಯೋಗ್ಯವಾದ ಕಟ್ಟಡಗಳಿವೆ. ಇದರಿಂದ ತಿಂಗಳಿಗೆ 100 ರೂಪಾಯಿಯಂತೆ ಮನೆಗಳಿಂದ ಹಾಗೂ ವಿಲೇವಾರಿಗೆ ತಕ್ಕಂತೆ ವಾಣಿಜ್ಯ ಕಟ್ಟಡಗಳಿಂದ ಕಸದ ಸೆಸ್ ಪಾಲಿಕೆ ವಸೂಲಿ ಮಾಡಿದರೆ, ತಿಂಗಳಿಗೆ ಬರೋಬ್ಬರಿ 100 ಕೋಟಿಯಷ್ಟು ಹೆಚ್ಚುವರಿ ಆದಾಯ ಬಿಬಿಎಂಪಿ ಕೈ ಸೇರಿಲಿದೆ.