Wednesday, January 22, 2025
ಬೈಂದೂರುಸುದ್ದಿ

ರಾಹುಲ್ ಗಾಂಧಿ ವಿರುದ್ಧ ಬೈಂದೂರು ಯುವಮೋರ್ಚಾ ಬೃಹತ್ ಪ್ರತಿಭಟನೆ : ಹಿಂದು ಹಿಂಸವಾದಿ ಹೇಳಿಕೆ ಖಂಡನೆ, ರಾಹುಲ್ ಗಾಂಧಿ ರಾಜೀನಾಮೆಗೆ ಆಗ್ರಹ-ಕಹಳೆ ನ್ಯೂಸ್

ತ್ರಾಸಿ : ಹಿಂದುಗಳು ಹಿಂಸವಾದಿಗಳು, ಅಸತ್ಯ ನುಡಿಯುತ್ತಾರೆ ಎಂಬಿತ್ಯಾದಿ ಹಿಂದೂ ವಿರೋಧಿ ಹೇಳಿಕೆ ನೀಡಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯು ಸಂಸತ್ ಭವನದಲ್ಲಿ ಮಾಡಿರುವ ಭಾಷಣ ಖಂಡಿಸಿ, ರಾಜೀನಾಮೆಗೆ ಆಗ್ರಹಿಸಿ ಬೈಂದೂರು ಮಂಡಲ ಯುವಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ ತ್ರಾಸಿಯ ಹೆದ್ದಾರಿ ಸಮೀಪ ನಡೆಯಿತು.

ಸಂಸತ್ ಅಧಿವೇಶನದಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು ಹಿಂದೂ ಧರ್ಮ ಎಂದರೆ ಹಿಂಸಾವಾದಿಗಳು, ಹಿಂದುಗಳೆಂದರೆ ಅಸತ್ಯ ನುಡಿಯುವವರು, ಹಿಂದುಗಳೆಂದರೆ ಅಸತ್ಯ ಹಿಂದುಗಳೆಂದರೆ ದೊಂಬಿ ನಡೆಸುವವರು ಎಂಬ ಹಿಂದೂ ಧರ್ಮದ ಮೇಲೆ ಆರೋಪವನ್ನು ಮಾಡಿರುವುದು ಕಾಂಗ್ರೆಸ್ ನ ಹಿಂದೂ ವಿರೋಧಿ ಮಾನಸಿಕತೆ ತೋರಿಸುತ್ತದೆ. ರಾಹುಲ್ ಗಾಂಧಿಯವರನ್ನು ಈ ಕೂಡಲೇ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಕು ಮತ್ತು ಹಿಂದೂಗಳ ಬಳಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸದಾನಂದ ಉಪ್ಪಿನಕುದ್ರು ಮಾತನಾಡಿ, ರಾಹುಲ್ ಗಾಂಧಿ ಹೇಳಿಕೆಯನ್ನು ಯಾರೂ ಒಪ್ಪಲು ಸಾಧ್ಯವೇ ಇಲ್ಲ. ಅವರು ಈ ಕೂಡಲೇ ಕ್ಷಮೆ ಯಾಚಿಸಲೇ ಬೇಕು ಎಂದು ಒತ್ತಾಯಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೈಂದೂರು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗಜೇಂದ್ರ. ಎಸ್ ಬೇಲೆಮನೆಯವರು ರಾಹುಲ್ ಗಾಂಧಿಯವರ ಈ ಹೇಳಿಕೆಯನ್ನು ಖಂಡಿಸಿ ಮಾತನಾಡಿದರು. ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿಯಾದ ಸುಧಾಕರ್ ಶೆಟ್ಟಿ ನೆಲ್ಯಾಡಿ ಅವರು ಹಿಂದುತ್ವದ ವಿಚಾರಕ್ಕೆ ಯಾರಾದರೂ ಧಕ್ಕೆ ತಂದರೆ ಉಗ್ರ ಹೋರಾಟವನ್ನು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಮಂಡಲ ಉಪಾಧ್ಯಕ್ಷರಾದ ರಾಘವೇಂದ್ರ ನೆಂಪು, ಪ್ರವೀಣ್ ಕೊಡ್ಲಾಡಿ, ಬೈಂದೂರು ಮಹಿಳಾಮೋರ್ಚ ಅಧ್ಯಕ್ಷೆ ಶ್ಯಾಮಲ ಕುಂದರ್ , ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನಕಾರ್ಯದರ್ಶಿ ಅನಿತಾ ಆರ್.ಕೆ., ಜಿ. ಪಂ. ಮಾಜಿ ಸದಸ್ಯೆ ಶೋಭಾ ಪುತ್ರನ್, ಪ್ರೇಮಾ, ರವಿ ಖಾರ್ವಿ ಹೊಸಪೇಟೆ, ಮಿಥುನ್ ದೇವಾಡಿಗ, ಮಂಡಲ ಕಾರ್ಯದರ್ಶಿ ಕರಣ್ ಪೂಜಾರಿ, ಮೋಹನ ಗುಜ್ಜಾಡಿ, ಹರೀಶ್ ಮೇಸ್ತ, ರವಿ ಗಾಣಿಗ, ಬಿಜೆಪಿ SC ಮೋರ್ಚಾ ಅಧ್ಯಕ್ಷ ಅಶೋಕ್ ಎನ್ ಡಿ, ಒಬಿಸಿ ಮೋರ್ಚಾ ಪ್ರಧಾನಕಾರ್ಯದರ್ಶಿ ಮಂಜುನಾಥ್ ದೇವಾಡಿಗ, ರಾಜಶೇಖರ್ ದೇವಾಡಿಗ, ಯುವಮೋರ್ಚಾ ಉಪಾಧ್ಯಕ್ಷರು ವೇಣುಗೋಪಾಲ್ ಅಜ್ರಿ, ಜಗದೀಶ್ ಆಲಂದೂರ್, ಜಯಂತ್ ಗಂಗೊಳ್ಳಿ, ರಾಜೇಶ್ ಎಲ್ ಪಿ, ನವೀನ್ ಕಾಂಚನ್, ಸದಾಶಿವ ಕಂಚಗೋಡು ಮುಂತಾದ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಸಾದ ಪಿ. ಬೈಂದೂರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದು.