Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು : ಕಟ್ಟೆ ಫ್ರೆಂಡ್ಸ್ ಬಲ್ನಾಡು ಇವರ ಆಶ್ರಯದಲ್ಲಿ ಜು.28ರಂದು ತೃತೀಯ ವರ್ಷದ ಕೆಸರ್‍ಡ್ ಒಂಜಿ ದಿನ-2024 ಕೆಸರುಗದ್ದೆ ಕ್ರೀಡಾಕೂಟ – ಕಹಳೆ ನ್ಯೂಸ್

ಪುತ್ತೂರು :  ಕಟ್ಟೆ ಫ್ರೆಂಡ್ಸ್ ಬಲ್ನಾಡು ಇವರ ಆಶ್ರಯದಲ್ಲಿ ಮಹಿಳೆಯರ ಹಾಗೂ ಪುರುಷರ ಸಾರ್ವಜನಿಕ ಹಿಂದೂ ಬಾಂಧವರ ತೃತೀಯ ವರ್ಷದ ಕೆಸರ್‍ಡ್ ಒಂಜಿ ದಿನ-2024 ಕೆಸರುಗದ್ದೆ ಕ್ರೀಡಾಕೂಟವು ಜು.28ರಂದು ಬಲ್ನಾಡು ಶ್ರೀ ಭಟ್ಟಿ ವಿನಾಯಕ ದೇವಸ್ಥಾನದ ಎದುರು ಗದ್ದೆಯಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಲ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪರಮೇಶ್ವರಿ ಭಟ್ ಬಬ್ಬಿಲಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ರವಿಚಂದ್ರ ನೆಲ್ಲಿತ್ತಾಯ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಪ್ರಗತಿಪರ ಕೃಷಿಕರಾದ ಮುತ್ತಪ್ಪ ಗೌಡ ಕಾಂತಿಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಕಾರ್ಯಕ್ರಮದಲ್ಲಿ ಬಲ್ನಾಡು ಶ್ರೀ ಭಟ್ಟಿ ವಿನಾಯಕ ದೇವಸ್ಥಾನದ ಅರ್ಚಕರಾದ ಗೋಪಾಲಕೃಷ್ಣ ಹೊಳ್ಳ, ಪುತ್ತೂರು ನಗರ ಸಭಾ ಸದಸ್ಯೆ ಶ್ರೀಮತಿ ಪೂರ್ಣಿಮ ಚೆನ್ನಪ್ಪ ಗೌಡ, ಬಲ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಚಂದ್ರ ಸಾಜ, ಪ್ರಗತಿಪರ ಕೃಷಿಕ ನಾರಾಯಣ ಗೌಡ ಮದಕ, ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಬಾಲಸುಬ್ರಹ್ಮಣ್ಯ ಕೋಟ್ಯಾನ್, ಗಣೇಶ್ ಬ್ರಹ್ಮರಕೋಡಿ, ಕೃಷ್ಣಪ್ಪ ನಾಯ್ಕ ಅಂಬಟೆಮೂಲೆ, ಪುತ್ತೂರು ನಗರಸಭಾ ಮಾಜಿ ಅಧ್ಯಕ್ಷೆ ಶ್ರೀಮತಿ ಜಯಂತಿ ಬಲ್ನಾಡು, ಪ್ರಗತಿಪರ ಕೃಷಿಕ ಸುರೇಶ್ ಭಟ್ ಬಾಯಾರು, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ (ರಿ.) ಬಲ್ನಾಡು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ಕಾಂತಿಲ ಹಾಗೂ ಮತ್ತಿತ್ತರರು ಭಾಗವಹಿಸಲಿದ್ದಾರೆ.

ಸಂಜೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ಚನಿಲ  ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕರಾದ ಅಶೋಕ್ ಕುಮಾರ್ ರೈ, ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಶ್ವ ಹಿಂದು ಪರಿಷದ್ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಗೋ ರಕ್ಷಕ್ ಪ್ರಮುಖ್ ಮುರಳಿಕೃಷ್ಣ ಹಸಂತ್ತಡ್ಕ, ಮಾಜಿ ಶಾಸಕ ಸಂಜೀವ ಮಠಂದೂರು, ಕಹಳೆ ನ್ಯೂಸ್ ಕೇಬಲ್ ಟಿವಿ ನೆಟ್‍ವರ್ಕ್ ನ ಪ್ರಧಾನ ಸಂಪಾದಕರಾದ ಶ್ಯಾಮ್ ಸುದರ್ಶನ್ ಹೊಸಮೂಲೆ, ಬಿಜೆಪಿ ಮುಖಂಡ, ಉದ್ಯಮಿ ಸಹಜ್ ರೈ ಬಳ್ಳಜ್ಜ, ದಕ್ಷಿಣ ಕನ್ನಡ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಬೊಟ್ಯಾಡಿ, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ (ರಿ.)ಬಲ್ನಾಡು ಇದರ ಅಧ್ಯಕ್ಷ ಸತೀಶ್ ಒಳಗುಡ್ಡೆ, ದ.ಕ. ಜಿಲ್ಲಾ ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ವಿರೂಪಾಕ್ಷ ಭಟ್, ಬೆಂಗಳೂರಿನ ಸಿ.ಎ. ಕೇಶವ ಪ್ರಸಾದ್, ಪ್ರಗತಿಪರ ಕೃಷಿಕ ಆನಂದ ಸುವರ್ಣ ಬಪ್ಪಳಿಗೆ, ವಕೀಲರಾದ ಚಿದಾನಂದ ಬೈಲಾಡಿ, ಪಾಲರ್ ಕನ್ಸ್ ಸ್ಟ್ರಕ್ಷನ್ ನ ವಿಜಯ ಸುಬ್ರಹ್ಮಣ್ಯ, ಬಲ್ನಾಡು ಶ್ರೀಭಟ್ಟಿ ವಿನಾಯಕ ಭಜನಾ ಮಂಡಳಿಯ ಅಧ್ಯಕ್ಷ ಯಶವಂತ ಗೌಡ, ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಬಲ್ನಾಡು ಇದರ ಅಧ್ಯಕ್ಷ ಗಿರೀಶ್ ಕಂಟ್ರಾನಿಮೂಲೆ, ಪಿಡಬ್ಯುಡಿ ಕಾಂಟ್ರಕ್ಟರ್ ಬಾಲಕೃಷ್ಣ ಕಪ್ಪೆಕೆರೆ, ಯುವ ನಾಯಕ ಶರತ್ ಮುದಲಾಜೆ ಹಾಗೂ ಮತ್ತಿತ್ತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.