2024-25ನೇ ಸಾಲಿನ ನೀನಾಸಂ ರಂಗಶಿಕ್ಷಣ ತರಬೇತಿಗೆ ಆಯ್ಕೆಯಾದ ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ಸುಶ್ಮಿತಾ ಮೋಹನ್- ಕಹಳೆ ನ್ಯೂಸ್
2024-25ನೇ ಸಾಲಿನ ಶಿವಮೊಗ್ಗ ಜಿಲ್ಲೆಯ ಸಾಗರದ ನೀನಾಸಂ ರಂಗಶಿಕ್ಷಣ ತರಬೇತಿಗೆ ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ಸುಶ್ಮಿತಾ ಮೋಹನ್ ಆಯ್ಕೆಯಾಗಿದ್ದಾರೆ.
2020ರಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಪ್ರಸ್ತುತಪಡಿಸಿದ ‘ಸಾಹೇಬ್ರು ಬಂದವೇ’ ನಾಟಕದಲ್ಲಿ ಮೋನಿಕಾ ಪಾತ್ರದಲ್ಲಿ ಅಭಿನಯಿಸಿದ್ದ ಸುಸ್ಮಿತಾ ಶಿವಮೊಗ್ಗ ಜಿಲ್ಲೆಯ ಸಾಗರದ ನೀನಾಸಂ ರಂಗಶಿಕ್ಷಣ ತರಬೇತಿಗೆ ಆಯ್ಕೆಯಾಗಿದ್ದಾರೆ.
ಪ್ರತಿಯೊಬ್ಬ ರಂಗಭೂಮಿ ಕಲಾವಿದನ ಕನಸು ಪ್ರತಿಷ್ಠಿತ ನೀನಾಸಂಗೆ ಆಯ್ಕೆ ಆಗಬೇಕು ಎಂಬುದಾಗಿದೆ. ಆ ನಿಟ್ಟಿನಲ್ಲಿ ಅಷ್ಟೇ ಶ್ರದ್ಧೆ ಮತ್ತು ಪರಿಶ್ರಮದ ಅಗತ್ಯತೆ ಇದ್ದು, ಈಗಾಗಲೇ ಸಾವಿರಾರು ಕಲಾವಿದರು ಇಲ್ಲಿ ತರಬೇತಿ ಪಡೆದು ಉತ್ತಮ ಕಲಾವಿದರಾಗಿ ಹೊರಹೊಮ್ಮಿದ್ದಾರೆ.
ಪ್ರಸ್ತುತ ಕಾಸರಗೋಡಿನ ಜಿಲ್ಲೆ ದೇಲಂಪಾಡಿ ಗ್ರಾಮದ ನಿವಾಸಿ ಬೆಳ್ಳಿಪಾಡಿ ಪೆರುಂದಲಪದವು ಮೋಹನ್ ಮತ್ತು ಸುಶೀಲಾ ಅವರ ದ್ವಿತೀಯ ಪುತ್ರಿಯಾಗಿರುವ ಸುಶ್ಮಿತಾ ಮೋಹನ್ ಅರೆಭಾಷೆ ನಾಟಕ, ಕನ್ನಡ ನಾಟಕ, ತುಳು ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ. ಜೊತೆಗೆ ಶಾರ್ಟ್ ಮೂವಿಗಳಲ್ಲೂ ನಟಿಸಿದ್ದಾರೆ.