ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಸಿ ಎಲ್ ಆನಂದ ಅವರನ್ನು ರಾಜ್ಯ ಸರ್ಕಾರ ಡಿಢೀರ್ ವರ್ಗಾವಣೆ ಗೊಳಿಸಿದೆ.
ಅವರ ಸ್ಥಾನಕ್ಕೆ ಶಿವಮೊಗ್ಗ ತುಂಗಾ ಮೆಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ರವಿಚಂದ್ರ ನಾಯಕ್ ಅವರನ್ನು ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡ ಸಿ ಎಲ್ ಆನಂದ ಅವರಿಗೆ ಆದೇಶದಲ್ಲಿ ಯಾವುದೇ ಸ್ಥಾನ ತೋರಿಸಿಲ್ಲ.