Saturday, September 21, 2024
ದಕ್ಷಿಣ ಕನ್ನಡಸುದ್ದಿ

‘ಇಂಟರ್ನ್ ವಿಥ್ ಕ್ಯಾಪ್ಟನ್’ ಇಲ್ಲಿದೆ ಸಂಸದರ ಜೊತೆ ನಿಕಟವಾಗಿ ಕೆಲಸ ಮಾಡುವ ಅವಕಾಶ –ಕಹಳೆ ನ್ಯೂಸ್

ಚುನಾವಣೆಯ ಪೂರ್ವದಲ್ಲಿ ತನಗೆ ತಾನೇ ಹಾಕಿಕೊಂಡಿದ್ದ ‘ನವಯುಗ – ನವಪಥ’ ದ ಕಾರ್ಯಸೂಚಿಯನ್ನು ಪೂರೈಸಲು ಈಗಾಗಲೇ ಹಲವಾರು ಯೋಜನೆಗಳನ್ನು ರೂಪಿಸಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಇದೀಗ ಕ್ಯಾಪ್ಟನ್ಸ್ ಪಲ್ಟನ್ ಎಂಬ ಕಲ್ಪನೆಯೊಂದಿಗೆ ‘ಇಂಟರ್ನ್ ವಿಥ್ ಕ್ಯಾಪ್ಟನ್’ ಎಂಬ ನೂತನ ಕಾರ್ಯಕ್ರಮದ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ.
ಏನಿದು ಇಂಟರ್ನ್ ವಿಥ್ ಕ್ಯಾಪ್ಟನ್ ?
ಇಂಟರ್ನ್ ವಿಥ್ ಕ್ಯಾಪ್ಟನ್ ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಯುವ ಮನಸ್ಸುಗಳಿಗೆ ನಿರ್ಮಿಸಲಾದ ಒಂದು ವೇದಿಕೆ ಎಂದು ಕರೆಯಬಹುದು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೇಕಾದ ಅರ್ಹತೆಗಳು ಹೀಗಿವೆ, ಅಭ್ಯರ್ಥಿಗಳು 21 ರಿಂದ 28 ವರ್ಷದೊಳಗಿನವರಾಗಿದ್ದು ಪದವಿ ಅಥವಾ ಉನ್ನತ ಪದವಿಯನ್ನು ಪಡೆದಿರಬೇಕು. ಸಂಸದರ ಜೊತೆ ಮೂರು ತಿಂಗಳು ಕೆಲಸ ಮಾಡುವ ಕಾಲಾವಕಾಶವಿದ್ದು ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಹಿಡಿತ ಹೊಂದಿರಬೇಕು.
ಇAಟರ್ನ್ಶಿಪ್‌ಗೆ ಅರ್ಜಿ ಸಲ್ಲಿಸುವ ಮುಖಾಂತರ ಅಭಿವೃದ್ಧಿಶೀಲ ದಕ್ಷಿಣ ಕನ್ನಡ ಜಿಲ್ಲೆಯನ್ನು ನಿರ್ಮಾಣ ಮಾಡಲು ಮತ್ತು ಈ ದೃಷ್ಟಿಯಲ್ಲಿ ಕೆಲಸ ಮಾಡಲು ಬಯಸುವ ಯುವ ಮನಸ್ಸುಗಳು ಈ ಅವಕಾಶದ ಸದ್ಬಳಕೆ ಮಾಡಬೇಕು ಎಂದು ಸಂಸದರು ಕೇಳಿಕೊಂಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು