Sunday, January 19, 2025
ಉಡುಪಿಕೃಷಿಸುದ್ದಿ

ಎಸ್.ವಿ.ಎಸ್ ವಿದ್ಯಾವರ್ಧಕ ಸಂಘ(ರಿ) ಕಟಪಾಡಿ ಮತ್ತು “ಉಸಿರಿಗಾಗಿ ಹಸಿರು” ಸಂಘಟನೆ ಜಂಟಿಯಾಗಿ ಆಯೋಜಿಸಿದ ಹಸಿರು ಅಭಿಯಾನ ಕಾರ್ಯಕ್ರಮ – ಕಹಳೆ ನ್ಯೂಸ್

ಎಸ್.ವಿ.ಎಸ್ ವಿದ್ಯಾವರ್ಧಕ ಸಂಘ(ರಿ) ಕಟಪಾಡಿ ಮತ್ತು “ಉಸಿರಿಗಾಗಿ ಹಸಿರು” ಸಂಘಟನೆ ಜಂಟಿಯಾಗಿ ಆಯೋಜಿಸಿದ ಹಸಿರು ಅಭಿಯಾನ ಕಾರ್ಯಕ್ರಮ ಎಸ್.ವಿ.ಎಸ್ ಆಂಗ್ಲಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಜರಗಿತು. ಕಾಪು ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಹಣ್ಣುಗಳ ಮತ್ತು ಔಷಧೀಯ ಸಸ್ಯಗಳ ವಿತರಣೆ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಂಡಾಗ ಮಾತ್ರ ನಾವು ಉತ್ತಮ ಬದುಕು ಸಾಗಿಸಲು ಸಾಧ್ಯ ಎಂದು ತಿಳಿಸುತ್ತಾ ವಿದ್ಯಾರ್ಥಿಗಳು ಬಾಲ್ಯದಿಂದಲೇ ಈ ಬಗ್ಗೆ ಸೂಕ್ತ ಆಸಕ್ತಿಯನ್ನು ವಹಿಸಿಕೊಳ್ಳುವಂತೆ ಕರೆ ನೀಡಿದರು. ಅತಿಥಿಯಾಗಿ ಆಗಮಿಸಿದ ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶ್ರೀಮತಿ ಗೀತಾಂಜಲಿ ಸುವರ್ಣ ಇವರು ದೇಶದ ಆಸ್ತಿಯಾಗಿರುವ ಮಕ್ಕಳು ಜೀವನದುದ್ದಕ್ಕೂ ಉತ್ತಮ ನಡೆಯ ಮೂಲಕ ಸಮಾಜದ ಆಸ್ತಿಯಾಗಬೇಕೆಂದು ಕರೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಸ್.ವಿ.ಎಸ್ ವಿದ್ಯಾವರ್ಧಕ ಸಂಘ ಕಾರ್ಯದರ್ಶಿ ಹಾಗೂ ಶಾಲಾ ಸಂಚಾಲಕರಾದ ಕೆ ಸತ್ಯೇಂದ್ರ ಪೈಯವರು ಸಮಾಜಮುಖಿ ಕಾರ್ಯಕ್ರಮಗಳಿಗೆ ತಮ್ಮ ಸಂಸ್ಥೆಯಲ್ಲಿ ಸದಾ ಅವಕಾಶವನ್ನು ನೀಡಲಾಗುವುದೆಂದು ಭರವಸೆಯನ್ನು ನೀಡಿದರು. ಕಾರ್ಯಕ್ರಮದ ರೂವಾರಿ, ಡಾ ನಾನಾಸಾಹೇಬ್ ದರ್ಮಾಧಿಕಾರಿ ಪ್ರತಿಷ್ಠಾನದ ಸದಸ್ಯರಾದ ಶ್ರೀ ಸಂತೋಷ್ ಎಂ ಶೆಟ್ಟಿಗಾರ್ ಹಸಿರಿಗಾಗಿ ಉಸಿರು ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕ ಮಾತುಗಳನ್ನಾಡಿದರು.

ಇನ್ನೊರ್ವ ಅತಿಥಿಯಾದ ಉದ್ಯಮಿ ಪಾಂಗಾಳ ಗೋವಿಂದ ಶೆಟ್ಟಿಯವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ ಸುಭಾಷ್ ಬಲ್ಲಾಳ್, ಗಣೇಶ್ ಕಿಣಿ, ಶ್ರೀನಿವಾಸ ವಿ ಕಿಣಿ, ಬಿ ಚಂದ್ರಕಾಂತ್ ಪೈ, ವೆಂಕಟರಮಣ ಭಟ್, ರೊ| ಶಕುಂತಳಾ, ರೊ| ಲಕ್ಷ್ಮೀ, ಶ್ರೀಮತಿ ಮೋಹಿನಿ, ಶ್ರೀಮತಿ ಶ್ವೇತಾ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೇವೇಂದ್ರ ನಾಯಕ್ ನಿರ್ವಹಣೆ ಮಾಡುವುದರೊಂದಿಗೆ ಸರ್ವರನ್ನು ಸ್ವಾಗತಿಸಿದರು. ಶಿಕ್ಷಕಿ ಜಯಲಕ್ಷ್ಮೀಯವರು ವಂದನಾರ್ಪಣೆಗೈದರು.