Monday, January 20, 2025
ಸುದ್ದಿ

ನೂತನ ಡಿಸಿಪಿ ಪೊಲೀಸ್ ಸಿಬ್ಬಂದಿಗಳಿಗೆ ಸಿಹಿ ಸುದ್ದಿ ನೀಡಿದ ಅಣ್ಣಾಮಲೈ – ಕಹಳೆ ನ್ಯೂಸ್

ಬೆಂಗಳೂರು: ಇತ್ತೀಚಿಗೆ ಬೆಂಗಳೂರು ದಕ್ಷಿಣ ವಿಭಾಗಕ್ಕೆ ಬಂದ ನೂತನ ಡಿಸಿಪಿ ಪೊಲೀಸ್ ಸಿಬ್ಬಂದಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಚಳಿ, ಮಳೆ, ಗಾಳಿಯೆನ್ನದೆ ದಿನದ 24 ತಾಸು ಕಾರ್ಯ ನಿರ್ವಹಿಸುವ ತಮ್ಮ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಸಿಬ್ಬಂದಿಗೆ ಡಿಸಿಪಿ ಅಣ್ಣಾಮಲೈ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

ಪೊಲೀಸ್ ಕಾನ್ಸ್ಟೇಬಲ್, ಹೆಡ್ ಕಾನ್ಸ್ಟೇಬಲ್ ಹಾಗೂ ಸಹಾಯಕ ಸಬ್ ಇನ್ಸ್ಪೆಕ್ಟರ್ ಗಳಿಗೆ ವಾರದ ರಜೆಯನ್ನು ಕಡ್ಡಾಯಗೊಳಿಸಿದ್ದಾರಲ್ಲದೇ ವರ್ಷದಲ್ಲಿ 15 ದಿನಗಳ ಕಾಲ ಸಾಂದರ್ಭಿಕ ರಜೆಗೂ ಅನುಮತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಷ್ಟೇ ಅಲ್ಲ, 15 ದಿನಕ್ಕಿಂತ ಹೆಚ್ಚಿನ ಸಾಂದರ್ಭಿಕ ರಜೆ ಬೇಕಿದ್ದರೆ ಡಿಸಿಪಿಯವರನ್ನು ಸಂಪರ್ಕಿಸಲು ಸೂಚನೆ ನೀಡಿದ್ದಾರೆ. ಅಣ್ಣಾಮಲೈ ಅವರ ಈ ಕ್ರಮಕ್ಕೆ ಪೊಲೀಸ್ ಸಿಬ್ಬಂದಿಯಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದ್ದು, ಇದನ್ನು ರಾಜ್ಯದಾದ್ಯಂತ ವಿಸ್ತರಿಸಬೇಕೆಂದು ಮನವಿ ಮಾಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು