Tuesday, January 21, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ಪರಿಸರ ಸಹ್ಯ ವಾತಾವರಣವಿದ್ದಾಗ ಜನರು ಆರೋಗ್ಯಪೂರ್ಣ ವಾಗಿ ಬಾಳಬಹುದು.; ಡಾ॥ ಭರತ್ ಶೆಟ್ಟಿ ವೈ-ಕಹಳೆ ನ್ಯೂಸ್

ಎಡಪದವು: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ಉತ್ತರ ಮಂಡಲದ ರೈತ ಮೋರ್ಚ ಇದರ ಆಶ್ರಯದಲ್ಲಿ ಭಾರತೀಯ ಜನತಾಪಾರ್ಟಿ ಮಂಗಳೂರು ನಗರ ಉತ್ತರ ಮಂಡಲ ಇದರ ಸಹಭಾಗಿತ್ವದಲ್ಲಿ ವನ ಮಹೋತ್ಸವ ಹಾಗೂ ಸಸಿ ವಿತರಣಾ ಕಾರ್ಯಕ್ರಮ ಮಂಗಳವಾರ ಬೆಳಿಗ್ಗೆ ಗಂಟೆ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಗೋಳಿದಡಿ, ಎಡಪದವು ಇಲ್ಲಿ ಜರಗಿತು.

ಶಾಸಕರಾದ ಡಾ॥ ಭರತ್ ಶೆಟ್ಟಿ ವೈ., ಉದ್ಘಾಟಿಸಿ ಪರಿಸರ ಸಹ್ಯ ವಾತಾವರಣವಿದ್ದಾಗ ಜನರು ಆರೋಗ್ಯಪೂರ್ಣ ವಾಗಿ ಬಾಳಬಹುದು.ಈ ನಿಟ್ಟಿನಲ್ಲಿ ಎಲ್ಲರೂ ಸ್ವಚ್ಚ,ಹಸಿರು,ಶುದ್ದ ಗಾಳಿಯನ್ನು ಹೊಂದುವAತಾಗಲು ಈ ಮೂಲಕ ಪರಿಸರ ಉಳಿಸಲು ಪ್ರತಿಜ್ಞೆ ತೊಡಬೇಕೆಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿ ಗಳಾಗಿ ಮುರಳೀಧರ ಶೆಟ್ಟಿ ಮಾರ್ಗದರ್ಶಕರು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಎಡಪದವು, ಸುಕೇಶ್ ಮಾಣ್ಯಾ ತಲಕಳ ಕೊಳಂಬೆ, ಅಧ್ಯಕ್ಷರು- ರೈತ ಮೋರ್ಚ ಮಂಗಳೂರು ನಗರ ಉತ್ತರಮಂಡಲ, ಮಹಾ ಶಕ್ತಿ ಕೇಂದ್ರ ಅಧ್ಯಕ್ಷರುಗಳಾದ ಶೋಧನ್ ಅದ್ಯಪಾಡಿ, ಮಹಾಬಲ ಪೂಜಾರಿ,ಮಂಡಲ ಉಪಾಧ್ಯಕ್ಷ ಸೋಹನ್ ಅತಿಕಾರಿ, ಪಂಚಾಯತ್ ಅಧ್ಯಕ್ಷರುಗಳಾದ ಅನುಸೂಯ ಭಂಡಾರಿ, ಪ್ರವೀಣ್ ಆಳ್ವ,ಶಾಲಿನಿ ಕಂದಾವರ,ನಾರಾಯಣ ಪೂಜಾರಿ ಮುಚ್ಚೂರು, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸುಕುಮಾರ್ ಎಡಪದವು, ಸೋಹನ್ ಆಳ್ವ ಮಲ್ಲೂರು,ಬಿಜೆಪಿ ಪ್ರಮುಖರು,ಪದಾಧಿಕಾರಿಗಳು, ಕಾರ್ಯಕರ್ತರು,ಸಾರ್ವಜನಿಕರು ಮತ್ತಿತರರು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು